ದೇಶಕ್ಕೆ ಸೆಗ್ವೆ ಸ್ಪೆಷಲ್ ಬಂಡಿ ಪರಿಚಯಿಸಿದ ಬರ್ಡ್ ಗ್ರೂಪ್

ಕಾರು, ಬೈಕು, ಸೈಕಲ್ ಇತ್ಯಾದಿ ಬಂಡಿಗಳ ಪರಿಚಯವಿರುವ ದೇಶದ ರಸ್ತೆಗೆ ಪ್ರಪ್ರಥಮ ಬಾರಿಗೆ ವಿಶೇಷ, ವಿನೂತನ, ಆಕರ್ಷಕ, ಪರಿಸರ ಸ್ನೇಹಿ ಬಂಡಿಯೊಂದು ಆಗಮಿಸಿದೆ. ಹ್ಯಾಂಡಲ್ ಮತ್ತು ಎರಡು ಚಕ್ರ ಹೊಂದಿರುವ ಈ ಸೆಗ್ವೆ(Segway) ಬಂಡಿಯಲ್ಲಿ ನಿಂತುಕೊಂಡು ಸ್ಕೆಟೀಂಗ್ ಮಾಡುವಂತೆ ಪ್ರಯಾಣಿಸಬಹುದಾಗಿದೆ.

ಪ್ರವಾಸಿ, ತಂತ್ರಜ್ಞಾನ, ರಿಟೇಲ್ ಉದ್ಯಮದಲ್ಲಿ ಜನಪ್ರಿಯವಾಗಿರುವ ಬರ್ಡ್ ಗ್ರೂಪ್ ಕಂಪನಿಯ Segway PTಎಂಬ ವಾಹನಗಳು ಈಗ ಭಾರತದಲ್ಲೂ ದೊರಕುತ್ತದೆ. ಯುರೋಪ್ ದೇಶಗಳಲ್ಲಿ ಜನಪ್ರಿಯವಾಗಿರುವ ಸೆಗ್ವೆ ಪಿಟಿ ಬಂಡಿಯು ಎರಡು ಚಕ್ರ ಹೊಂದಿದ್ದು, ಸ್ವಯಂ ನಿಯಂತ್ರಣ ಹೊಂದಿರುವ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನವಾಗಿದೆ.

ಚಿತ್ರ ನೋಡಿದಾಗ ಇದು ಜಿಮ್ ಮಾಡುವ ಸಾಧನದಂತೆ ಕಾಣುತ್ತಿದೆಯಲ್ವ? ಪರಿಸರ ಸ್ನೇಹಿ ವಾಹನ ವಿಭಾಗದಲ್ಲಿ ಇತ್ತೀಚೆಗೆ ಸೆಗ್ವೆ ವೈಯಕ್ತಿಕ ಸಾರಿಗೆ ಸಾಧನಗಳು ಜಾಗತಿಕವಾಗಿ ಕ್ರಾಂತಿಯನ್ನು ಮಾಡಹೊರಟಿವೆ. ಎರಡು ಚಕ್ರದ ಬಂಡಿಯು ಸುರಕ್ಷತೆ ಮತ್ತು ದಕ್ಷತೆ ವಿಷಯದಲ್ಲೂ ಮುಂಚೂಣಿಯಲ್ಲಿದೆ.

ಸೈಕಲ್ ತುಳಿಯಲು ಸೋಮಾರಿತನ ಪ್ರದರ್ಶಿಸುವರಿಗಂತೂ ಇದು ಅತ್ಯಂತ ಸೂಕ್ತವಾಗಿದೆ. ತೋಟಕ್ಕೆ, ಪಾರ್ಕಿಗೆ, ಕಚೇರಿ ಒಳಭಾಗದಲ್ಲಿ, ರಸ್ತೆಯಲ್ಲಿ, ಕಡಲ ತೀರದಲ್ಲಿ, ಕಾಡುಮೇಡುಗಳಲ್ಲಿ, ದುರ್ಗಮ ರಸ್ತೆಯಲ್ಲೂ ಈ ವಾಹನ ಸರಾಗವಾಗಿ ಚಲಿಸುತ್ತದೆ.

