ಕೆಟಿಎಂ 200 ಡ್ಯೂಕ್ ಬೈಕ್, ದೇಶದ ರಸ್ತೆ ಗಡಗಡ

ಬಜಾಜ್ ಕೆಟಿಎಂ ಮೈತ್ರಿ ಮೂಲಕ ದೇಶದ ಗ್ರಾಹಕರ ಕೈಗೆ ಡ್ಯೂಕ್ ಬೈಕ್ ಕೊಡಲು ಕಂಪನಿ ಸಿದ್ಧವಾಗಿದೆ. ಬಜಾಜ್ ಕಂಪನಿಯ ಚಕನ್ ಘಟಕದಲ್ಲಿ 200 ಸಿಸಿಯ ಡ್ಯೂಕ್ ಬೈಕ್ ಉತ್ಪಾದನೆ ಮಾಡಲಾಗುವುದಂತೆ. ಅಂದ ಹಾಗೆ ಈ ಬೈಕನ್ನು ಈ ವರ್ಷ ಮಿಲನಿನಲ್ಲಿ ನಡೆದ EICMA ವಾಹನ ಪ್ರದರ್ಶನದಲ್ಲಿ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು.
ನೂತನ ಕೆಟಿಎಂ 200 ಡ್ಯೂಕ್ ಬೈಕ್ ನಾಲ್ಕು ಕವಾಟದ, ಫ್ಯೂಯಲ್ ಇಂಜೆಕ್ಟೆಡ್, ಲಿಕ್ವಿಡ್ ಕೂಲ್ಡ್ 200 ಸಿಸಿ ಎಂಜಿನ್ ಹೊಂದಿರಲಿದೆ. ಇದು ಹಗುರ ಬಿಡಿಭಾಗಗಳನ್ನು ಹೊಂದಿದ್ದು, ವೇಗ ಮತ್ತು ಆರಾಮದಾಯಕ ಸವಾರಿಗೆ ಸೂಕ್ತವಾಗಿದೆ. ಕೆಟಿಎಂ ಹಾರ್ಸ್ ಪವರ್ ಬೈಕ್ ಪ್ರೀಯರು ಡ್ಯೂಕ್ ಬೈಕ್ ಕೊಳ್ಳಲು ದುಡ್ಡು ರೆಡಿಮಾಡಿಕೊಳ್ಳಬಹುದು. ಈ ಬೈಕಿಗೆ ದೇಶದಲ್ಲಿ ಎಷ್ಟು ದರವಿರಲಿದೆ ಎಂಬ ಮಾಹಿತಿ ಇನ್ನೂ ದೊರಕಿಲ್ಲ.


Click it and Unblock the Notifications








