ರಾಯಲ್ ಎನ್ ಫೀಲ್ಡ್ ಟೀಷರ್ಟ್, ಕ್ಯಾಪ್, ಪ್ಯಾಂಟ್ ಬೇಕೆ?

ಇದೇ ಹಾದಿಯಲ್ಲಿ ಸಾಗಲು ಬುಲೆಟ್ ಕಂಪನಿ ರಾಯಲ್ ಎನ್ ಫೀಲ್ಡ್ ಕೂಡ ನಿರ್ಧರಿಸಿದೆ. ಅಂದರೆ ಕಂಪನಿಯು ರಾಯಲ್ ಎನ್ ಫೀಲ್ಡ್ ಗೇರ್ ಆಕ್ಸೆಸರಿ ಹೊರತರಲು ನಿರ್ಧರಿಸಿದೆ. ರಾಯಲ್ ಎನ್ ಫೀಲ್ಡ್ ಗೇರ್ ಬ್ರಾಂಡ್ ಮೂಲಕ ಟೀಷರ್ಟ್, ಪ್ಯಾಂಟ್, ಶೂ, ಕ್ಯಾಪ್, ಹೆಲ್ಮೆಟ್ ಹೊರತರಲು ನಿರ್ಧರಿಸಿದೆ.
ರಾಯಲ್ ಎನ್ ಫೀಲ್ಡ್ ಕಂಪನಿಯು ತನ್ನ ಬ್ರಾಂಡಿನ ಆಕ್ಸೆಸರಿಗಳನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲು ನಿರ್ಧರಿಸಿದೆ. ರಾಯಲ್ ಎನ್ ಫೀಲ್ಡ್ ಬುಲೆಟ್ ಗಳಿಗೆ ಇದು ಅತ್ಯಧಿಕ ಬೇಡಿಕೆಯಿದೆ. ಆದರೆ ಕಡಿಮೆ ಪೂರೈಕೆಯ ಹಿನ್ನಲೆಯಲ್ಲಿ ಇಂತಹ ಉತ್ಪನ್ನಗಳನ್ನು ಖರೀದಿಸುವುದು ಕಷ್ಟ. ಅಂತವರು ರಾಯಲ್ ಎನ್ ಫೀಲ್ಡ್ ನ ಇಂತಹ ಆಕ್ಸೆಸರಿ ಉತ್ಪನ್ನಗಿಗೆ ತೃಪ್ತಿಪಡಬಹುದು.
ಜನವರಿ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಕಂಪನಿಯು ನೂತನ ಆಕ್ಸೆಸರಿ ಉತ್ಪನ್ನಗಳನ್ನು ಹೊರತರಲಿದೆ. ಜನವರಿ ನಂತರ ಈ ಆಕ್ಸೆಸರಿಗಳು ರಾಯಲ್ ಎನ್ ಫೀಲ್ಡ್ ಶೋರೂಂಗಳಲ್ಲಿ ಬ್ರಾಂಡೆಡ್ ಆಕ್ಸೆಸರಿ ದೊರಕಲಿದೆ. ಹೀಗಾಗಿ ಇನ್ನು ಮುಂದೆ ರಾಯಲ್ ಎನ್ ಫೀಲ್ಡ್ ಬುಲೆಟ್ ಶೋರೂಂಗೆ ಹೋಗಿ "ಟೀಷರ್ಟ್" ಕೊಡಿ ಎನ್ನಬಹುದು.


Click it and Unblock the Notifications








