125 ಸಿಸಿಯ ಹೀರೊ ಇಗ್ನಿಟರ್ ಬೈಕ್ ರಸ್ತೆಗೆ

ಮುಂಬೈ, ಜು 4: ಜಗತ್ತಿನ ಎರಡನೇ ಬೃಹತ್ ದ್ವಿಚಕ್ರವಾಹನ ತಯಾರಿಕಾ ಕಂಪನಿ ಹೀರೊ ಮೊಟೊಕಾರ್ಪ್ ನೂತನ 125 ಸಿಸಿಯ ಹೀರೊ ಇಗ್ನಿಟರ್ ಬೈಕನ್ನು ಪರಿಚಯಿಸಿದೆ. ನೂತನ ಡ್ರಮ್ ಸೆಲ್ಫ್ ಇಗ್ನಿಟರ್ ಆವೃತ್ತಿ ಇಗ್ನಿಟರ್ ದರ 55,900 ರುಪಾಯಿ ಆಗಿದೆ. ಡಿಸ್ಕ್ ಸೆಲ್ಫ್ ಇಗ್ನಿಟರ್ ಆವೃತ್ತಿ ದರ 57,900 ರು. ಇದೆ. ಇವೆರಡು ದೆಹಲಿ ಎಕ್ಸ್ ಶೋರೂಂ ದರವಾಗಿದೆ.

ನೂತನ ಇಗ್ನಿಟರ್ 125 ಸಿಸಿಯ ಎಟಿಎಫ್ ಟಿ ಎಂಜಿನ್ ಹೊಂದಿದೆ. ಇದು 8 ಸಾವಿರ ಆವರ್ತನಕ್ಕೆ 11 ಪಿಎಸ್ ಪವರ್ ನೀಡುತ್ತದೆ. ಡಿಜಿಟಲ್ ಅನಲಾಗ್ ಕಾಂಬೊ ಮೀಟರ್ ಕನ್ಸೋಲ್, ಬಾಗಿದ ಸೀಟು, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಷಾಕಅಬ್ಸರ್ಬರ್ ಮುಂತಾದ ಫೀಚರುಗಳಿಂದ ಇಗ್ನಿಟರ್ ಹೆಚ್ಚು ಇಷ್ಟವಾಗುತ್ತದೆ.

"ಹೀರೊ ಮೊಟೊಕಾರ್ಪ್ ಹೊರತರುವ ಪ್ರತಿ ಹೊಸ ಉತ್ಪನ್ನಗಳೂ ಕಂಪನಿಯ ಕಾರ್ಯತಂತ್ರವನ್ನು ಮತ್ತಷ್ಟು ವಿಸ್ತರಿಸುತ್ತದೆ. ಇದೀಗ ಇಗ್ನಿಟರ್ ಮೂಲಕ ಡಿಲಕ್ಸ್ ಬೈಕ್ ಸೆಗ್ಮೆಂಟಿನಲ್ಲಿ ಹೆಚ್ಚು ಸದೃಢವಾಗಿದ್ದೇವೆ" ಎಂದು ಹೀರೊ ಮೊಟೊಕಾರ್ಪ್ ಕಂಪನಿಯ ಉಪಾಧ್ಯಕ್ಷರಾದ ಅನಿಲ್ ದುವಾ ಹೇಳಿದ್ದಾರೆ.

ಹೀರೊ ಮೊಟೊಕಾರ್ಪ್ ಈಗಾಗಲೇ ಮೂರು ನೂತನ ಮಾಡೆಲ್ ಬೈಕುಗಳನ್ನು ಪರಿಚಯಿಸಲಿದೆ. ಇದರಲ್ಲಿ ಹೀರೊ ಇಂಪಲ್ಸ್ ಬೈಕ್ ಪ್ರಮುಖ. ಕಂಪನಿಯು ಸೂಪರ್ ಸ್ಪ್ಲೆಂಡರ್ ಮತ್ತು ಗ್ಲಾಮರ್ ಬೈಕುಗಳ ನೆರವಿನಿಂದ ಈಗಾಗಲೇ 125 ಸಿಸಿ ಸೆಗ್ಮೆಂಟಿನಲ್ಲಿ ಬಲಿಷ್ಠವಾಗಿದೆ.

ಹೀರೊ ಮೊಟೊಕಾರ್ಪ್ ಮಾರಾಟವು ಕಳೆದ ತಿಂಗಳು ಗಮನಾರ್ಹವಾಗಿ ಏರಿಕೆ ಕಂಡಿದೆ. ಕಂಪನಿಯು ಜೂನ್ ತಿಂಗಳಲ್ಲಿ 5,34,091 ದ್ವಿಚಕ್ರವಾಹನ ಮಾರಾಟ ಮಾಡಿದೆ.

More from DriveSpark

Article Published On: Wednesday, July 4, 2012, 16:33 [IST]
English summary
Hero MotoCorp launched new 125 cc bike Ignitor. Hero Ignitor priced at Rs Rs. 55,900 for the drum-self-cast variant and Rs 57,900/- for the disc-self Bike variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+