ಅಮೆರಿಕದಲ್ಲಿ ಪ್ರತಿ 11 ನಿಮಿಷಗಳಿಗೆ ಒಂದು ಬೈಕ್ ಕಳವು

By Nagaraja

ಹೌದು, ಬೈಕ್ ಸುರಕ್ಷತೆಗಾಗಿ ನಾವು ಎಷ್ಟೇ ಸೇಫ್ಟಿ ಮೆಷರ್ಸ್ ಕೈಗೊಂಡರೂ ಕಳ್ಳರು ಇಂತಹ ಪರಿಶ್ರಮಗಳನ್ನೆಲ್ಲ ಕೇವಲ ನಿಮಿಷ ಮಾತ್ರಕ್ಕೆ ವಿಫಲಗೊಳಿಸುತ್ತಾರೆ. ಇದೀಗ ಬಂದಿರುವ ಮಾಹಿತಿಯಂತೆ ಅಮೆರಿಕದಲ್ಲಿ ಪ್ರತಿ 11 ನಿಮಿಷಗಳಿಗೆ ಒಂದು ಬೈಕ್ ಕಳವು ಪ್ರಕರಣ ಕಂಡುಬರುತ್ತಿದೆಯಂತೆ..!

ಅಮೆರಿಕದ ನ್ಯಾಷನಲ್ ಇನ್ಸುರೆನ್ಸ್ ಕ್ರೈಮ್ ಬ್ಯೂರೋ ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಇದರ ಪ್ರಕಾರ ಪ್ರತಿ 11 ನಿಮಿಷಗಳಲ್ಲಿ ಒಂದು ಬೈಕ್ ಹೈಜಾಕ್ ಆಗುತ್ತಿದೆ. ಆದರೆ ಇಲ್ಲಿರುವ ಕುತೂಹಲಕಾರಿ ಅಂಶವೆಂದರೆ ಐಷಾರಾಮಿ ಬೈಕ್‌ ಕದಿಯುವುದರಲ್ಲೇ ಕಳ್ಳರು ಹೆಚ್ಚು ಉತ್ಸಾಹಿತರಾಗಿದ್ದಾರೆ.

ಅಧಿಕ ಸಿಸಿ ಹಾಗೂ ಹೆಚ್ಚು ಇಂಧನ ದಕ್ಷತೆಯುಳ್ಳ ದುಬಾರಿ ಬೈಕ್‌ಗಳನ್ನೇ ಕಳ್ಳರು ಅಪಹರಿಸುತ್ತಿದ್ದಾರೆ. ಪ್ರಸ್ತುತ ಅಮೆರಿಕ ಪೊಲೀಸರ ಪಾಲಿಗಂತೂ ಭಾರಿ ತಲೆನೋವು ಸೃಷ್ಟಿ ಮಾಡಿದೆ. ನ್ಯಾಷನಲ್ ಇನ್ಸುರೆನ್ಸ್ ಕ್ರೈಮ್ ಬ್ಯೂರೋ ವರದಿ ಪ್ರಕಾರ ಅಮೆರಿಕದ ಕ್ಯಾಲಿಫೋರ್ನಿಯಾ, ಟೆಕ್ಸಾಸ್ ಹಾಗೂ ಫ್ಲೋರಿಡಾ ಪ್ರದೇಶಗಳಲ್ಲಿ ಅತಿ ಹೆಚ್ಚು ಬೈಕ್ ಕಳವು ಪ್ರಕರಣ ಕಂಡುಬಂದಿದೆ.

ಹಾಗಿದ್ದರೂ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬೈಕ್ ಹೈಜಾಕ್ ಪ್ರಕರಣ ಶೇಕಡಾ 6ರಷ್ಟು ಕುಸಿದಿರುವುದಾಗಿ ವರದಿ ತಿಳಿಸಿದೆ.

