ಹರೆಯದವರಿಗೆ ಜೀನಿಯಸ್ ಸ್ಕೂಟರ್ ತಂದ ಲೊಹಿಯಾ

Genius electric bike for teenagers
ನವದೆಹಲಿ, ಅ 07: ಎಲೆಕ್ಟ್ರಿಕ್ ಬೈಕ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಲೊಹಿಯಾ ಆಟೋ ಇಂಡಸ್ಟ್ರೀಸ್ ನೂತನ ಎಲೆಕ್ಟ್ರಿಕ್ ಸ್ಕೂಟರ್ ಜೀನಿಯಸ್ ಹೊರತಂದಿದೆ. ಕಂಪನಿಯು ಇದಕ್ಕೂ ಮುನ್ನ "ಫೇಮ್" ಮತ್ತು "ಓಮಾ" ಅನ್ನೋ ಇ-ಬೈಕ್ ಹೊರತಂದು ಜನಪ್ರಿಯವಾಗಿತ್ತು.

ನೂತನ ಜೀನಿಯಸ್ ಟೀನೆಜ್ ಸ್ಕೂಟರ್. ಆಕರ್ಷಕ ಫೀಚರು ಮತ್ತು ಟ್ರೆಂಡಿ ವಿನ್ಯಾಸದ ಮೂಲಕ ಹರೆಯದ ಯುವತಿಯರನ್ನು ಸೆಳೆಯುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ. ಇದು ಹಗುರ ಸ್ಕೂಟರ್ ಆಗಿದ್ದು, ಹರೆಯದ ಯುವಕ ಯುವತಿಯರಿಗೆ ಹೆಚ್ಚು ಸೂಕ್ತವಾಗಿದೆ ಎಂದು ಕಂಪನಿ ಹೇಳಿದೆ.

"ನೂತನ ಎಲೆಕ್ಟ್ರಿಕ್ ಬೈಕ್ ಯುವ ತಲೆಮಾರಿಗೆ ಸೂಕ್ತವಾಗಿದೆ. ಇದು ಪರಿಸರ ಸ್ನೇಹಿ ಮತ್ತು ಆರಾಮದಾಯಕತೆಯ ಫೀಚರುಗಳನ್ನು ಹೊಂದಿದೆ" ಎಂದು ಲೊಹಿಯಾ ಆಟೋ ಇಂಡಸ್ಟ್ರಿಸ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಆಯುಶ್ ಲೊಹಿಯಾ ಹೇಳಿದ್ದಾರೆ.

ಪೋಷಕರಿಗೆ ತಮ್ಮ ಮಕ್ಕಳ ಸುರಕ್ಷತೆಯ ಸವಾರಿಗೆ ಸೂಕ್ತವಾದ ಸ್ಕೂಟರ್ ಹೊರತುವ ಗುರಿ ಕಂಪನಿಗಿತ್ತು. ನೂತನ ಜೀನಿಯಸ್ ಸ್ಕೂಟರ್ ದೆಹಲಿ ಎಕ್ಸ್ ಶೋರೂಂ ದರ 25,495 ರುಪಾಯಿ. ಇದು ಕೆಂಪು, ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ದೊರಕುತ್ತದೆ.

More from DriveSpark

Article Published On: Friday, October 7, 2011, 12:32 [IST]
English summary
Leading electric bike manufacturers in India, Lohia Auto Industries launched e-bike 'Genius" for teenagers. Genius e-bike Price is Rs. 25,495(ex-showroom Delhi)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+