ರಾಜ್ಯಕ್ಕೆ ಪಲ್ಸರ್ 200ಎನ್ಎಸ್ ಆಗಮನ, ದರವೆಷ್ಟು?

ಬೈಕ್ ಪ್ರಿಯರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಬಜಾಜ್ ಪಲ್ಸರ್ 200ಎನ್ಎಸ್ ಬೈಕ್ ಈಗ ಕರ್ನಾಟಕದಲ್ಲೂ 85,863 ರು. ಎಕ್ಸ್ ಶೋರೂಂ ದರಕ್ಕೆ ಲಭ್ಯವಿದೆ. ರಾಜ್ಯದ ಹೆಚ್ಚಿನ ಬಜಾಜ್ ಶೋರೂಂಗಳಲ್ಲೂ ಪಲ್ಸರ್ 200ಎನ್ಎಸ್ ಬುಕ್ಕಿಂಗ್ ಅವಕಾಶವಿದ್ದು, ಶೀಘ್ರದಲ್ಲಿ ಡೆಲಿವರಿ ಕೂಡ ಮಾಡುವುದಾಗಿ ಕಂಪನಿ ಹೇಳಿದೆ.

ಕಂಪನಿಯು ಈಗಾಗಲೇ ಮಹಾರಾಷ್ಟ್ರ ಮತ್ತು ದೆಹಲಿಗೆ ಪಲ್ಸರ್ 200ಎನ್ಎಸ್ ಪರಿಚಯಿಸಿದೆ. ಹೀಗಾಗಿ ಕರ್ನಾಟಕ ಮೂರನೇ ರಾಜ್ಯವಾಗಿದೆ. ಉಳಿದ ರಾಜ್ಯಗಳಿಗೂ ಆಗಸ್ಟ್ ವೇಳೆಗೆ ನೂತನ ಪಲ್ಸರ್ ಬೈಕ್ ಪರಿಚಯಿಸುವುದಾಗಿ ಕಂಪನಿ ಹೇಳಿದೆ.

ಕಂಪನಿಯು ಇತ್ತೀಚೆಗೆ ಡಿಸ್ಕವರ್ 125 ಎಸ್ ಟಿ ಬೈಕ್ ಪರಿಚಯಿಸಿತ್ತು. ನಂತರ ಪಲ್ಸರ್ 200ಎನ್ಎಸ್ ಬಿಡುಗಡೆ ಮಾಡಿತ್ತು. ಇವೆರಡೂ ಬೈಕುಗಳ ಮೂಲಕ ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಹೆಚ್ಚು ಪಾಲು ಪಡೆಯಲು ಬಜಾಜ್ ಆಟೋ ನಿರ್ಧರಿಸಿದೆ.

ಕಾರ್ಯಕ್ಷಮತೆ ಮತ್ತು ತಂತ್ರಜ್ಞಾನ ಪ್ಯಾಕ್ ನೋಡಿದರೆ ನೂತನ ಪಲ್ಸರ್ "ಕೊಟ್ಟ ದುಡ್ಡಿಗೆ ಮೋಸವಿಲ್ಲ"ದ ಬೈಕ್. ಇಷ್ಟು ಅಗ್ಗದ ದರಕ್ಕೆ 200ಎನ್ಎಸ್ ಬೈಕ್ ಸಿಗುವುದು ವಿಶೇಷವೆಂದು ವಾಹನ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ನೂತನ ಪಲ್ಸರ್ 200ಎನ್ಎಸ್ ಬೈಕ್ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್, ನಾಲ್ಕು ಕವಾಟದ ಎಂಜಿನ್ ಹೊಂದಿದೆ. ವಿಶೇಷವೆಂದರೆ ಇದೇ ಎಂಜಿನ್ ಕೆಟಿಎಂ ಡ್ಯೂಕ್ 200 ಬೈಕಿನಲ್ಲೂ ಇದೆ. ಈ ಬೈಕ್ ಆರು ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದೆ.

ಬಜಾಜ್ ಪಲ್ಸರ್ 200ಎನ್ಎಸ್ 9,500 ಆವರ್ತನಕ್ಕೆ 23.5 ಪಿಎಸ್ ಪವರ್ ಮತ್ತು 8 ಸಾವಿರ ಆವರ್ತನಕ್ಕೆ 18.3 ಟಾರ್ಕ್ ಪವರ್ ನೀಡುತ್ತದೆ. ನೂತನ ಪಲ್ಸರ್ 200ಎನ್ಎಸ್ ಬೈಕ್ 143 ಕೆಜಿ ತೂಕವಿದೆ.

ಈ ಬೈಕಿನಲ್ಲಿ ಗಂಟೆಗೆ ಗರಿಷ್ಠ 136 ಕಿ.ಮೀ. ವೇಗದಲ್ಲಿ ಹೋಗಬಹುದು. ಕೇವಲ 9.8 ಸೆಕೆಂಡಿನಲ್ಲಿ 100 ಕಿ.ಮೀ. ವೇಗ ಪಡೆಯಬಹುದು. ಇನ್ನೂ ನಿಖರವಾಗಿ ಹೇಳಬೇಕೆಂದರೆ 0-60 ಕಿ.ಮೀ. ವೇಗವನ್ನು ಬರೀ 3.6 ಸೆಕೆಂಡಿನಲ್ಲಿ ಪಡೆಯಬಹುದು.

ನೂತನ ಪಲ್ಸರ್ ಬೈಕಿನಲ್ಲಿ ಪ್ರತಿಗಂಟೆಗೆ 55 ಕಿ.ಮೀ. ವೇಗದಲ್ಲಿ ಸಾಗಿದರೆ ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 58 ಕಿ.ಮೀ. ಮೈಲೇಜ್ ಪಡೆಯಬಹುದು ಎಂದು ಬಜಾಜ್ ಹೇಳಿದೆ.

More from DriveSpark

Article Published On: Monday, July 9, 2012, 17:28 [IST]
English summary
Bajaj Auto Launched New 2012 Pulsar 200 NS Bike in Karntaka at ex-showroom price of Rs 85,863. Pulsar 200 NS Booking opens in Bajaj dealerships. New Pulsar 200 NS owned liquid cooled 200cc single cylinder engine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+