ಈಜಿಪ್ಟ್ ರಸ್ತೆಗೆ ಬಜಾಜ್ ಬಾಕ್ಸರ್ 150 ಬೈಕ್

ನೂತನ ಬಾಕ್ಸರ್ ಬೈಕನ್ನು ಈಜಿಪ್ಟ್ ರಸ್ತೆಗೆ ಪೂರಕವಾಗಿ ಮರುವಿನ್ಯಾಸ ಮಾಡಲಾಗಿದೆ. ಕಂಪನಿಯು ಈಜಿಪ್ಟ್ ಪಿರಾಮಿಡ್ ವರೆಗೆ ಬೈಕ್ ಮ್ಯಾರಥಾನ್ ಕೂಡ ಆಯೋಜಿಸಿದೆ. ಇಲ್ಲಿ ಬಾಕ್ಸರ್ ಬೈಕ್ ಸವಾರರು 13 ದಿನಗಳ ಕಾಲ, ಸುಮಾರು 2,500 ಕಿ.ಮೀ. ಪ್ರಯಾಣ ಮಾಡಲಿದ್ದಾರೆ. ಬಾಕ್ಸರ್ ಬೈಕಿನ ಗುಣಮಟ್ಟ ಪ್ರದರ್ಶನ ಈ ಮ್ಯಾರಥಾನ್ ಹಿಂದಿನ ಗುಟ್ಟು.
"ನೂತನ ಬಾಕ್ಸರ್ 150 ಬೈಕ್ ಈಜಿಪ್ಟಿನ ಮಧ್ಯಮ ವರ್ಗದವರಿಗೆ ಮತ್ತು ಕಡಿಮೆ ಆದಾಯ ಇರುವರಿಗೆ ಖರೀದಿಸಲು ಸಾಧ್ಯವಾಗಲಿದೆ. ಈ ಬೈಕನ್ನು ಅಲ್ಲಿನ ರಸ್ತೆಗೆ ಸೂಕ್ತವಾಗಿ ಅಭಿವೃದ್ಧಿಪಡಿಸಲಾಗಿದೆ" ಎಂದು ಬಜಾಜ್ ಆಟೋ ಇಂಡಿಯಾ ಮಾರುಕಟ್ಟೆ ವಿಭಾಗದ ನಿರ್ದೇಶಕ ಧರ್ಮೇಶ್ ಬ್ಯಾನರ್ಜಿ ಹೇಳಿದ್ದಾರೆ.
ಭಾರತದಲ್ಲಿ ನೂತನ ಬಾಕ್ಸರ್: ದೇಶದ ರಸ್ತೆಗೆ ಕೆಲವು ತಿಂಗಳ ಹಿಂದೆ ಬಾಕ್ಸರ್ 150 ಸಿಸಿ ಬೈಕ್ ಆಗಮಿಸಿತ್ತು. ಇದರ ಎಕ್ಸ್ ಶೋರೂಂ ದರ 43 ಸಾವಿರ ರು. ಮತ್ತು ಆನ್ ರೋಡ್ ದರ 48,700 ರುಪಾಯಿ ಆಗಿದೆ.
ಗಟ್ಟಿಮುಟ್ಟಾದ ಚಾಸೀಸ್, ಪವರ್ ಫುಲ್ ಹೆಡ್ ಲೈಟ್ಸ್ ಇತ್ಯಾದಿ ಹಲವು ಫೀಚರ್ ಗಳಿವೆ. ನೂತನ ಬಾಕ್ಸರ್ ಎಂಜಿನ್ 11-12ರಷ್ಟು ಹಾರ್ಸ್ ಪವರ್ ನೀಡುತ್ತದೆ.


Click it and Unblock the Notifications








