ಶೀಘ್ರದಲ್ಲಿ ಪರಿಷ್ಕೃತ ಮಹೀಂದ್ರ ಡ್ಯೂರೊ ಸ್ಕೂಟರ್ ರಸ್ತೆಗೆ

Posted By:
Facelifted Mahindra Duro Powerscooter on December 2011
ಮಹೀಂದ್ರ ಕಂಪನಿಯ ಪವರ್ ಸ್ಕೂಟರ್ ಡ್ಯೂರೊ ಹೆಚ್ಚಿನವರಿಗೆ ಅಚ್ಚುಮೆಚ್ಚು. ಇದೀಗ ನೂತನ ಡ್ಯೂರೊ ಅಥವಾ ಪರಿಷ್ಕೃತ ಡ್ಯೂರೊ ಆವೃತ್ತಿ ರಸ್ತೆಗಿಳಿಯಲು ಕ್ಷಣಗಣನೆ ಆರಂಭವಾಗಿದೆ. ಕಂಪನಿಯು ನೂತನ ಡ್ಯೂರೊ ಸ್ಕೂಟರನ್ನು ಕೆಲವು ರಸ್ತೆಯಲ್ಲಿ ಪರೀಕ್ಷಾರ್ಥ ರೈಡ್ ಆರಂಭಿಸಿದೆ ಎಂದು ವರದಿಗಳು ಹೇಳಿವೆ.

ಒಂದು ವರದಿಯ ಪ್ರಕಾರ ನೂತನ ಡ್ಯೂರೊ ಪರಿಷ್ಕೃತ ಆವೃತ್ತಿ ಮುಂದಿನ ತಿಂಗಳು ಅಂದರೆ ಡಿಸೆಂಬರ್ ನಲ್ಲಿ ರಸ್ತೆಗಿಳಿಯಲಿದೆಯಂತೆ. ಹೊಸ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಸೇರಿದಂತೆ ಹಲವು ಹೊಸ ಫೀಚರುಗಳನ್ನು ನೂತನ ಡ್ಯೂರೊದಲ್ಲಿ ನಿರೀಕ್ಷಿಸಬಹುದಾಗಿದೆ.

ನೂತನ ಟೆಲಿಸ್ಕೋಪಿಕ್ ಅಳವಡಿಸಿದರೆ ಇದು ಸುಜುಕಿ ಆಕ್ಸೆಸ್ 125 ಮತ್ತು ಟಿವಿಎಸ್ ವೆಗೊ ಸ್ಕೂಟರ್ ಸಾಲಿಗೆ ಸೇರಲಿದೆ. ಇದು ಆರಾಮದಾಯಕ ಸವಾರಿಗೆ ಹೆಚ್ಚು ಸೂಕ್ತ. ಆದರೆ ನೂತನ ಮಹೀಂದ್ರ ಡ್ಯೂರೊದಲ್ಲಿ ಹಳೆಯ ಎಂಜಿನ್ ಮತ್ತು ಸಿಸಿ ಉಳಿಯಲಿದೆ. ಅಂದರೆ ನೂತನ ಸ್ಕೂಟರ್ 125 ಸಿಸಿ ಫೋರ್ ಸ್ಟ್ರೋಕ್ ಎಂಜಿನ್ ಹೊಂದಿರಲಿದೆ. ಇದು 8 ಅಶ್ವಶಕ್ತಿ ಮತ್ತು 9 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಹೆಚ್ಚಿನ ಮಾಹಿತಿಗೆ ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ

English summary
Mahindra thinking about Mahindra Duro facelifted version. This upgraded version of Dure will launch on December 2011.
Story first published: Wednesday, November 23, 2011, 15:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark