ಟಿವಿಎಸ್ ಸ್ಟಾರ್ ಸಿಟಿ ಜಾಹೀರಾತಿನಲ್ಲಿ ಧೋನಿಸಾಕ್ಷಿ

ಟಿವಿಎಸ್ ಕಂಪನಿಯ ಬ್ರಾಂಡ್ ರಾಯಭಾರಿ ಮಹೀಂದ್ರ ಸಿಂಗ್ ಧೋನಿ. ನೂತನ StaR City ಬೈಕಿನಲ್ಲಿ ಧೋನಿ ಹಸ್ತಾಕ್ಷರವಿದೆ. ಹಬ್ಬದ ಸೀಸನಿನಲ್ಲಿ ಟಿವಿಎಸ್ ಬೈಕ್ ಮಾರಾಟ ಉತ್ತೇಜಿಸಲು ಈ ವಿಶೇಷ ಜಾಹೀರಾತನ್ನು ಚಿತ್ರಿಕರಿಸಿದ್ದಾರೆ. ಇದಕ್ಕೆ ಧೋನಿ ದಂಪತಿಗಳು ಸಾಕ್ಷಿಯಾಗಿದ್ದಾರೆ.
ಈ ವಿಶೇಷ ನುಡಿಚಿತ್ರ ಜಾಹೀರಾತನ್ನು ಚಿತ್ರಿಸಿದ್ದು ಅನಿವಾಸಿ ಭಾರತೀಯರಾದ ರಾಜ್ ನಿಡಿಮೊರ್ ಮತ್ತು ಕೃಷ್ಣ ಡಿಕೆ. ಇವರು ಚಲನಚಿತ್ರ ನಿರ್ದೇಶಕರಾಗಿದ್ದಾರೆ.
"ಕ್ರಿಕೆಟ್ ತಂಡ ಸೇರಿದಂದಿನಿಂದ ಧೋನಿ ಟಿವಿಎಸ್ ಜೊತೆಗಿದ್ದಾರೆ. ಜಾಹೀರಾತಿನಲ್ಲಿ ಧೋನಿ ಪತ್ನಿ ಸಾಕ್ಷಿಯನ್ನು ಸೇರಿಸಿದ ಐಡಿಯಾಕ್ಕಾಗಿ ಅಭಿನಂದಿಸುತ್ತೇನೆ. ಮಹೀಂದ್ರ ಸಿಂಗ್ ಗೆ ಟಿವಿಎಸ್ ತನ್ನ ಕುಟುಂಬದಂತೆ" ಎಂದು ರಿತಿ ಸ್ಪೋರ್ಟ್ಸ್ ಮ್ಯಾನೆಜ್ ಮೆಂಟಿನ ಅಧ್ಯಕ್ಷರಾದ ಅರುಣ್ ಪಾಂಡೆ ಹೇಳಿದ್ದಾರೆ.
"ಜಾಹೀರಾತಿನಲ್ಲಿ ಧೋನಿಯೊಂದಿಗೆ ಸಾಕ್ಷಿ ಇರುವುದು ಕೇಕಿನಲ್ಲಿ ಚೆರ್ರಿ ಹಣ್ಣು ಇದ್ದಂತೆ" ಎಂದು ಅನಿಲ್ ಥೋಮಸ್ ಹೇಳಿದ್ದಾರೆ. ಅವರು ಮೆಕಾನ್ ಎರಿಕ್ ಸನ್ ಕಂಪನಿಯ ಪ್ರಾದೇಶಿಕ ಕ್ರೀಯಾತ್ಮಕ ನಿರ್ದೇಶಕರಾಗಿದ್ದಾರೆ. ನೂತನ ಲಿಮಿಟೆಡ್ ಅಡಿಶನ್ ಬೈಕಿಗೆ 5 ವರ್ಷದ ವ್ಯಾರೆಂಟಿಯಿದೆ. ಇದು ದೇಶದ್ಯಾಂತ ಇರುವ ಟಿವಿಎಸ್ ಡೀಲರುಗಳಲ್ಲಿ ದೊರಕಲಿದೆ.


Click it and Unblock the Notifications








