ಹೀರೊ ಹೊಸ ಎಕ್ಸ್ ಟ್ರೀಮ್, ಹಂಕ್ ಬರುತ್ತೆ!
ದೇಶದ ದ್ವಿಚಕ್ರವಾಹನ ಮಾರುಕಟ್ಟೆಯ ಅಗ್ರಜ ಹೀರೊಮೊಟೊಕಾರ್ಪ್ ಕಂಪನಿಯು ತನ್ನ 150 ಸಿಸಿಯ ಬೈಕುಗಳ ಪರಿಷ್ಕೃತ ಆವೃತ್ತಿಗಳನ್ನು ಹೊರತರಲು ಯೋಜಸಿದೆ. ಕಂಪನಿಯು ಸಿಬಿಝಡ್ ಎಕ್ಸ್ ಟ್ರೀಮ್ ಮತ್ತು ಹಂಕ್ ಮಾಡೆಲುಗಳು ಸೇರಿದಂತೆ ಹಲವು ಬೈಕುಗಳ ಫೇಸ್ ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಲಿದೆ.
ಆದರೆ ಈ ಆವೃತ್ತಿಗಳಲ್ಲಿ ಯಾವುದೇ ಪ್ರಮುಖ ಬದಲಾವಣೆ ಕಾಣುವ ನಿರೀಕ್ಷೆಗಳಿಲ್ಲ. ಮುಂದಿನ ಕೆಲವೇ ತಿಂಗಳಲ್ಲಿ ಆಗಮಿಸಲಿರುವ ನೂತನ ಪರಿಷ್ಕ್ರತ ಆವೃತ್ತಿಗಳಲ್ಲಿ ಕಾಸ್ಮೆಟಿಕ್ ಬದಲಾವಣೆಗಳನ್ನಷ್ಟೇ ನಿರೀಕ್ಷಿಸಬಹುದಾಗಿದೆ.
ಹೀರೊ ಹೋಂಡಾ ಮೈತ್ರಿ ಕಡಿದುಕೊಂಡ ನಂತರ ಹೀರೊ ಮೊಟೊಕಾರ್ಪ್ ಬೈಕುಗಳಲ್ಲಿ ಹೋಂಡಾ ಹೆಸರು ಇರಕೂಡದು ಎಂದು ಒಪ್ಪಂದದಲ್ಲಿ ಹೇಳಲಾಗಿದೆ. ಹೀಗಾಗಿ ನೂತನ ಫೇಸ್ ಲಿಫ್ಟ್ ಆವೃತ್ತಿಗಳಲ್ಲಿ ಹೋಂಡಾ ಹೆಸರು, ಸ್ಟಿಕರ್ ಕಾಣೆಯಾಗಲಿದೆ.
ಸಿಬಿಝಡ್ ಎಕ್ಸ್ ಟ್ರೀಮ್ ಮತ್ತು ಹಂಕ್ ಬೈಕುಗಳಲ್ಲಿ ಹೋಂಡಾ ಯುನಿಕಾರ್ನ್ ಬೈಕಿನ 150 ಸಿಸಿಯ ನಾಲ್ಕು ಸಿಲಿಂಡರಿನ ಎಂಜಿನ್ ಹೊಂದಿದೆ. ಈ 149.1 ಸಿಸಿ ಎಂಜಿನ್ 8,500 ಆವರ್ತನಕ್ಕೆ 14.4 ಪಿಎಸ್ ಪವರ್ ಮತ್ತು 6,500 ಆವರ್ತನಕ್ಕೆ 12.8 ಎನ್ಎಂ ಟಾರ್ಕ್ ಪವರ್ ನೀಡಲಿದೆ.
ಇವೆರಡೂ ಬೈಕುಗಳು ಸ್ಟಾಂಡರ್ಡ್ ಫೀಚರ್ ಆಗಿ ಎಲೆಕ್ಟ್ರಿಕ್ ಸ್ಟಾರ್ಟರ್ ಹೊಂದಿರಲಿದೆ. ಡಿಸ್ಕ್ ಬ್ರೇಕ್ ಆಯ್ಕೆಯಾಗಿರಲಿದೆ. ಈಗ ಸಿಬಿಝಡ್ ಎಕ್ಸ್ ಟ್ರೀಮ್ ಮತ್ತು ಹಂಕ್ ಬೈಕುಗಳ ದರ ತಲಾ 68 ಸಾವಿರ ರು. ಮತ್ತು 62 ಸಾವಿರ ಇದೆ.


Click it and Unblock the Notifications









