ಬಿಡುಗಡೆಯಾದ ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 150 ನಿಯಾನ್ ಬೈಕ್

ಬಜಾಜ್ ಆಟೋ ಸಂಸ್ಥೆಯು ತಮ್ಮ ಜನಪ್ರಿಯ ಪಲ್ಸರ್ 150 ನಿಯಾನ್ ಎಬಿಎಸ್ ಬೈಕ್‍ಗಳನ್ನು ಬಿಡುಗಡೆ ಮಾಡಲಾಗಿದ್ದು, ದೆಹಲಿಯೆ ಎಕ್ಸ್ ಶೋರುಂ ಪ್ರಕಾರ ರೂ. 67, 386 ಸಾವಿರದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ. ನಾನ್ ಎಬಿಎಸ್ ಮಾಡಲ್‍‍ಗೆ ಕಂಪೇರ್ ಮಾಡಿದರೆ ಎಬಿಎಸ್ ಆಧಾರಿತ ಬೈಕ್‍ಗಳು ಬೆಲೆಯಲ್ಲಿ ಕೇವಲ ರೂ. 1940 ಮಾತ್ರ ಅಧಿಕವಾಗಿದೆ.

 ಬಿಡುಗಡೆಯಾದ ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 125 ನಿಯಾನ್ ಬೈಕ್

ಬಜಾಜ್ ಸಂಸ್ಥೆಯು ತಮ್ಮ 1500ಸಿಸಿ ನಿಯಾನ್ ಬೈಕ್‍ಗಳನ್ನು ನಿಯಾನ್ ರೆಡ್, ನಿಯಾನ್ ಸಿಲ್ವರ್ ಮತ್ತು ನಿಯಾಲ್ ಎಲ್ಲೊ ಎಂಬ ಮೂರು ಬಣ್ಣಗಳಲ್ಲಿ ಖರೀದಿ ಮಾಡಬಹುದಾದ ಆಯ್ಕೆಯನ್ನು ನೀಡಲಾಗುತ್ತಿದೆ. ಬಣ್ಣಗಳ ಆಯ್ಕೆಯ ಮೇಲೆ ಅವುಗಳನ್ನು ಬೈಕಿನ ಹೆಡ್‍ಲ್ಯಾಂಪ್ ಕ್ಲಸ್ಟರ್, ಪಲ್ಸರ್ ಲೋಗೊ, ಸೈಡ್ ಪ್ಯಾನೆಲ್, ಗ್ರ್ಯಾಬ್ ಹ್ಯಾಂಡಲ್ ಮತ್ತು ಅಲಾಯ್ ವ್ಹೀಲ್‍ಗಳ ಮೇಲೆ ಕಾಣಬಹುದಾಗಿದೆ.

 ಬಿಡುಗಡೆಯಾದ ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 125 ನಿಯಾನ್ ಬೈಕ್

ಬಜಾಜ್ ಪಲ್ಸರ್ 150, ಪಲ್ಸರ್ 220ಎಫ್ ಮತ್ತು ಅವೆಂಜರ್ ಕ್ರೂಸ್ ಬೈಕ್‍‍ಗಳಾ ಮಾದರಿಯಲ್ಲೆ, ಬಜಾಜ್ 150 ಬೈಕ್ ಸಿಂಗಲ್ ಚಾನಲ್ ಎಬಿಎಸ್ ಅನ್ನು ಪಡೆದುಕೊಂಡಿದೆ. ಹೊಸದಾಗಿ ಅಳವಡಿಸಲಾದ ಎಬಿಎಸ್ ಮತ್ತು ಟ್ವಿನ್ ಡಿಸ್ಕ್ ಬ್ರೇಕ್ ಅನ್ನು ಹೊರತು ಪಡಿಸಿ ಈ ಬೇರಾವ ಮಾರ್ಪಾಡುಗಳನ್ನು ಪಡೆದಿರುವುದಿಲ್ಲ.

