ರಾಯಲ್ ಎನ್ ಫೀಲ್ಡ್ ಡೀಸೆಲ್ ಬುಲೆಟ್ ಬೇಕೆ?

Royal Enfield Gets Back To Diesel Bullet
ಬುಲೆಟ್ ಪ್ರಿಯರ ನೆಚ್ಚಿನ ಬಂಡಿ ರಾಯಲ್ ಎನ್ ಫೀಲ್ಡ್ ಗತ್ತು ಹೆಚ್ಚಾಗಲಿದೆ. ಈ ಬುಲೆಟಿಗೆ ಇನ್ನು ಡೀಸೆಲ್ ಎಂಜಿನ್ ಇರಲಿದೆ. ರಾಯಲ್ ಎನ್ ಫೀಲ್ಡ್ ಕಂಪನಿಯು ಬುಲೆಟ್ ಬೈಕ್ ಗಳಿಗೆ ಹೊಸ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸಲು ಯೋಜಿಸಿದೆ.

ಕಂಪನಿಯು 750 ಸಿಸಿ ಎಂಜಿನ್ ಡೀಸೆಲ್ ಬುಲೆಟ್ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. ಕಂಪನಿಯು ಈ ಹಿಂದೆಯೇ ಡೀಸೆಲ್ ಎಂಜಿನ್ ಬುಲೆಟ್ ಅಭಿವೃದ್ಧಿಪಡಿಸಿತ್ತು. ಆದರೆ ಇಂಧನ ಮಾಲಿನ್ಯ ಕಠಿಣ ನೀತಿಗೆ ಆ ಬುಲೆಟ್ ಸೂಕ್ತವಾಗಿರಲಿಲ್ಲ. ಹಾಗಾಗಿ ಡೀಸೆಲ್ ಬುಲೆಟ್ ಉತ್ಪಾದನೆ ಸ್ಥಗಿತವಾಗಿತ್ತು.

ಇದೀಗ ವರದಿಯೊಂದರ ಪ್ರಕಾರ ಕಂಪನಿಯು ಎರಡು ಸಿಲಿಂಡರ್ ನ ಡೀಸೆಲ್ ಬುಲೆಟ್ ಅಭಿವೃದ್ಧಿಪಡಿಸುತ್ತಿದೆ ಎನ್ನಲಾಗಿದೆ. ಕಂಪನಿಯ 350 ಸಿಸಿ ಮತ್ತು 500 ಸಿಸಿ ಬುಲೆಟ್ ಗಳಿಗೆ ರಸ್ತೆಯಲ್ಲಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲ. ಆದರೆ ಕವಾಸಕಿ ಮತ್ತು ಹ್ಯೊಸೊಂಗ್ ಬೈಕ್ ಗಳಿಂದ ಇನ್ನು ಮುಂದೆ ಸ್ಪರ್ಧೆ ಎದುರಾಗಲಿದೆ.

ಡೀಸೆಲ್ ಚಾಲೀತ ಎಂಜಿನ್ ಹೊಸ ಅನ್ವೇಷಣೆಯಲ್ಲ. ಆದರೆ ಸದ್ಯದ ದುಬಾರಿ ಪೆಟ್ರೋಲ್ ದರ ಗ್ರಾಹಕರನ್ನು ಡೀಸೆಲ್ ನತ್ತ ತಿರುಗಿಸಿದೆ. ಹೆಚ್ಚಿನ ಜನರು ಡೀಸೆಲ್ ಎಂಜಿನ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನೋಡಿದರೆ ನೂತನ ಡೀಸೆಲ್ ಬುಲೆಟ್ ಗೆ ಅತ್ಯುತ್ತಮ ಬೇಡಿಕೆ ಕಾಣುವ ನಿರೀಕ್ಷೆಯಿದೆ.

ಜನರು ಡೀಸೆಲ್ ಬುಲೆಟ್ ಇಷ್ಟಪಡಲು ಇನ್ನಷ್ಟು ಕಾರಣಗಳನ್ನು ಕೊಡಬಹುದು. ಪ್ರತಿಲೀಟರ್ ಗೆ ಸುಮಾರು 70 ಕಿ.ಮೀ. ಮೈಲೇಜ್ ನೀಡುವ ಇಂತಹ ಬುಲೆಟ್ ಗ್ರಾಹಕರಿಗೆ ಇಷ್ಟ.

ನೂತನ ಡೀಸೆಲ್ ಬುಲೆಟನ್ನು ಕಂಪನಿಯ ಚೆನ್ನೈ ಸಮೀಪದ ಘಟಕದಲ್ಲಿ ಉತ್ಪಾದಿಸಲಾಗುವುದಂತೆ. ಸದ್ಯ ರಾಯಲ್ ಎನ್ ಫೀಲ್ಡ್ ಕಂಪನಿಯ ಕ್ಲಾಸಿಕ್ 350 ಮತ್ತು ಕ್ಲಾಸಿಕ್ 500 ಬುಲೆಟ್ ಗಳು ದೊರಕುತ್ತವೆ. ಎಲೆಕ್ಟ್ರಾ ಮತ್ತು ಥಂಡರ್ ಬರ್ಡ್ ಬುಲೆಟ್ ಗಳಿಗೂ ಅತ್ಯಧಿಕ ಬೇಡಿಕೆಯಿದೆ. ಒಂದು ವರದಿಯ ಪ್ರಕಾರ ನೂತನ ಡೀಸೆಲ್ ಬುಲೆಟ್ 2012ರ ದೆಹಲಿ ವಾಹನ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿದೆಯಂತೆ!

More from DriveSpark

Article Published On: Monday, October 3, 2011, 10:32 [IST]
English summary
Royal Enfield is planning to develop a diesel engines for its motorcycles and enter new segments in motorcycles. These moves are being considered to make the brand more competitive in the face of international motorcycle brands entering the Indian market. The Chennai based company is looking at developing 750cc engines for its motorcycles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+