ನೂತನ ಪಲ್ಸರ್ 200ಎನ್ ಎಸ್ ಅನಾವರಣ, ದರ?!
ದೇಶದ ರಸ್ತೆಗೆ ಪಲ್ಸರ್ ಬ್ರಾಂಡ್ ಆಗಮನವಾಗಿ ಹತ್ತು ವರ್ಷಗಳು ಕಳೆದಿವೆ. ಇದೀಗ ಕಂಪನಿಯು ಪರಿಚಯಿಸಿದ್ದು 200ಸಿಸಿ ಬೈಕ್. ಇದು ನೋಡಲು 135 ಸಿಸಿ ಪಲ್ಸರಿನಂತೆ ಕಾಣುತ್ತದೆ. ಈ ಹಿಂದೆಯೂ ಹಲವು ಪಲ್ಸರ್ ಆವೃತ್ತಿಗಳು ರಸ್ತೆಗಿಳಿದಿದ್ದವು. ಆದರೆ ಅವೆಲ್ಲ ಹಳೆಯ ವಿನ್ಯಾಸವನ್ನೇ ಹೊಂದಿದ್ದವು. ಆದರೆ ನೂತನ ಪಲ್ಸರ್ ಒಂದಿಷ್ಟು ಪರಿಷ್ಕೃತವಾಗಿ ಆಗಮಿಸಿರುವುದು ವಿಶೇಷ.
2012ರ ನೂತನ ಪಲ್ಸರ್ 200ಸಿಸಿಯ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಇದು 9,500 ಆರ್ ಪಿಎಂಗೆ 23.5 ಪಿಎಸ್ ಪವರ್ ಮತ್ತು 8 ಸಾವಿರ ಆರ್ ಪಿಎಂಗೆ 18.3 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ.
ಆಕ್ಸಿಲರೇಟರ್: ಇದರಲ್ಲಿ 0-60 ಕಿ.ಮೀ,. ವೇಗವನ್ನು ಕೇವಲ 3.8 ಸೆಕೆಂಡಿನಲ್ಲಿ ಮತ್ತು 0-100 ಕಿ.ಮೀ. ವೇಗವನ್ನು 9.8 ಸೆಕೆಂಡಿನಲ್ಲಿ ಪಡೆಯಬಹುದಾಗಿದೆ. ಈ ಬೈಕಿನ ಲಿಕ್ವಿಡ್ ಕೂಲ್ಡ್ ಎಂಜಿನ್ ಪ್ರತಿಸಿಲಿಂಡರಿಗೆ ನಾಲ್ಕು ಕವಾಟಗಳನ್ನು ಹೊಂದಿದ್ದು, ಮೂರು ಸ್ಪಾರ್ಕ್ ಪ್ಲಗ್ ಹೊಂದಿದೆ.
ಮೈಲೇಜ್: ನೂತನ ಬಜಾಜ್ ಪಲ್ಸರ್ ಬೈಕ್ ಪ್ರತಿಲೀಟರ್ ಇಂಧನಕ್ಕೆ ಸುಮಾರು 58 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ. ಬಜಾಜ್ ಪಲ್ಸರ್ 200ಎನ್ಎಸ್ ಆರು ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಒಟ್ಟಾರೆ ಸದ್ಯಕ್ಕೆ ಈ ಬೈಕಿನ ಚಿತ್ರ ನೋಡಿ ಕಣ್ತುಂಬಿಕೊಳ್ಳಿರಿ. ನೂತನ 2012ರ ಪಲ್ಸರ್ ಬೈಕ್, ಕೆಟಿಎಂ ಡ್ಯೂಕ್ 200ರಲ್ಲಿರವಂತೆ ಎಗ್ ಹಾಸ್ಟ್ ಸಿಸ್ಟಮ್ ಹೊಂದಿದೆ. ಮುಂಭಾಗದ ಮತ್ತು ಹಿಂಭಾಗದ ಚಕ್ರಗಳಿಗೆ ಪೇಟಲ್ ಡಿಸ್ಕ್ ಬ್ರೇಕ್ ಇದೆ.


Click it and Unblock the Notifications









