ಬಜಾಜ್ ಡ್ಯೂಕ್ ಬೈಕ್ ಬುಕ್ಕಿಂಗ್ ಶುಲ್ಕ ಕಡಿಮೆ ಕಣ್ರಿ

Bajaj Slashes KTM Duke 200 Booking Amount To 20K
ಕಳೆದ ತಿಂಗಳು ದೇಶದ ರಸ್ತೆಗೆ ಆಗಮಿಸಿದ ಕೆಟಿಎಂ ಡ್ಯೂಕ್ 200 ಬೈಕಿನ ಬುಕ್ಕಿಂಗ್ ಶುಲ್ಕವನ್ನು ಬಜಾಜ್ ಕಡಿಮೆ ಮಾಡಿದೆ. ಈ ಹಿಂದಿದ್ದ 30 ಸಾವಿರ ರು. ಬುಕ್ಕಿಂಗ್ ಶುಲ್ಕವನ್ನು ಕಂಪನಿಯು 20 ಸಾವಿರ ರು.ಗೆ ತಲುಪಿಸಿದೆ. ಕೆಟಿಎಂ ಬೈಕ್ ಮಾರಾಟ ಹೆಚ್ಚಿಸಲು ಕಂಪನಿಯು ಈ ಕ್ರಮ ಕೈಗೊಂಡಿದೆ.

ಕೆಟಿಎಂ ಡ್ಯೂಕ್ ಬೈಕಿಗೆ ಸದ್ಯ ಸಮರ್ಥವಾಗಿ ಪೈಪೋಟಿ ನೀಡುವ ಇತರ ಕಂಪನಿಗಳ ಬೈಕುಗಳಿಲ್ಲ. ಆದರೆ ಅದಕ್ಕಿರುವ ಪ್ರತಿಸ್ಪರ್ಧಿ ಅದರ ಸಹೋದರ ಬೈಕ್ ಕೆಟಿಎಂ ಡ್ಯೂಕ್. ಕೆಟಿಎಂ ಡ್ಯೂಕ್ 200 ಆವೃತ್ತಿ ರಸ್ತೆಗಿಳಿದ ಒಂದು ವಾರದ ತರುವಾಯ ಕಂಪನಿಯು ಪಲ್ಸರ್ 200ಎನ್ ಎಸ್ ಬೈಕನ್ನು ಪರಿಚಯಿಸಿತ್ತು.

ನೂತನ ಡ್ಯೂಕ್ 200 ಬೈಕ್ ದರ ಸುಮಾರು 1.17 ಲಕ್ಷ ರುಪಾಯಿ ಇದೆ. ಆದರೆ ಬಜಾಜ್ ನೂತನ ಪಲ್ಸರ್ ದರ ಒಂದು ಲಕ್ಷ ರು.ನಿಂದ ಕಡಿಮೆಯಿರುವ ನಿರೀಕ್ಷೆಯಿದೆ. ಇವೆರಡು ಬೈಕುಗಳು ಒಂದೇ ರೀತಿಯ ಎಂಜಿನ್ ಹೊಂದಿವೆ. ಆದರೆ ಇವೆರಡು ಬೈಕುಗಳ ಡ್ರೈವಿಂಗ್ ಅನುಭವ ಮಾತ್ರ ವಿಭಿನ್ನ.

ಬಜಾಜ್ ಆಟೋ ಮತ್ತು ಆಸ್ಟ್ರೇಲಿಯಾದ ಕೆಟಿಎಂ ಕಂಪನಿಗಳೆರಡು ಜಂಟಿಯಾಗಿ ಕೆಟಿಎಂ ಡ್ಯೂಕ್ 200 ಬೈಕ್ ಅಭಿವೃದ್ಧಿಪಡಿಸಿವೆ. ವಿಶೇಷವೆಂದರೆ ಡ್ಯೂಕ್ 200 ಬೈಕ್ ಮತ್ತು ಪಲ್ಸರ್ 200ಎನ್ಎಸ್ ಬೈಕ್ ಗಳೆರಡರ ನಡುವೆ ಸಾಮ್ಯತೆಗಳಿವೆ.

ನಿಮಿಷ್ಟ: ಪಲ್ಸರ್ ಚಿತ್ರಗಳನ್ನು ನೋಡಿ ಅಥವಾ ಸ್ಟೋರಿ ಓದಿ

More from DriveSpark

Article Published On: Tuesday, February 7, 2012, 12:25 [IST]
English summary
Bajaj Auto which launched the KTM Duke 200 sports bike last month has reduced the booking amount from Rs.30,000 to Rs.20,000. This move is expected to boost sales of the KTM bike. The KTNM is expected to perform well against competitors but might face difficulties from its own cousin.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+