ಮಹಿಳೆಯರು ಶಿರಸ್ತ್ರಾಣ ಧರಿಸುವುದು ಕಡ್ಡಾಯ
"1988ರ ಮೋಟರ್ ವೆಹಿಕಲ್ಸ್ ಕಾಯಿದೆ ಪ್ರಕಾರ ಸಿಕ್ ಜನಾಂಗದವರನ್ನು ಹೊರತುಪಡಿಸಿ(ತಲೆಗೆ ರುಮಾಲು ಸುತ್ತಿರುವ ಸಂಪ್ರದಾಯವಿರುವುದರಿಂದ) ಪ್ರತಿಯೊಬ್ಬರು ದ್ವಿಚಕ್ರವಾಹನ ಸವಾರಿಯಲ್ಲಿ ಶಿರಸ್ತ್ರಾಣ ಧರಿಸುವುದು ಕಡ್ಡಾಯ. ಈ ಹೆಲ್ಮೆಟ್ ಐಎಸ್ಐ ಗುಣಮಟ್ಟದಾಗಿರಬೇಕು" ಎಂದು ಸಚಿವರು ತಿಳಿಸಿದ್ದಾರೆ.
ಮೋಟರ್ ವೆಹಿಕಲ್ ಕಾಯಿದೆಯಲ್ಲಿ ಮಹಿಳಾ ದ್ವಿಚಕ್ರವಾಹನ ರೈಡರ್ ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಧರಿಸದಂತೆ ಯಾವುದೇ ವಿನಾಯಿತಿ ನೀಡಲಾಗಿಲ್ಲ. ಆದರೆ 129ನೇ ಸೆಕ್ಷನ್ ಪ್ರಕಾರ ಹೆಲ್ಮೆಟ್ ವಿನಾಯಿತಿ ನೀಡುವ ಕುರಿತು ತೀರ್ಮಾನ ಕೈಗೊಳ್ಳಲು ರಾಜ್ಯಸರಕಾರಗಳಿಗೆ ಅವಕಾಶವಿದೆ" ಎಂದು ಅವರು ಹೇಳಿದ್ದಾರೆ.
ಹೆಲ್ಮೆಟ್ ಸಲಹೆಗಳು
* ಐಎಸ್ಐ ಗುರುತು ಇರುವ ಹೆಲ್ಮೆಟ್ ಖರೀದಿಸಿರಿ
* ತಲೆಗೆ ಶಿರಸ್ತ್ರಾಣ ಸಮರ್ಪಕವಾಗಿ ಹೊಂದಿಕೊಳ್ಳುವುದೇ ಗಮನಿಸಿ. ಹೆಲ್ಮೆಟ್ ಹೆಚ್ಚು ಟೈಟ್ ಅಥವಾ ಹೆಚ್ಚು ಲೂಸ್ ಇರುವ ಹೆಲ್ಮೆಟ್ ಧರಿಸಬೇಡಿ.
* ರಸ್ತೆ ಬದಿಯ ಮಾರಾಟಗಾರರಿಂದ ಹೆಲ್ಮೆಟ್ ಖರೀದಿಸಬೇಡಿ.
* ಹೆಲ್ಮೆಟ್ ಸೂರ್ಯನ ಬೆಳಕಿನಲ್ಲಿ ಇಡಬೇಡಿ.


Click it and Unblock the Notifications









