ಟಿವಿಎಸ್ ಅಪಾಚೆ ಆರ್‌ಟಿಆರ್ ಸರಣಿ ಬೈಕುಗಳು ರಸ್ತೆಗೆ

ಟಿವಿಎಸ್ ಮೋಟರ್ ಕಂಪನಿಯು ನೂತನ ಅಪಾಚೆ ಆರ್‌ಟಿಆರ್ 2012 ಸೀರಿಸ್ ಬೈಕುಗಳನ್ನು ರಸ್ತೆಗಿಳಿಸಿದೆ. New TVS Apache RTR Series ಮೂರು ಆವೃತ್ತಿ ಬೈಕುಗಳು ದೇಶದ ಎಲ್ಲಾ ಶೋರೂಂಗಳಲ್ಲಿಯೂ ದೊರಕುತ್ತವೆ. ಇದರ ದರ 67 ಸಾವಿರ ರು.ನಿಂದ 82 ಸಾವಿರ ರು.ವರೆಗಿದೆ.

ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಆವೃತ್ತಿ ದೆಹಲಿ ಎಕ್ಸ್ ಶೋರೂಂ ದರ 67,505 ರು ಮತ್ತು ಆರ್‌ಟಿಆರ್ 180 ದರ 72,090 ರುಪಾಯಿ ಆಗಿದೆ. ಆರ್‌ಟಿಆರ್ 180 ಎಬಿಎಸ್ ಬೈಕಿನ ದರ 82,780 ರುಪಾಯಿ ಆಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ನೂತನ ಬೈಕ್ ಘೋಸ್ಟ್ ಅಥವಾ ಮೃಗ ವಿನ್ಯಾಸ ಹೊಂದಿದೆ. ಅತ್ಯಧಿಕ ಶಕ್ತಿಶಾಲಿ ಎಂಜಿನ್ ಮಾತ್ರವಲ್ಲದೇ ಈ ಬೈಕಿನ ಲುಕ್ ಹೆಚ್ಚು ಡೈನಾಮಿಕ್ ಆಗಿದೆ. ಈ ಮೂರು ಆವೃತ್ತಿಗಳು ಹೊಸ ಏರೋ ಡೈನಾಮಿಕ್ಸ್ ಸ್ಟೈಲ್ ಹೊಂದಿದ್ದು, ಎಂಜಿನ್ ಬಿಸಿ ಕಡಿಮೆ ಮಾಡುತ್ತದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯ ಹೊಸಮಟ್ಟದ ಎಂಜಿನಿಯರಿಂಗ್ ಮತ್ತು ಮೆಕಾನಿಸಂ ಅನ್ವೇಷಣೆ ಇದಾಗಿದೆ. ರೇಸಿಂಗ್ ಸಾಮರ್ಥ್ಯದ ಬೈಕ್ ತಯಾರಿಸಲು ಕಂಪನಿ ಪ್ರಮುಖ ಆದ್ಯತೆ ನೀಡಿದೆ. ಅತ್ಯಧಿಕ ಕಾರ್ಯಕ್ಷಮತೆಗೆ ಹೆಚ್ಚು ಒತ್ತು ನೀಡಿದ್ದೇವೆ. ದೇಶದ ಗ್ರಾಹಕರಿಗೆ ಹೊಸ ಅಪಾಚೆ ಬೈಕ್ ಹೊಸ ಹುರುಪು ನೀಡುವ ಭರವಸೆ ನಮಗಿದೆ ಎಂದು ಕಂಪನಿಯ ಅಧ್ಯಕ್ಷರಾದ ಎಚ್ ಎಸ್ ಗೊಯಿಂಡಿ ಹೇಳಿದ್ದಾರೆ.

More from DriveSpark

Article Published On: Monday, April 30, 2012, 17:11 [IST]
English summary
TVS Motor Company has finally launched the new Apache RTR 2012 flagship model at Rs 67,505. Earlier, the company had announced that it will launch the new Apache RTR on April 23rd. While the RTR 160 will be sold at Rs 67,505, the RTR 180 is priced at Rs 72,090 and the RTR 180 ABS at Rs 82,780 (ex-showroom prices, Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+