23% ಚಾಲಕರಿಗೆ ಮಾತ್ರ ಹೆಲ್ಮೆಟ್ ಪ್ರಾಮುಖ್ಯತೆ ಗೊತ್ತು!

By Nagaraja

ಹೈದರಾಬಾದ್ ನಗರ ಕೇಂದ್ರಿಕರಿಸಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇತ್ತೀಚೆಗಷ್ಟೇ ನಡೆಸಿರುವ ಸ್ಯಾಂಪಲ್ ಟೆಸ್ಟ್‌ನಲ್ಲಿ ಕೇವಲ ಶೇಕಡಾ 23ರಷ್ಟು ದ್ವಿಚಕ್ರ ಚಾಲಕರಿಗೆ ಮಾತ್ರ ಹೆಲ್ಮೆಟ್ ಧರಿಸುವುದರ ಪ್ರಾಮುಖ್ಯತೆ ಬಗ್ಗೆ ಚೆನ್ನಾಗಿ ಅರಿವಿದೆ ಎಂಬ ಆಘಾತಕಾರಿ ವರದಿಯನ್ನು ಬಿತ್ತರಿಸಿದೆ.

ಜಾಗತಿಕವಾಗಿ ರಸ್ತೆ ಸುರಕ್ಷತೆಯತ್ತ ದೃಷ್ಟಿ ಹಾಯಿಸಿದರೆ ಇಂತಹ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಮೀಕ್ಷಾ ವರದಿಯ ಇನ್ನಷ್ಟು ಕುತೂಹಲಕಾರಿ ಸಂಗತಿಯೆಂದರೆ ಹೈದರಾಬಾದ್ ನಗರದಲ್ಲಿ ಶೇಕಡಾ 18.5ರಷ್ಟು ದ್ವಿಚಕ್ರ ವಾಹನ ಚಾಲಕರು ಮಾತ್ರ ಹೆಲ್ಮೆಟ್ ಧರಿಸುತ್ತಿದ್ದಾರೆ.

ಎರಡು ಅವಧಿಗಳಲ್ಲಾಗಿ ಕೆಲವು ತಿಂಗಳುಗಳ ಬಿಡುವಿನಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಸ್ವಲ್ಪ ಸುಧಾರಣೆ ಕಂಡುಬಂದಿದೆ ಎಂದು ಡಬ್ಲ್ಯುಎಚ್‌ಒ ಅಭಿಪ್ರಾಯಪಟ್ಟಿದೆ. ಹೆಲ್ಮೆಟ್ ಧರಿಸುವ ಮಹತ್ವವನ್ನು ಗಮಿಸಿದರೆ ಚಾಲಕರಲ್ಲಿ ಅರಿವಿನ ಅಭಾವವಿದೆ ಎಂದು ಅಂತರಾಷ್ಟ್ರೀಯ ಆರೋಗ್ಯ ವಿಭಾಗದ ನಿರ್ದೇಶಕರಾಗಿರುವ ಡಾ. ಅದ್ನಾನ್ ಹೈದರ್ ಅಭಿಪ್ರಾಯಪಟ್ಟಿದ್ದಾರೆ.

ಶೇಕಡಾ 23ರಷ್ಟು ಚಾಲಕರು ಹೆಲ್ಮೆಟ್ ಧರಿಸುವುದ ಪ್ರಾಮುಖ್ಯತೆ ಬಗ್ಗೆ ತಿಳಿದಿದ್ದರೆ ಶೇಕಡಾ ಒಂದರಷ್ಟು ಚಾಲಕರು ಮಾತ್ರ ಹೆಲ್ಮೆಟ್ ಧರಿಸುವುದು ಅತಿ ಅಗತ್ಯ ಎಂದು ಭಾವಿಸುತ್ತಾರೆ. ಪ್ರಮುಖವಾಗಿಯೂ ಪೊಲೀಸ್ ಸಾನಿಧ್ಯ ಕಡಿಮೆಯಾಗಿರುವುದರಿಂದ ರಾತ್ರಿ ವೇಳೆಯಲ್ಲಿ ಹೆಲ್ಮೆಟ್ ಧರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬರುತ್ತಿದೆ ಎಂದು ಹೈದರ್ ವಿವರಿಸಿದ್ದಾರೆ.

ರಸ್ತೆ ಅಪಘಾತ ಹಾಗೂ ಅಪಮೃತ್ಯುಗಳನ್ನು ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆ ಹಮ್ಮಿಕೊಂಡಿರುವ ಪೈಲಟ್ ಯೋಜನೆಯಡಿಯಲ್ಲಿ ಹೈದರಾಬಾದ್ ನಗರ ಕೂಡಾ ಸೇರಿಕೊಂಡಿದೆ. ಅಲ್ಲದೆ ವರದಿಗಳಲ್ಲಿ ಇತರ ವಾಹನಗಳಿಗೆ ತುಲನೆ ಮಾಡಿ ನೋಡಿದಾಗ ದ್ವಿಚಕ್ರ ವಾಹನಗಳೇ ಅತಿ ಹೆಚ್ಚು ಅಪಘಾತಕ್ಕೀಡಾಗುತ್ತಿವೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ನಗರದಲ್ಲಿ ರೋಡ್ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ ಎಂದು ಹೈದರಾಬಾದ್ ಟ್ರಾಫಿಕ್ ಪೊಲೀಸ್ ಅಭಿಪ್ರಾಯಪಟ್ಟಿದೆ.

More from DriveSpark

Article Published On: Saturday, October 27, 2012, 12:28 [IST]
English summary
A recent sample survey by World Health Organization (WHO) in Hyderabad has sent worrying signals for road safety experts across the globe.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+