ಡೀಸೆಲ್ ಎಂಜಿನ್ ಜೊತೆ ಬಂದ ಡುಕಾಟಿ ಬೈಕ್
ಇಟಲಿಯ ಸ್ಪೋರ್ಟ್ಸ್ ಬೈಕ್ ತಯಾರಿಕಾ ಕಂಪನಿ ಮಾನ್ ಸ್ಟಾರ್ ಬೈಕಿನ ನೂತನ ಆವೃತ್ತಿಯನ್ನು ಅನಾವರಣ ಮಾಡಿದೆ. ನೂತನ ಡುಕಾಟಿ ಮಾನ್ ಸ್ಟಾರ್ ಡೀಸೆಲ್ ಆಕರ್ಷಕವಾಗಿದ್ದು, ಜುಲೈ ತಿಂಗಳ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ.
ಮೊಟೊ ಜಿಪಿ ಚಾಂಪಿಯನ್ ಷಿಪ್ ಗೆ 2011ರಿಂದ ಡುಕಾಟಿ ಸ್ಪಾನ್ಸರ್ ಮಾಡುತ್ತಿದೆ. ಡುಕಾಟಿ ಮತ್ತು ಮೊಟೊ ಜಿಪಿ ಮೈತ್ರಿ ಒಂದು ವರ್ಷ ಪೂರ್ಣಗೊಂಡ ನೆನಪಿಗೆ ನೂತನ ಮಾನ್ ಸ್ಟಾರ್ ಡೀಸೆಲ್ ಬೈಕನ್ನು ಪರಿಚಯಿಸಲಾಗಿದೆ.
ಹೊಸ ಡುಕಾಟಿ ಡೀಸೆಲ್ ಮಾನ್ ಸ್ಟಾರ್ ಬೈಕ್ ಕಂಪನಿಯ ಎಲ್ಲಾ ಶೋರೂಂಗಳಲ್ಲೂ ದೊರಕಲಿದೆ. ಡುಕಾಟಿ ವೆಬ್ ಸೈಟಿಗೆ ಹೋಗಿ ಬುಕ್ಕಿಂಗ್ ಮಾಡಬಹುದು ಅಥವಾ ಹತ್ತಿರದಲ್ಲಿರುವ ಕಂಪನಿಯ ಡೀಲರುಗಳನ್ನು ಸಂಪರ್ಕಿಸಿ ಈ ಸೂಪರ್ ಬೈಕನ್ನು ಬುಕ್ ಮಾಡಬಹುದಾಗಿದೆ.
ಈ ಬೈಕಿನ ಹೆಚ್ಚಿನ ಮಾಹಿತಿಗಳನ್ನು ಕಂಪನಿ ಬಹಿರಂಗಪಡಿಸಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications
