35 ಸಾವ್ರದ ಬಜಾಜ್ ಬೈಕ್ ಯಾವಾಗ ಬರುತ್ತೆ?

ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆಯಲು ಬಜಾಜ್ ಬೃಹತ್ ಹೆಜ್ಜೆಗಳನ್ನಿಡುತ್ತಿದೆ. ಕಂಪನಿಯು ಈಗಾಗಲೇ ಪಲ್ಸರ್ 200ಎನ್ಎಸ್ ಬೈಕ್ ಪರಿಚಯಿಸಿದೆ. ಇದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಲಭ್ಯವಿದೆ.

ಇದಕ್ಕೂ ಮುನ್ನ ಬಜಾಜ್ ಕಂಪನಿಯು ಡಿಸ್ಕವರ್ 125 ಎಸ್ ಟಿ ಹೊರತಂದಿತ್ತು. ಮೊನೊ ಷಾಕ್ ಮತ್ತು ಪೆಟಲ್ ಡಿಸ್ಕ್ ಬ್ರೇಕ್ ಇತ್ಯಾದಿ ಫೀಚರುಗಳು ಇದರಲ್ಲಿದ್ದವು. ಇದು ಉಳಿದ ಕಂಪನಿಗಳ 125 ಸಿಸಿ ಸೆಗ್ಮೆಂಟಿಗೆ ಪ್ರಬಲ ಪೈಪೋಟಿ ನೀಡುತ್ತಿದೆ.

ಇದೀಗ ಬಜಾಜ್ ಕಂಪನಿಯು 100 ಸಿಸಿ ಸೆಗ್ಮೆಂಟಿನಲ್ಲಿ ಅಗ್ಗದ ಬೈಕ್ ಹೊರತರಲು ಯೋಜಿಸುತ್ತಿದೆ. ಇದು ಬಜಾಜ್ ಬಾಕ್ಸರ್ ಬಿಎಂ 150ನ ಸಹೋದರ ಬೈಕಾಗಿದೆ. ಬಜಾಜ್ ಬಿಎಂ 100 ಹೆಸರಿನ ಬೈಕ್ 100ಸಿಸಿ ಎಂಜಿನ್ ಹೊಂದಿರಲಿದೆ.

ಬಿಎಂ 100 ಕೇವಲ ಸಿಂಗಲ್ ಸ್ಪಾರ್ಕ್ ಪ್ಲಗ್ ಹೊಂದಿರಲಿದೆ. ಬಿಎಂ100 ಗರಿಷ್ಠ 7.6 ಅಶ್ವಶಕ್ತಿ ಮತ್ತು 7.5 ಎನ್ಎಂ ಟಾರ್ಕ್ ಪವರ್ ನೀಡಲಿದೆ. ದೇಶದ ಅಗ್ಗದ ದರದ ಬೈಕ್ ಸೆಗ್ಮೆಂಟಿನಲ್ಲಿ ಇದು ಜನಪ್ರಿಯವಾಗುವ ನಿರೀಕ್ಷೆಯಿದೆ. ಕಂಪನಿಯು ಗ್ರಾಮೀಣ ಭಾಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಬೈಕ್ ಪರಿಚಯಿಸಲಿದೆ.

ವಿಶೇಷವೆಂದರೆ ಬಜಾಜ್ ಬಿಎಂ100 ಬೈಕ್ ಈಗಾಗಲೇ ಕೆಲವು ವಿದೇಶಿ ಮಾರುಕಟ್ಟೆಗೆ ರಫ್ತಾಗಿದೆ. ಇತ್ತೀಚೆಗೆ ಪುಣೆ ರಸ್ತೆಯಲ್ಲಿ ಬಜಾಜ್ ಬಿಎಂ100 ಬೈಕನ್ನು ಟೆಸ್ಟ್ ಮಾಡುತ್ತಿರುವುದು ಪತ್ತೆಯಾಗಿದೆ. ಇದರಿಂದಾಗಿ ಬಜಾಜ್ ಈ ಬೈಕನ್ನು ದೇಶದ ರಸ್ತೆಗೂ ಪರಿಚಯಿಸುವ ಸೂಚನೆ ನಿಚ್ಚಳವಾಗಿದೆ.

ನೂತನ ಬಜಾಜ್ ಬಿಎಂ100 ದರ ದೇಶದಲ್ಲಿ ಸುಮಾರು 35 ಸಾವಿರ ರು. ಆಸುಪಾಸಿನಲ್ಲಿರಲಿದೆ. ಹೀಗಾಗಿ ಇದು ದೇಶದ ಅತ್ಯಂತ ಕಡಿಮೆ ದರದ ಬೈಕೆಂಬ ಖ್ಯಾತಿ ಪಡೆಯಲಿದೆ. ಇದು ಪ್ರತಿಲೀಟರಿಗೆ ಸುಮಾರು 70 ಕಿ.ಮೀ. ಆಸುಪಾಸಿನಲ್ಲಿ ಮೈಲೇಜ್ ನೀಡಲಿದೆ.

More from DriveSpark

Article Published On: Tuesday, July 17, 2012, 17:00 [IST]
English summary
Bajaj Auto is silently working on launching a low cost 100cc variant of its Boxer commuter bike in the coming months. The new motorcycle expected to be named as the Boxer BM 100 has been seen on a highway near Pune triggering speculations about its launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+