ಗ್ರಾಹಕರಿಗಾಗಿ ಯಮಹಾ ಲಿಮಿಟೆಡ್ ಅಡಿಷನ್ ಬಿಡುಗಡೆ

By Nagaraja

ಹಬ್ಬದ ಸೀಸನ್ ಚಾಲ್ತಿಯಲ್ಲಿರುವಂತೆಯೇ ವಾಹನ ತಯಾರಕ ಕಂಪನಿಗಳು ನೂತನ ಮಾಡೆಲ್ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆಗೊಳಿಸುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯ. ಯಾಕೆಂದರೆ ಈ ಅವಧಿಯಲ್ಲಿ ಮಾರಾಟ ಬೇಡಿಕೆ ಅತಿ ಹೆಚ್ಚಾಗಿರುತ್ತದೆ. ಗ್ರಾಹಕರಲ್ಲಿ ದೀಪಾವಳಿಗಳಂತಹ ಹಬ್ಬದ ಸಂಭ್ರಮದಲ್ಲಿ ನೂತನ ವಾಹನ ಖರೀದಿ ಮಾಡಲು ಸೂಕ್ತ ಸಮಯ ಎಂಬ ಭಾವನೆ ಮೂಡುತ್ತಿರುವುದು ಹಾಗೂ ಬೇಡಿಕೆಗಳಿಗೆ ಅನುಸಾರವಾಗಿ ಕಂಪನಿಗಳು ಭಾರಿ ಕೊಡುಗೆಗಳನ್ನು ಮುಂದಿರಿಸುವುದು ಈ ಅವಧಿಯಲ್ಲಿ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಇದರಂತೆ ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ ದೇಶದ ಗ್ರಾಹಕರಿಗೆ ನೂತನ ಕೊಡುಗೆಯಾಗಿ ಬಂದಿರುವ ಯಮಹಾ ಕಂಪನಿಯು ನೂತನ ಲಿಮಿಟೆಡ್ ಅಡಿಷನ್ ಫೇಜರ್ ಹಾಗೂ ಎಫ್‌ಝಡ್-ಎಸ್ ಆವೃತ್ತಿಗಳನ್ನು ಬಿಡುಗಡೆಗೊಳಿಸಿದೆ. ಈ ಮಾದರಿಗಳು 150 ಸಿಸಿ ಸೆಗ್ಮೆಂಟ್‌ನಲ್ಲಿ ಗ್ರಾಹಕರನ್ನು ತಲುಪಲಿದೆ.

ಯಮಹಾ ಫೇಜರ್ ಹಾಗೂ ಎಫ್‌ಝಡ್-ಎಸ್

ಯಮಹಾ ಫೇಜರ್ ಹಾಗೂ ಎಫ್‌ಝಡ್-ಎಸ್

ನೂತನ ಲಿಮಿಟೆಡ್ ಅಡಿಷನ್ ಫೇಜರ್ ಹಾಗೂ ಎಫ್‌ಝಡ್-ಎಸ್ ವೆರಿಯಂಟ್‌ ಬೈಕ್‌ಗಳು ಪರ್ಪಲ್ ಹಾಗೂ ಸಿಲ್ವರ್ ಡ್ಯುಯಲ್ ಟೋನ್ ಕಲರ್ ವೆರಿಯಂಟ್‌ಗಳಲ್ಲಿ ಲಭಿಸಲಿದೆ.

ದರ ಮಾಹಿತಿ (ಎಕ್ಸ್ ಶೊರೂಂ ದೆಹಲಿ)

ಯಮಹಾ ಎಫ್‌ಝಡ್-ಎಸ್: 78,130 ರು.

ಯಮಹಾ ಫೇಜರ್: 73,030 ರು.

