ಇನ್‌ಸ್ಪೆಕ್ಟರ್‌ಗೆ ದಂಡ ವಿಧಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸ್
ಪ್ರಸಕ್ತ ವರ್ಷದ ಆರಂಭದಿಂದ ಮಾರ್ಚ್ ಅಂತ್ಯದವರೆಗೆ ಸಂಚಾರಿ ನೀತಿನಿಯಮಗಳ ಉಲ್ಲಂಘಿಸಿದ ಸುಮಾರು 1,317 ಡ್ರೈವಿಂಗ್ ಲೈಸನ್ಸ್ ಮುಟ್ಟುಗೋಲು ಹಾಕಿದ ಸುದ್ದಿ ಈಗಾಗಲೇ ಓದಿದ್ದೀರಿ. ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ ಪಾಲನೆ ಕುರಿತು ಎಷ್ಟು ಕಟ್ಟುನಿಟ್ಟಾಗಿದ್ದಾರೆ ಎನ್ನುವುದಕ್ಕೆ ಇನ್ನೊಂದು ನಿದರ್ಶನ ದೊರಕಿದೆ.
ಹೊಸೂರು - ಲಷ್ಕರ್ ರಸ್ತೆಯ ಸಿ. ಎಂ. ಪಿ. ಗೇಟು ಬಳಿ ಸಮವಸ್ತ್ರದಲ್ಲಿ ಶಿರಸ್ತ್ರಾಣ ಹಾಕಿಕೊಳ್ಳದೆ ವಾಹನ ಚಲಾಯಿಸುತ್ತಿದ್ದ ದಕ್ಷಿಣ ಸಿ.ಆರ್ ಸಹಾಯಕ ಸಬ್ ಇನ್‌ಸ್ಪೆಕ್ಟರೊಬ್ಬರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ. ಈ ಮೂಲಕ ಕಾನೂನಿನಡಿ ಎಲ್ಲರೂ ಸರಿಸಮಾನರು ಎಂದು ಸಾಬೀತು ಪಡಿಸಿದ್ದಾರೆ.
ಈ ಸಬ್ ಇನ್‌ಸ್ಪೆಕ್ಟರ್ ಹೆಲ್ಮೆಟ್ ಮಾತ್ರವಲ್ಲದೇ ಡ್ರೈವಿಂಗ್ ಲೈಸನ್ಸ್ ಸಹ ತಂದಿರಲಿಲ್ಲ. ಹೀಗಾಗಿ ಹೆಲ್ಮೆಟ್ ರಹಿತ ಪ್ರಯಾಣ ಮತ್ತು ಡಿಎಲ್ ರಹಿತ ಪ್ರಯಾಣಕ್ಕೆ ದಂಡ ವಿಧಿಸಲಾಗಿದೆ. ಅವರಿಗೆ ದಂಡ ವಿಧಿಸಿರುವುದಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಫೇಸ್‌ಬುಕ್ ಪುಟದಲ್ಲಿ ಸಾರ್ವಜನಿಕರಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.
ಸಂಚಾರಿ ನೀತಿನಿಯಮಗಳನ್ನು ಅನುಷ್ಠಾನಗೊಳಿಸಲು ಬದ್ಧರಾಗಿರುವ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಕನ್ನಡ ಡ್ರೈವ್‌ಸ್ಪಾರ್ಕ್ ಕಡೆಯಿಂದ ಅಭಿನಂದನೆಗಳು.
ಓದಿ: ಸಂಚಾರಿ ನಿಯಮ ಉಲ್ಲಂಘನೆ: ಪರಿಷ್ಕೃತ ದಂಡ ಪಟ್ಟಿ


Click it and Unblock the Notifications









