ಹೀಗೂ ಉಂಟು! ತಲೆಯನ್ನು ಸೇಫಾಗಿಡುವ ಅದೃಷ್ಯ ಹೆಲ್ಮೆಟ್

ಹೆಲ್ಮೆಟ್ ಅಂದ್ರೆ ಹೆಚ್ಚಿನವರಿಗೆ ಅಲರ್ಜಿ. ಕಾಲೇಜು ತರುಣರಂತೂ ಹೆಲ್ಮೆಟ್ಟನ್ನು ಶತ್ರು ತರಹ ನೋಡುತ್ತಾರೆ. ಕಾಲೇಜು ಯುವತಿಯರ ಮುಂದೆ ಬೈಕಲ್ಲಿ ಪೋಸ್ ನೀಡಲು, ಸ್ಮೈಲ್ ನೀಡಲು ಹೆಲ್ಮೆಟ್ ಅಡ್ಡಿಯಾಗುವುದೇ ಇವರ ಸಮಸ್ಯೆಗೆ ಕಾರಣ. ಕೂದಲು ಉದುರುವ ಆತಂಕದಿಂದ ಇನ್ನು ಕೆಲವರು ಹೆಲ್ಮೆಟ್ ಧರಿಸಲು ಹಿಂಜರಿಯುತ್ತಾರೆ.

ಬಹುಶಃ ಭವಿಷ್ಯದಲ್ಲಿ ಇಂತಹ ಸಮಸ್ಯೆ ಇರದು. ಯಾಕೆಂದರೆ ಸ್ವೀಡನ್ ದೇಶದ ಇಬ್ಬರು ಮಹಿಳೆಯರು ಅದೃಷ್ಯ ಹೆಲ್ಮೆಟ್ಟನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ತುರ್ತು ಪರಿಸ್ಥಿತಿಯಲ್ಲಿ ಮಾತ್ರ ತಲೆಯನ್ನು ಆವರಿಸಿಕೊಳ್ಳುತ್ತದೆ. ಒಂಥರಾ ಕಾರಿನ ಏರ್ ಬ್ಯಾಗಿನ ಹಾಗೇ. ಸದ್ಯ ಇವರು ಅಭಿವೃದ್ಧಿಪಡಿಸಿರುವುದು ಬೈಸಿಕಲ್ ಹೆಲ್ಮೆಟ್. ಮುಂದೆ ಬೈಕಿಗೂ ಇದನ್ನು ಪರಿಷ್ಕರಿಸಬಹುದು.

ದ್ವಿಚಕ್ರ ವಾಹನ ಸವಾರಿಯಲ್ಲಿ ಪ್ರಯಾಣಿಸುವಾಗ ಅಪಘಾತ ಸಂಭವಿಸಿದ ತಕ್ಷಣ ತಲೆಯನ್ನು ಆವರಿಸಿ ರಕ್ಷಣೆ ನೀಡುವ ಇಂತಹ ಅದೃಷ್ಯ ಹೆಲ್ಮೆಟ್ಟನ್ನು ಅನ್ನಾ ಹಾಪ್ಟ್ ಮತ್ತು ತೆರೆಸೆ ಆಲ್ಸಟಿನ್ ಅಭಿವೃದ್ಧಿಪಡಿಸಿದ್ದಾರೆ. "ಸ್ವೀಡನಿನಲ್ಲಿ ಸೈಕಲ್ ಸವಾರಿ ಮಾಡುವಾಗ ಮಕ್ಕಳು ಹೆಲ್ಮೆಟ್ ಧರಿಸುವುದು ಕಡ್ಡಾಯ. ಆದರೆ ಹೆಚ್ಚಿನವರು ಅದನ್ನು ಪಾಲಿಸುವುದಿಲ್ಲ"ವೆಂದು ತೆರೆಸೆ ಹೇಳುತ್ತಾರೆ.

ಲೆಕೂದಲಿಗೆ ಹಾನಿಯಾಗದಂತೆ, ಭಾಗಶಃ ಯಾರಿಗೂ ಗೋಚರವಾಗದಂತಹ ಹೆಲ್ಮೆಟನ್ನು ಜನರು ಬಯಸುತ್ತಾರೆ. ಹೆಲ್ಮೆಟ್ ಧರಿಸುವ ರೀತಿಯನ್ನು ಬದಲಾಯಿಸುವ ಉದ್ದೇಶದಿಂದ ಈ ಅದೃಷ್ಯ ಹೆಲ್ಮೆಟನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತೆರೆಸೆ ಮಾಹಿತಿ ನೀಡಿದ್ದಾರೆ.

ಈ ಹೆಲ್ಮೆಟ್ ಏರ್ ಬ್ಯಾಗ್ ರೀತಿಯಲ್ಲಿ ಕೊರಳಿಗೆ ಧರಿಸಲಾಗುತ್ತದೆ. ಅಪಘಾತದ ಸಂದರ್ಭದಲ್ಲಿ ಇದು ಏರ್ ಬ್ಯಾಗಿನಂತೆ ಮೇಲಕ್ಕೆದ್ದು ತಲೆಯನ್ನು ಆವರಿಸಿಕೊಳ್ಳುತ್ತದೆ. ಅಪಘಾತದ ಸೂಚನೆ ದೊರಕಿದ 0.1 ಸೆಕೆಂಡಿನಲ್ಲಿ ಇದರ ಸೆನ್ಸಾರ್ ಕಾರ್ಯನಿರ್ವಹಿಸಿ ತಲೆಗೆ ಕವಚದಂತೆ ಆವರಿಸಿಕೊಳ್ಳುತ್ತದೆ.

ಅದೃಷ್ಯ ಹೆಲ್ಮೆಟ್ ಆಶಕ್ತಿದಾಯಕವಾಗಿದೆಯಲ್ವೆ?

ಓದಿ: ಹೆಲ್ಮೆಟಿಗೂ ವೈಪರ್, ಐಡಿಯಾ ಸೂಪರ್ರೋ ರಂಗಾ..!

More from DriveSpark

Article Published On: Wednesday, August 22, 2012, 17:13 [IST]
English summary
Two women in Sweden (Anna Haupt and Terese Alstin) invented invisible bike helmet. These invisible bike helmet looks like a collar at first, worn around the neck. Inside it is an air bag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+