 ಬಿಡುಗಡೆಯಾದ ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 125 ನಿಯಾನ್ ಬೈಕ್

ಎಂಜಿನ್ ಸಾಮರ್ಥ್ಯ

ಹೊಸ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ಬ್ರೇಕ್, ಎಬಿಎಸ್ ಬೈಕ್ ಸಾಧಾರಣ ಬೈಕಿನಂತೆಯೆ 149ಸಿಸಿ, ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 14ಬಿಹೆಚ್‍ಪಿ ಮತ್ತು 13.4ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

 ಬಿಡುಗಡೆಯಾದ ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 125 ನಿಯಾನ್ ಬೈಕ್

ಬಜಾಜ್ ಪಲ್ಸರ್ 150 ಎಬಿಎಸ್, ಟ್ವಿನ್ ಡಿಸ್ಕ್ ಬ್ರೇಕ್ ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಅನ್ನು ಅಳವಡಿಸಲಾಗಿದೆ. ಇಷ್ಟೆ ಅಲ್ಲದೇ ರೈಡರ್‍‍ಗಳ ಸುರಕ್ಷತೆಗಾಗಿ ಮುಂಭಾಗದಲ್ಲಿ 260ಎಂಎಂ ಹಿಂಭಾಗದಲ್ಲಿ 230ಎಂಎಂ ಡಿಸ್ಕ್ ಬ್ರೇಕ್, ಸಿಂಗಲ್ ಚಾನಲ್ ಎಬಿಎಸ್ ಟೆಕ್ನಾಲಜಿ ಮತ್ತು ರಿಯರ್ ಲಿಫ್ಟ್ ಪ್ರೊಟೆಕ್ಷನ್ ಅನ್ನು ನೀಡಲಾಗಿದೆ.

 ಬಿಡುಗಡೆಯಾದ ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 125 ನಿಯಾನ್ ಬೈಕ್

ಕೇವಲ ಬಜಾಜ್ ಆಟೋ ಸಂಸ್ಥೆ ಮಾತ್ರವಲ್ಲದೇ ಮಾರುಕಟ್ಟೆಯಲ್ಲಿರುವ ಹಲವಾರು ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಇದೇ ವರ್ಷದ ಎಪ್ರಿಲ್ 1ರೊಳಗೆ ತಮ್ಮ 150ಸಿಸಿ ಮೇಲ್ಪಟ್ಟ ವಾಹನಗಳಲ್ಲಿ ಎಬಿಎಸ್ ಟೆಕ್ನಾಲಜಿಯನ್ನು ಅಳವಡಿಸುವ ಕಾರ್ಯದಲ್ಲಿದ್ದು, ಇನ್ನು ಎಬಿಎಸ್ ಅನ್ನು ಪಡೆಯಲಿರುವ ಸ್ಕೂಟರ್ ವಿಭಾಗದಲ್ಲಿ ಎಪ್ರಿಲಿಯಾ ಎಸ್‍150 ಮೊದಲನಯದಾಗಿದೆ.

 ಬಿಡುಗಡೆಯಾದ ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 125 ನಿಯಾನ್ ಬೈಕ್

ಹೊಸ ನಿಯಾನ್ ಕಲೆಕ್ಷನ್ ಬಣ್ಣಗಳಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕಿನ ಬೇಸ್ ವೇರಿಯಂಟ್‍‍ನಲ್ಲಿ ಮಾತ್ರ ಲಬ್ಯವಿರಲಿದ್ದು, ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಹೋಂಡಾ ಸಿಬಿ ಯುನಿಕಾರ್ನ್ 150, ಹೀರೋ ಅಚೀವರ್ 150, ಯಮಹಾ ಎಸ್‍ಜೆಡ್-ಆರ್‍ಆರ್ ಮತ್ತು ಇನ್ನಿತರೆ 150ಸಿಸಿ ಎಂಟ್ರಿ ಲೆವೆಲ್ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Bajaj Pulsar 150 Neon ABS Launched In India At Rs. 67,386. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X