ಅಗ್ನಿಶಾಮಕ ವಾಹನವಾಗಿ ರಾಯಲ್ ಎನ್ ಫೀಲ್ಡ್ ಬುಲೆಟ್

ರಾಯಲ್ ಎನ್ ಫೀಲ್ಡ್ ಬುಲೆಟ್ ಗಳು ಜಗತ್ತಿನ ಹೆಚ್ಚಿನ ಜನರಿಗೆ ಅಚ್ಚುಮೆಚ್ಚು. ಅದರ ಬುಡುಬುಡು ಸದ್ದು, ಗತ್ತು ಗಾಂಭೀರ್ಯ, ಠೀವಿಗೆ ಸಾಟಿ ಇಲ್ಲ. ಇನ್ನುಮುಂದೆ ಈ ಬುಲೆಟ್ ಬೈಕುಗಳನ್ನು ಪುಣೆಯ ಅಗ್ನಿಶಾಮಕದಳದವರು ಅಗ್ನಿಶಾಮಕ ವಾಹನವಾಗಿ ಬಳಸಲಿದ್ದಾರೆ.

ಪುಣೆ ಅಗ್ನಿಶಾಮಕ ದಳದವರು ಆರು ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಾ 350 ಬುಲೆಟ್ ಖರೀದಿಸಿದ್ದಾರೆ. ಈ ಬುಲೆಟ್ ಗಳು ಸಣ್ಣ ಅಗ್ನಿಶಾಮಕ ವಾಹನಗಳಾಗಿ ಕಾರ್ಯನಿರ್ವಹಿಸಲಿವೆ. ಅಗ್ನಿಶಾಮಕ ಅವಶ್ಯಕತೆಗೆ ತಕ್ಕಂತೆ ಈ ಬೈಕನ್ನು ಮರುರೂಪಿಸಲಾಗಿದೆ.

ಈ ಬುಲೆಟ್ ನ ನಾಲ್ಕು ಭಾಗಗಳಲ್ಲೂ ವಿಶೇಷ ಟ್ಯಾಂಕ್ ರೂಪಿಸಲಾಗಿದ್ದು, ಇದರಲ್ಲಿ ನೀರು ಮತ್ತು ಸಂಕುಚಿತ ಗಾಳಿಯನ್ನು ತುಂಬಿಸಲಾಗುತ್ತದೆ. ಅಗ್ನಿನಂದಿಸುವ ಸಾಧನಗಳು ಮಾತ್ರವಲ್ಲದೇ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಬಲೆ, ಸೇರಿದಂತೆ ಸುರಕ್ಷತೆಯ ವಸ್ತುಗಳೂ ಇದೆ.

ರಾಯಲ್ ಎನ್ ಫೀಲ್ಡ್ ಬುಲೆಟ್ ಮೂಲಕ ಅಗ್ನಿಶಾಮಕ ಸಿಬ್ಬಂದಿ ಶೀಘ್ರವಾಗಿ ಘಟನಾ ಸ್ಥಳ ತಲುಪಿ ಪರಿಹಾರ ಕಾರ್ಯ ಕೈಗೊಳ್ಳಬಹುದು. ಸಂಚಾರ ದಟ್ಟಣೆಯಲ್ಲೂ ಈ ಬೈಕುಗಳು ಹೆಚ್ಚು ಅನುಕೂಲಕರ.

ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಾ ಬುಲೆಟ್ 350ಸಿಸಿ ಫೋರ್ ಸ್ಟ್ರೋಕ್ ಎಂಜಿನ್ ಹೊಂದಿದೆ. ಇದು 20 ಹಾರ್ಸ್ ಪವರ್ ಮತ್ತು 28 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಬುಲೆಟ್ ಮೂಲಕ ಸುರಕ್ಷತೆಯ ಸಾಮಗ್ರಿಗಳನ್ನು ಮಾತ್ರವಲ್ಲದೇ ಚಾಲಕ ಸೇರಿದಂತೆ ಇಬ್ಬರು ಅಗ್ನಿಶಾಮಕ ಸಿಬ್ಬಂದಿಗಳು ಪ್ರಯಾಣಿಸಲು ಸಾಧ್ಯವಿದೆ.

ಅಗ್ನಿಶಾಮಕ ದಳದ ಅವಶ್ಯಕತೆಗೆ ತಕ್ಕಂತೆ ಮಾರ್ಪಾಡು ಮಾಡಿರುವ ಈ ಬುಲೆಟಿಗೆ ತಗುಲಿದ ವೆಚ್ಚ ಸುಮಾರು 7 ಲಕ್ಷ ರುಪಾಯಿ. ಶೀಘ್ರದಲ್ಲಿ ದೇಶದ ವಿವಿಧ ನಗರಗಳಲ್ಲೂ ಇಂತಹ ಬುಲೆಟ್ ಅಗ್ನಿಶಾಮಕ ವಾಹನಗಳು ಆಗಮಿಸುವ ನಿರೀಕ್ಷೆಯಿದೆ.

More from DriveSpark

Article Published On: Monday, March 19, 2012, 14:46 [IST]
English summary
The Pune Fire Brigade has now purchased six Royal Enfield Electra 350s to be used as mini fire engines. The fire brigade has modified the Electra to suit its requirements.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+