ಬೈಕುಗಳಿಗೆ ಸೆಡ್ಡುಹೊಡೆಯುವ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್
ಬಿಎಂಡಬ್ಲ್ಯು ನೂತನ ಎಲೆಕ್ಟ್ರಿಕ್ ಸ್ಕೂಟರ್ ಕಲ್ಪನೆ ಅದ್ಭುತವಾಗಿದೆ. ಇದು ಪೆಟ್ರೋಲ್ ಚಾಲಿತ ಸ್ಕೂಟರುಗಳಷ್ಟೇ ಶಕ್ತಿಶಾಲಿಯಾಗಿರುವುದು ವಿಶೇಷ. ಗಂಟೆಗೆ ಗರಿಷ್ಠ 75 ಕಿ.ಮೀ. ವೇಗದಲ್ಲಿ ಸಾಗಬಹುದಾದ ಈ ಸ್ಕೂಟರನ್ನು ಪೂರ್ತಿ ಚಾರ್ಜ್ ಮಾಡಿದರೆ 100 ಕಿ.ಮೀ. ಅಥವಾ ಸುಮಾರು 62 ಮೈಲು ಸಾಗಬಹುದಾಗಿದೆ.
ಕಂಪನಿಯು ನೂತನ ಕಾನ್ಸೆಪ್ಟ್ ಸ್ಕೂಟರಿಗೆ ಸಿ ಇವಲ್ಯೂವೆಷನ್ ಎಂದು ಹೆಸರಿಟ್ಟಿದೆ. ಇದು ಕಾರು ಚಾರ್ಜರ್ ಹೊಂದಿರುವುದರಿಂದ ಕಾರು ಚಾರ್ಜು ಮಾಡಬಹುದಾದ ಸ್ಟೇಷನುಗಳಲ್ಲೇ ಈ ಸ್ಕೂಟರನ್ನು ಚಾರ್ಜ್ ಮಾಡಬಹುದಾಗಿದೆ.
ಮೂರನೇ ತಲೆಮಾರಿನ ಎಲೆಕ್ಟ್ರಿಕ್ ಮೋಟರ್ ಹೊಂದಿರುವ ಈ ಸ್ಕೂಟರ್ 600ಸಿಸಿ ಸ್ಕೂಟರುಗಳಿಗೆ ಸಮಾನಾಗಿ ಆಕ್ಸಿಲರೇಷನ್ ಪವರ್ ನೀಡುತ್ತದೆ. ಕೇವಲ ಏಳು ಸೆಕೆಂಡಿನಲ್ಲಿ 0-60 ಕಿ.ಮೀ. ವೇಗ ಪಡೆಯಬಹುದಾಗಿದೆ.
ಈ ಸ್ಕೂಟರ್ ಉಳಿದ ವಾಹನಗಳಂತೆ ಲಿಕ್ವಿಡ್ ಕೂಲಿಂಗ್ ಬಳಸುವುದಿಲ್ಲ. ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರುವ ಈ ಸ್ಕೂಟರ್ ಇಂಡಿಯುಜಲ್ ಸೆಲ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಸ್ಕೂಟರಿನಲ್ಲಿ ಬಿಎಂಡಬ್ಲ್ಯು ಕಂಪನಿಯ ಅನನ್ಯ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಇದೆ. ಬ್ಯಾಟರಿ ಬಾಳಿಕೆ ಹೆಚ್ಚಿಸಲು ಇದರಲ್ಲಿ ಬ್ರೇಕ್ ರಿ-ಜನರೇಷನ್ ಟೆಕ್ನಿಕ್ ಇದೆ.
ಹಿಂಭಾಗದ ಚಕ್ರಕ್ಕೆ ಒಂದು ಆರ್ಮ್ ಸಪೋರ್ಟ್ ಇದೆ. ಎಲ್ ಇಡಿ ಲೈಟ್ ಬಳಸಿರುವುದರಿಂದ ಬ್ಯಾಟರಿ ಬಾಳಿಕೆ ಹೆಚ್ಚಾಗಿದೆ. ಬ್ಯಾಟರಿ ಲಭ್ಯತೆ ಪರಿಶೀಲಿಸಲು ಸೆಂಟ್ರಲ್ ಕನ್ಸೋಲಿನಲ್ಲಿ ವಿಶೇಷ ಗ್ಯಾಡ್ಜೆಟ್ ಇದೆ.
ಇನ್ನೂ ಉತ್ಪಾದನೆ ಹಂತ ಪ್ರವೇಶಿಸದ ಈ ಸ್ಕೂಟರಿನ ದರ ಈಗಲೇ ಅಂದಾಜಿಸುವುದು ಕಷ್ಟ. ಕಂಪನಿಯು ಈ ಸ್ಕೂಟರನ್ನು ಆದಷ್ಟು ಶೀಘ್ರದಲ್ಲಿ ಉತ್ಪಾದಿಸಲು ಯೋಜಿಸಿದೆಯಂತೆ. ಸದ್ಯ ಜಗತ್ತು ಪರಿಸರ ಸ್ನೇಹಿ ವಾಹನಗಳ ಉತ್ಪಾದನೆಗೆ ಹೆಚ್ಚಿನ ಗಮನ ನೀಡುತ್ತವೆ. ತುಂಬಾ ಆಸಕ್ತಿದಾಯಕ ವಿಷಯವೆಂದರೆ ಬೆಂಗಳೂರಿನ ರೇವಾ ಕಾರು ಪರಿಸರ ಸ್ನೇಹಿ ವಾಹನಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.


Click it and Unblock the Notifications









