ನಿರೀಕ್ಷಿಸಿ: ಕವಾಸಕಿ 300ಆರ್ ಮತ್ತು ನಿಂಜಾ 400ಆರ್ ಬೈಕ್

ಕವಾಸಕಿ ಶ್ರೇಣಿಯ ಇನ್ನೆರಡು ಬೈಕುಗಳು ಶೀಘ್ರದಲ್ಲಿ ದೇಶದ ರಸ್ತೆಗೆ ಆಗಮಿಸುವ ಸೂಚನೆ ದೊರಕಿದೆ. ಕವಾಸಕಿ ನಿಂಜಾ 250ಆರ್ ಸ್ಪೋರ್ಟ್ಸ್ ಬೈಕ್ ಈಗಾಗಲೇ ದೇಶದ ರಸ್ತೆಯಲ್ಲಿ ಜನಪ್ರಿಯವಾಗಿರುವುದರಿಂದ ಕಂಪನಿಯು ಹೊಸ ಬೈಕುಗಳನ್ನು ಪರಿಚಯಿಸಲು ಯೋಜಿಸದೆ

ಕಂಪನಿಯು 2013ರ ನಿಂಜಾ 300ಆರ್ ಮತ್ತು ನಿಂಜಾ 400ಆರ್ ಬೈಕುಗಳನ್ನು ಪರಿಚಯಿಸಲಿದೆ. ಇವೆರಡೂ ಬೈಕುಗಳೂ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿರಲಿವೆ. ಇವುಗಳು ಕ್ರಮವಾಗಿ 299 ಸಿಸಿ ಮತ್ತು 399 ಸಿಸಿ ಎಂಜಿನ್ ಹೊಂದಿರಲಿವೆ. ಮುಂದಿನ ವರ್ಷದ ಆರಂಭದಲ್ಲಿ ಈ ಬೈಕುಗಳು ದೇಶದ ರಸ್ತೆಗಿಳಿಯುವ ನಿರೀಕ್ಷೆಯಿದೆ.

ಇದರಲ್ಲಿ ಕವಾಸಕಿ ನಿಂಜಾ 300ಆರ್ ಬೈಕ್ ಎಂಜಿನ್ 9,500 ಆವರ್ತನಕ್ಕೆ 39 ಹಾರ್ಸ್ ಪವರ್ ನೀಡಲಿದೆ. ಅತ್ಯಧಿಕ ಮಾರಾಟದ ಕವಾಸಕಿ ನಿಂಜಾ 250ಆರ್ ಬೈಕಿಗಿಂತ ಹೆಚ್ಚು ಟಾರ್ಕ್ ಪವರ್ ಕೂಡ ಇದು ನೀಡಲಿದೆ.

ಕವಾಸಕಿ ನಿಂಜಾ 400ಆರ್ ಹೆಚ್ಚು ಶಕ್ತಿಶಾಲಿಯಾಗಿರಲಿದೆ. ಅಂದರೆ 9,500 ಆವರ್ತನಕ್ಕೆ 43 ಹಾರ್ಸ್ ಪವರ್ ದೊರಕಲಿದೆ. ವದಂತಿಗಳ ಪ್ರಕಾರ ಅಮೆರಿಕ ಮಾರುಕಟ್ಟೆಯಲ್ಲಿ ಈಗ 250ಆರ್ ಬೈಕುಗಳ ಬದಲಿಗೆ 300ಆರ್ ನಿಂಜಾ ಬೈಕುಗಳನ್ನು ಪರಿಚಯಿಸಲಾಗುತ್ತಿದೆಯಂತೆ.

ಈಗಾಗಲೇ 250 ಸಿಸಿ ಸೆಗ್ಮೆಂಟ್ ಬೈಕಿನಲ್ಲಿ ಸವಾರಿ ಮಾಡಿ ಬೋರ್ ಹೊಡೆದವರು ನೂತನ 300 ಮತ್ತು 400 ಸಿಸಿಯ ಬೈಕ್ ಸವಾರಿಗೆ ರೆಡಿಯಾಗಬಹುದು. ಅತ್ತ ಸೂಪರ್ ಬೈಕ್ ಅಲ್ಲದ, ಇತ್ತ ಸಾಮಾನ್ಯ ಬೈಕುಗಳೂ ಅಲ್ಲದ ಇಂತಹ ಬೈಕುಗಳಿಗೆ ದೇಶದಲ್ಲಿ ಇತ್ತೀಚೆಗೆ ಬೇಡಿಕೆ ನಿಧಾನವಾಗಿ ಏರಿಕೆ ಕಾಣುತ್ತಿದೆ.

ಬಜಾಜ್ ಹೊಸ ಕವಾಸಕಿ ಬೈಕ್ ನೀವು ಖರೀದಿಸುವಿರಾ?

Most Read Articles

Kannada
English summary
Japanese sports bike maker Kawasaki is planning to launch Ninja 300R and the Ninja 400R by early next year. Both the upcoming bikes will have twin cylinder engine layout and as the names show, the 300R & 400R have engine capacity of 299cc & 399cc respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X