ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 220ಎಫ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಕೇಂದ್ರ ಸರ್ಕಾರದ ಆದೇಶದಂತೆ ಏಪ್ರಿಲ್ 2019ರ ನಂತರ ಬಿಡಗಡೆಗೊಳ್ಳುವ 150ಸಿಸಿಗಿಂತಾ ಮೇಲಿರುವ ಎಲ್ಲಾ ದ್ವಿಚಕ್ರ ವಾಹನಗಳು ಖಡ್ಡಾಯವಾಗಿ ಎಬಿಎಸ್ ಟೆಕ್ನಾಲಜಿಯನ್ನು ಹೊಂದಿರಲೆಬೇಕೆಂದು ಘೋಷಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ತಮ್ಮ 150ಸಿಸಿ ಮೇಲಿರುವ ವಾಹನಗಳಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲು ಮುಂದಾಗಿವೆ.

ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 220ಎಫ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಇದೀಗ ದೇಶಿಯ ಬಜಾಜ್ ಆಟೋ ಸಂಸ್ಥೆ ಕೂಡಾ ತಮ್ಮ ಹೊಸ ವಾಹನಗಳಿಗೆ ಎಬಿಎಸ್ ಅನ್ನು ಅಳವಡಿಸಲು ಮುಂದಾಗಿದ್ದು, ಜನಪ್ರಿಯ ಪಲ್ಸರ್ 220 ಬೈಕಿಗೆ ಕೂಡಾ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಂಡಿದೆ. ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಎಬಿಎಸ್ ಪ್ರೇರಿತ ಪಲ್ಸರ್ 220ಎಫ್ ಬೈಕ್ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ.

ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 220ಎಫ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಅಪ್ಡೇಟೆಡ್ ಪಲ್ಸರ್ 220ಎಫ್ ಬೈಕ್ ಹೊಸದಾಗಿ ಪಲ್ಸರ್ ಆರ್‍ಎಸ್200 ಮತ್ತು ಎನ್ಎಸ್200 ಬೈಕ್‍‍ಗಳಲ್ಲಿ ಅಳವಡಿಸಲಾದ ಸಿಂಗಲ್ ಚಾನಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಇದಲ್ಲದೇ ಹಿಂಭಾಗದ ಚಕ್ರವನ್ನು ಎತ್ತಿ ಹಿಡಿಯದಂತೆ ತಡೆಯಲು ಚಕ್ರದ ವೇಗವನ್ನು ಅಳೆಯಲು ಹಿಂಭಾಗದ ಡಿಸ್ಕ್ ಬ್ರೇಕ್ನಲ್ಲಿ ಎಬಿಎಸ್ ಉಂಗುರವನ್ನು ಸಹ ಬೈಕ್ ಪಡೆಯುತ್ತದೆ.

ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 220ಎಫ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಹೊಸ ಬೈಕಿನ ಬೆಲೆ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ ಬಜಾಜ್ ಆಟೋ ಸಂಸ್ಥೆಯು ಅಪ್ಡೇಟೆಡ್ ಪಲ್ಸರ್ ಬೈಕ್‍‍ಗಳನ್ನು ಬಿಡುಗಡೆಗೊಳಿಸಲು ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದ್ದು, ಎಬಿಎಸ್ ಟೆಕ್ನಾಲಜಿಯನ್ನು ಪಡೆದ ಪಲ್ಸರ್ 220ಎಫ್ ಬೈಕ್ ಶೀಘ್ರವೇ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ. ಎಬಿಎಸ್ ಅನ್ನು ಪಡೆದ ಹೊಸ ಪಲ್ಸರ್ 220ಎಫ್ ಬೈಕ್‍‍ಗಳು ಸಾಧಾರಣ ಬೈಕ್‍ನ ಬೆಲೆಗಿಂತ ಸುಮಾರು ರೂ.7,600 ಹೆಚ್ಚಲಿದೆ.

ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 220ಎಫ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಅಂದರೆ ಪ್ರಸ್ತುತ ಸಾಧಾರಣ ಪಲ್ಸರ್ 220ಎಫ್ ಬೈಕ್ ರೂ. 97,670 ಬೆಲೆಯನ್ನು ಪಡೆದುಕೊಂಡಿದ್ದು, ಎಬಿಎಸ್ ಅಧಾರಿತ ಪಲ್ಸರ್ 220ಎಫ್ ಬೈಕಿನ ಬೆಲೆಯು ಎಕ್ಸ್ ಶೋರಂ ಪ್ರಕಾರ ರೂ. 1.05 ಲಕ್ಷದ ಬೆಲೆಯನ್ನು ಪಡೆಯಲಿದೆ.

ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 220ಎಫ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಸಿಂಗಲ್ ಚಾನಲ್ ಎಬಿಎಸ್ ಅನ್ನು ಹೊರತುಪಡಿಸಿ ಹೊಸ ಪಲ್ಸರ್ 220ಎಫ್ ಬೈಕ್ ಈ ಬಾರಿ ಅಪ್ಡೇಟೆಡ್ ಬಾಡಿ ಗ್ರಾಫಿಕ್ಸ್ ಮತ್ತು ಹೊಸ ಎಂಜಿನ್ ಬೆಲ್ಲಿ ಪ್ಯಾನ್ ಅನ್ನು ಪಡೆದುಕೊಂಡಿರಲಿದೆ. ಜೊತೆಗೆ ಎಂಜಿನ್ ಕೌಲ್ ಅನ್ನು ಅಳವಡಿಸಿರುವ ಕಾರಣ ಇದು ಬೈಕಿನ ಲುಕ್ ಅನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ.

ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 220ಎಫ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಎಂಜಿನ್ ಸಾಮರ್ಥ್ಯ

ನವೀಕರಿಸಲಾದ ಬಜಾಜ್ ಪಲ್ಸರ್ 220ಎಫ್ ಬೈಕ್ 220ಸಿಸಿ ಸಿಂಗಲ್-ಸಿಲೆಂಡರ್, ಆಯಿಲ್ ಕೂಲ್ಡ್ ಎಂಜಿನ್ ಸಹಾಯದಿಂದ 20.6ಬಿಹೆಚ್‍ಪಿ ಮತ್ತು 18.55ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 220ಎಫ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಎಬಿಎಸ್ ಅನ್ನು ಅಳವಡಿಸಿದ ನಂತರ ಬಜಾಜ್ ಪಲ್ಸರ್ 220ಎಫ್ ಬೈಕ್ ಸಾಧಾರಣ ಬೈಕ್‍‍ಗಿಂತಾ ಸುಮಾರು 2 ರಿಂದ 3ಕಿಜಿ ತೂಕ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ. ಬಜಾಜ್ ಪಲ್ಸರ್ 220ಎಫ್ ಬೈಕ್ ಮುಂಭಾಗದಲ್ಲಿ ಟೆಸ್ಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 5 ಸ್ಟೆಪ್ ಅಡ್ಜಸ್ಟಬಲ್ ಶಾಕ್ ಅಬ್ಸಾರ್ಬರ್‍‍ಗಳನ್ನು ನೀಡಲಾಗಿದೆ.

ಎಬಿಎಸ್ ಆಧಾರಿತ ಬಜಾಜ್ ಪಲ್ಸರ್ 220ಎಫ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಬಜಾಜ್ ಪಲ್ಸರ್ 220ಎಫ್ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ವಿಶೇಷವಾಗಿ ಮುಂಭಾಗದ ವ್ಹೀಲ್‍‍ಗೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಒದಗಿಸಲಾಗಿದೆ. ಇದನ್ನು ಹೊರತು ಪಡಿಸಿ ಬೇರಾವ ಬದಲಾವಣೆಯನ್ನು ಈ ಬೈಕ್ ಪಡೆದಿರುವುದಿಲ್ಲ.

Source: AutoCarIndia

More from DriveSpark

Article Published On: Wednesday, January 9, 2019, 18:00 [IST]
English summary
Bajaj Pulsar 220F ABS Prices Revealed — Launch Expected By End Of This Month. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+