ಇದನ್ನು ಸುಲಭವಾಗಿ ಚಾಲನೆ ಮಾಡಬಹುದಾಗಿದ್ದು, ವೈಯಕ್ತಿಕ ಸಾರಿಗೆಯಾಗಿ ಬಳಸಿಕೊಳ್ಳಬಹುದು. ಎರಡು ಚಕ್ರದ ಸೆಗ್ವೆ ಹ್ಯಾಂಡಲನ್ನು ಕೈಯಲ್ಲಿಡಿದು ಹತ್ತಿ ನಿಂತರೆ ಸಾಕು. ನೀವು ಮುಂದಕ್ಕೆ ಬಾಗಿದರೆ ಇದು ಮುಂದಕ್ಕೆ ಹೋಗಲು ಆರಂಭಿಸುತ್ತದೆ. ನಿಧಾನಗತಿಯಲ್ಲಿ ಸಾಗಬೇಕೆಂದರೆ ಸ್ವಲ್ಲ ಹಿಂದಕ್ಕೆ ಬಾಗಿದರೆ ಸಾಕು. ತಿರುಗಿಸಬೇಕೆಂದರೆ ನೀವು ತಿರುಗಬೇಕಾದ ಕಡೆ ಹ್ಯಾಂಡಲ್ ಹಿಡಿದು ತಿರುಗಿದರೆ ಸಾಕು. ಇದು ಪರಿಸರ ಸ್ನೇಹಿ ವಾಹನವಾಗಿದ್ದು, ಕೊಂಚವೂ ಹೊಗೆ ಉಗುಳುವುದಿಲ್ಲ.

ನೋಡಲು ಚಿಕ್ಕದಾಗಿದ್ದರೂ ಇದರ ದರ ಕಡಿಮೆಯೇನಿಲ್ಲ. ಸೆಗ್ವೆ ಬಂಡಿಯ ದರವೂ ಸುಮಾರು 5 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ. ಇದರ ದರಕ್ಕೆ ಯಾವುದಾದರೂ ಸಣ್ಣಕಾರು ಖರೀದಿಸಬಹುದಾಗಿದೆ. ದೇಶದಲ್ಲಿ ಬೇಡಿಕೆ ಹೆಚ್ಚಾದರೆ ದರ ಕಡಿಮೆಯಾಗುವ ನಿರೀಕ್ಷೆಯಿದೆ.

ದೇಶದ ವಾಹನ ಮಾರುಕಟ್ಟೆಗೆ ಬರ್ಡ್ ಗ್ರೂಪ್ ಕಂಪನಿಯು ಸೆಗ್ವೆ ಐ2 ಪಿಟಿ ಮತ್ತು ಎಕ್ಸ್2 ಪಿಟಿ ಎಂಬ ಎರಡು ಆವೃತ್ತಿಯನ್ನು ಪರಿಚಯಿಸಿದೆ. ಇವೆರಡೂ ಮಾಡೆಲ್ ಗಳು ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಇದರಲ್ಲಿ ಐ2 ಮಾದರಿಯಲ್ಲಿ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 38 ಕಿ.ಮೀ. ಪ್ರಯಾಣಿಸಬಹುದಾಗಿದೆ. ಎಕ್ಸ್2 ಆವೃತ್ತಿ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 38 ಕಿ.ಮೀ. ಪ್ರಯಾಣಿಸಬಹುದಾಗಿದೆ.

ನೂತನ ಬಂಡಿಗಳ ಪ್ರಚಾರಕ್ಕಾಗಿ ಕಂಪನಿಯು ದೇಶದ ಹಲವು ಭಾಗಗಳಲ್ಲಿ ಸೆಗ್ವೆ ಟೂರ್ ನಡೆಸಲು ನಿರ್ಧರಿಸಿದೆ. ಹೆಚ್ಚಿನ ಮಾಹಿತಿಗಾಗಿ http://segwaytour.in/ವೆಬ್ ತಾಣಕ್ಕೆ ಭೇಟಿ ನೀಡಿ.

More from DriveSpark

Article Published On: Tuesday, July 3, 2012, 15:42 [IST]
English summary
Bird Group, a leading travel, technology, retail company has made available the Segway PT in India. The Segway PT is a two-wheeled self-balancing battery-powered electric vehicle that is popular in European countries.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+