ಬ್ಯೂಟಿ ಸವಾರಿಗೆ ಹೊಸ ಅಗ್ಗದ ಸ್ಕೂಟಿ ಸ್ಟ್ರೀಕ್

ಅದರಲ್ಲೂ ಹೆಚ್ಚಿನವರಿಗೆ ಸ್ಕೂಟಿ ಸ್ಟ್ರೀಕ್ ಇಷ್ಟ. ಹಗುರ, ಆರಾಮದಾಯಕತೆ ಇತ್ಯಾದಿ ಕಾರಣಗಳಿಂದ ಹೆಚ್ಚಿನವರು ಟಿವಿಎಸ್ ಸ್ಕೂಟಿ ಸ್ಟ್ರೀಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಸ್ಕೂಟಿ ಪ್ರಿಯರಿಗೆ ಸಂತೋಷದ ಸುದ್ದಿ ಏನಪ್ಪ ಅಂದ್ರೆ ಟಿವಿಎಸ್ ಸ್ಟ್ರೀಕ್ ಪರಿಷ್ಕೃತ ಆವೃತ್ತಿ ಮಾರುಕಟ್ಟೆಗೆ ಬಂದಿದೆ.
ಕಂಪನಿಯು ಸ್ಕೂಟಿ ಸ್ಟ್ರೀಕ್ ಫೇಸ್ ಲಿಫ್ಟೆಡ್ ಅಡಿಷನ್ ಹೊರತಂದಿದೆ. ನೂತನ ಸ್ಕೂಟಿ ಸ್ಟ್ರೀಕ್ ದರ 39,225 ರುಪಾಯಿ. ಅಂದ್ರೆ ಸದ್ಯ ರಸ್ತೆಯಲ್ಲಿರುವ ಹಳೆಯ ಆವೃತ್ತಿಯಷ್ಟೇ ದರವಿದೆ. ದರ ಅಷ್ಟೇ ಇದ್ದರೂ ಹೊಸ ಸ್ಟ್ರೀಕ್ ಹೆಚ್ಚು ಆಕರ್ಷಕವಾಗಿದೆ ಅನ್ನೋದು ನಿಜ.
ಹೊಸ ಸ್ಕೂಟಿ ನೂತನ ಬಾಡಿ ಗ್ರಾಫಿಕ್ಸ್ ಮತ್ತು ವಿನೂತನ ಕಪ್ಪು ಪೇಂಟ್ ಮೂಲಕ ಹೆಚ್ಚು ಆಕರ್ಷಕವಾಗಿದೆ. ಇದರ ಸೀಟು ಕೂಡ ಮರುವಿನ್ಯಾಸ ಮಾಡಲಾಗಿದ್ದು ಹೆಚ್ಚು ಆರಾಮವಾಗಿ ಕುಳಿತು ರೈಡ್ ಮಾಡಬಹುದಾಗಿದೆ.
ಟೆಕ್ ಮಾಹಿತಿ: ಸ್ಕೂಟಿ ಸ್ಟ್ರೀಕ್ 90 ಸಿಸಿ ಎಂಜಿನ್ ಹೊಂದಿದ್ದು 5 ಹಾರ್ಸ್ ಪವರ್ ನೀಡುತ್ತದೆ. ರಸ್ತೆಯಲ್ಲಿ ಹೆಚ್ಚು ಗ್ರಿಪ್ ದೊರಕಲು ಹಿಂದಿನ ಚಕ್ರ ಹೆಚ್ಚು ಅಗಲವಿದೆ. ಆದರೆ ಇದರ ಪ್ರತಿಸ್ಪರ್ಧಿಗಳಾದ ಹೋಂಡಾ ಆಕ್ಟಿವಾ ಮತ್ತು ಸುಜುಕಿ ಆಕ್ಸೆಸ್ ನಷ್ಟು ಇದು ಹಾರ್ಸ್ ಪವರ್ ನೀಡುವುದಿಲ್ಲ. ಆದರೆ ಇದು ಹಗುರವಾಗಿರುವುದರಿಂದ ಹೆಚ್ಚು ಯುವತಿಯರು ಇದನ್ನು ಇಷ್ಟಪಡುತ್ತಾರೆ.
ಸ್ಕೂಟಿ ಸ್ಟ್ರೀಕ್ ನಲ್ಲಿರುವ ಕೆಲವು ಫೀಚರುಗಳನ್ನೂ ನೀವು ಇಷ್ಟಪಡಬಹುದು. ಅಂದ್ರೆ ಮೊಬೈಲ್ ಚಾರ್ಜರ್, ಲಾಕ್ ಮಾಡಬಹುದಾದ ಬಾಕ್ಸ್, ಸುಲಭವಾಗಿ ಹಾಕಬಹುದಾದ ಮಧ್ಯದ ಸ್ಟಾಂಡ್ ಇತ್ಯಾದಿ ಫೀಚರುಗಳು ಹೆಚ್ಚು ಜನರಿಗೆ ಇಷ್ಟವಾಗಿವೆ.


Click it and Unblock the Notifications








