ಕವಾಸಕಿ ನಿಂಜಾ 300ಆರ್: ಮಾಹಿತಿ ಬಹಿರಂಗ

ಜಪಾನಿನ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಕವಾಸಿಕಿ ಫ್ಯಾಕ್ಟರಿಯಿಂದ ನೂತನ ನಿಂಜಾ 300ಆರ್ ಶೀಘ್ರದಲ್ಲಿ ಆಗಮಿಸುವ ನಿರೀಕ್ಷೆಯಿದೆ. ಇದು ನಿಂಜಾ 250ಆರ್ ಗಿಂತ ದೊಡ್ಡ ಎಂಜಿನ್ ಹೊಂದಿದ್ದು, ಹೆಚ್ಚು ದಕ್ಷತೆ ಮತ್ತು ಶಕ್ತಿ ಹೊಂದಿರಲಿದೆ.

ನೂತನ ನಿಂಜಾ 300ಆರ್ ನ 296 ಸಿಸಿಯ ಎಂಜಿನ್ 11 ಸಾವಿರ ಆವರ್ತನಕ್ಕೆ 39 ಅಶ್ವಶಕ್ತಿ ಮತ್ತು 10 ಸಾವಿರ ಆವರ್ತನಕ್ಕೆ 27 ಎನ್ಎಂ ಟಾರ್ಕ್ ಪವರ್ ನೀಡುವ ನಿರೀಕ್ಷೆಯಿದೆ.

ಹೊಸ ನಿಂಜಾ 300ಆರ್ ನಲ್ಲಿ ಹೊಸ ಹೀಟ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಇರಲಿದೆಯಂತೆ. ಇದು ಲಿಕ್ವಿಡ್ ಕೂಲ್ಡ್ ಸಿಸ್ಟಮಿಗಿಂತ ಕೊಂಚ ಮುಂದುವರೆದ ಸಿಸ್ಟಮ್ ಆಗಿದೆ. ಈ ಬೈಕ್ ಆರು ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರಲಿದೆ.

ರಸ್ತೆಯಲ್ಲಿ ಉತ್ತಮ ಹಿಡಿತಕ್ಕಾಗಿ ನೂತನ ಬೈಕಿನ ಹಿಂದಿನ ಟೈರ್ ಹೆಚ್ಚು ಗ್ರಿಪ್ ಹೊಂದಿರಲಿದೆ. ನಿಂಜಾ 300 ಬೈಕಿನಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಒಂದು ಆಯ್ಕೆಯಾಗಿದ್ದು, ಕೊಂಚ ಹೆಚ್ಚು ದುಡ್ಡು ಪಾವತಿಸಿ ಎಬಿಎಸ್ ಹಾಕಿಕೊಳ್ಳಬಹುದು.

ಪ್ರಸಕ್ತ ವರ್ಷದ ಅಂತ್ಯದೊಳಗೆ ನೂತನ ನಿಂಜಾ 300ಆರ್ ಜಾಗತಿಕ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ. ಮುಂದಿನ ವರ್ಷದ ಆರಂಭದಲ್ಲಿ ದೇಶದ ರಸ್ತೆಗೂ ಹೊಸ ನಿಂಜಾ ತಲುಪುವ ನಿರೀಕ್ಷೆಯಿದೆ.

Article Published On: Thursday, September 6, 2012, 17:06 [IST]
English summary
2013 Kawasaki Ninja 300R Details. Kawasaki new 296cc engine Bike Ninja 300r features. Kawasaki Bikes India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+