ಯಮಹಾ ಫೇಜರ್ ಹಾಗೂ ಎಫ್‌ಝಡ್-ಎಸ್

ಯಮಹಾ ಫೇಜರ್ ಹಾಗೂ ಎಫ್‌ಝಡ್-ಎಸ್

ಎಫ್‌ಝಡ್-ಎಸ್ ಹಾಗೂ ಫೇಜರ್ ಆವೃತ್ತಿಯ ಲಿಮಿಟೆಡ್ ಅಡಿಷನ್ ಬೈಕ್‌ಗಳು ಪ್ರಮುಖವಾಗಿ ಕಾಸ್ಮೆಟಿಕ್ ಬದಲಾವಣೆ ಹಾಗೂ ನೂತನ ಸ್ಟಿಕ್ಕರ್‌ಗಳೊಂದಿಗೆ ಆಗಮನವಾಗಿದೆ. ಪ್ರಮುಖವಾಗಿ ಹಬ್ಬದ ಸೀಸನ್‌ನಲ್ಲಿ ಎದುರಾಳಿ ಕಂಪನಿಗಳನ್ನು ಟಾರ್ಗೆಟ್ ಮಾಡಿಕೊಂಡಿರುವ ಯಮಹಾ ಗ್ರಾಹಕರನ್ನು ತನ್ನತ್ತ ಸೆಳೆಯಲು ಮುಂದಾಗಿದೆ.

ಯಮಹಾ ಫೇಜರ್ ಹಾಗೂ ಎಫ್‌ಝಡ್-ಎಸ್

ಯಮಹಾ ಫೇಜರ್ ಹಾಗೂ ಎಫ್‌ಝಡ್-ಎಸ್

ಯಮಹಾ ಎಫ್‌ಝಡ್-ಎಸ್ ಹಾಗೂ ಫೇಜರ್ ಮಾದರಿಯ ಎಂಜಿನ್‌ಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. 153 ಸಿಸಿ ಎಂಜಿನ್ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಕಾರ್ಯವೆಸಗಲಿದೆ. ಯಮಹಾ ಎಫ್‌ಝಡ್-ಎಸ್ ಹಾಗೂ ಯಮಹಾ ಫೇಜರ್ ಎಂಜಿನ್ 14 ಪಿಎಸ್ ಪೀಕ್ ಪವರ್ ಹಾಗೂ 13.6 ಎಂಎಮ್ ಪೀಕ್ ಪವರ್ ಉತ್ಪಾದಿಸಲಿದ್ದು, ಶಿಫ್ಟಿಂಗ್ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿದೆ.

ಯಮಹಾ ಫೇಜರ್ ಹಾಗೂ ಎಫ್‌ಝಡ್-ಎಸ್

ಯಮಹಾ ಫೇಜರ್ ಹಾಗೂ ಎಫ್‌ಝಡ್-ಎಸ್

ನೂತನ ಲಿಮಿಟೆಡ್ ಅಡಿಷನ್ ಬೈಕ್‌ನಲ್ಲಿ ಪರ್ಪಲ್ ಹಾಗೂ ಸಿಲ್ವರ್ ಡ್ಯುಟಲ್ ಟೋನ್ ಪೈಂಟ್, ಗ್ರಾಬ್ ರೈಲಿನಲ್ಲಿ ಪರ್ಪಲ್ ಫಿನಿಶಿಂಗ್, ಯಮಹಾ ಲೊಗೊ ಹಾಗೂ ಲಿಮಿಟೆಡ್ ಅಡಿಷನ್ ಲೊಗೊಗಳನ್ನು ಹೊಂದಿರಲಿದೆ.

ಯಮಹಾ ಫೇಜರ್ ಹಾಗೂ ಎಫ್‌ಝಡ್-ಎಸ್

ಯಮಹಾ ಫೇಜರ್ ಹಾಗೂ ಎಫ್‌ಝಡ್-ಎಸ್

ಮುಂಬರುವ ದಿನಗಳಲ್ಲಿ ಯಮಹಾ ಮತ್ತಷ್ಟು ಎಂಜಿನ್ ಸಾಮರ್ಥ್ಯದ ಬೈಕ್‌ಗಳನ್ನು ದೇಶದಲ್ಲಿ ಅನಾವರಣಗೊಳಿಸಲಿದೆ. ಬಹುನಿರೀಕ್ಷಿತ 250 ಸಿಸಿ ಆರ್‌25 ಬೈಕ್ ಮುಂಬರುವ ವಾಹನ ಮೇಳದಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ.

Article Published On: Tuesday, November 6, 2012, 17:27 [IST]
English summary
With the festive season around the corner, Yamaha has launched limited edition variants of the Fazer and FZ-S. These variants from Yamaha, are well received in the Indian 150cc biking segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+