ಹೊಂಡಾ ನಂಬರ್ ವನ್

ಹೊಂಡಾ ನಂಬರ್ ವನ್

ಜಪಾನ್ ಮೂಲದ ಹೊಂಡಾ ಬೈಕ್ ಕಂಪನಿ ಕಳ್ಳರ ಪಾಲಿಗೆ ಹೆಚ್ಚು ಪ್ರಿಯವೆನಿಸಿದೆ. ನ್ಯಾಷನ್ ಇನ್ಸುರೆನ್ಸ್ ಕ್ರೈಮ್ ಬ್ಯೂರೋ ಮಾಹಿತಿ ಪ್ರಕಾರ ವಿಶ್ವದೆಲ್ಲೆಡೆ ತನ್ನ ಆಕರ್ಷಕ ಲುಕ್ ಹಾಗೂ ಇಂಧನ ದಕ್ಷತೆಗೆ ಹೆಸರುವಾಸಿಯಾಗಿರುವ ಹೊಂಡಾ ಬೈಕ್‌ಗಳನ್ನೇ ಕಳ್ಳರು ಹೆಚ್ಚಾಗಿ ಹೈಜಾಕ್ ಮಾಡುತ್ತಿದ್ದಾರೆ.

ಯಮಹಾಗೆ ನಂ. 2

ಯಮಹಾಗೆ ನಂ. 2

ಯಮಹಾ ಬಹುತೇಕರ ಅಚ್ಚುಮೆಚ್ಚಿನ ಬೈಕ್. ಕಳ್ಳರ ಪಾಲಿಗೂ ಇದು ಅಚ್ಚುಮೆಚ್ಚಾಗಿದ್ದು, ಬೈಕ್ ಹೈಜಾಕ್ ಪ್ರಕರಣದಲ್ಲಿ ಎರಡನೇ ಸ್ಥಾನದಲ್ಲಿದೆ.

ಸುಜುಕಿ ಕೂಡಾ ಸುರಕ್ಷಿತವಲ್ಲ

ಸುಜುಕಿ ಕೂಡಾ ಸುರಕ್ಷಿತವಲ್ಲ

ಜಪಾನ್‌ನ ವಾಹನ ತಯಾರಕ ಕಂಪನಿ ಸುಜುಕಿ ಜಗತ್ತಿನಲ್ಲೇ ಭಾರಿ ಪ್ರಸಿದ್ಧಿ ಹೊಂದಿರುವ ಕಂಪನಿ. ಆದರೆ ಬೈಕ್ ಹೈಜಾಕ್ ಮಾಡುವವರ ಪೈಕಿ ಇದು ಮೂರನೇ ಸ್ಥಾನದಲ್ಲಿದೆ.

4ನೇ ಸ್ಥಾನದಲ್ಲಿ ಕವಾಸಕಿ

4ನೇ ಸ್ಥಾನದಲ್ಲಿ ಕವಾಸಕಿ

ಇತ್ತೀಚೆಗಷ್ಟೇ ಕವಾಸಕಿ ನೂತನ ಸ್ಪೋರ್ಟ್ಸ್ ಬೈಕ್ ಅನಾವರಣ ಮಾಡುವುದಾಗಿ ಘೋಷಿಸಿತ್ತು. ಆದರೆ ಬೈಕ್ ಹೈಜಾಕ್ ಪ್ರಕರಣದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಕೊನೆಯ ಸ್ಥಾನದಲ್ಲಿ ಅಮೆರಿಕ ಮೂಲದ ಬೈಕ್

ಕೊನೆಯ ಸ್ಥಾನದಲ್ಲಿ ಅಮೆರಿಕ ಮೂಲದ ಬೈಕ್

ಅಂದ ಹಾಗೆ ಬೈಕ್ ಹೈಜಾಕ್ ಪ್ರಕರಣ ಜಾಸ್ತಿಯಾಗಿ ಕಂಡುಬಂದರೂ ಅಮೆರಿಕ ಮೂಲದ ಬೈಕ್‌ಗಳ ಕಳವು ಪ್ರಕರಣ ಕೊನೆಯ ಸ್ಥಾನದಲ್ಲಿದೆ. ಅಮೆರಿಕ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆ ಹಾರ್ಲೆ ಡೇವಿಡ್‌ಸನ್ ಕೊನೆಯ ಸ್ಥಾನದಲ್ಲಿದೆ.

More from DriveSpark

Article Published On: Thursday, October 18, 2012, 9:45 [IST]
English summary
The National Insurance Crime Bureau of the US has made an ironical revelation, according to which, one bike is stolen every 11 minutes in America.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+