ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟುಗಳು, ದರ 1,139 ರು.ನಿಂದ ಆರಂಭ
ದೇಶದ ಪ್ರಮುಖ ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಿಕಾ ಕಂಪನಿ ಸ್ಟೀಲ್ ಬರ್ಡ್ ನೂತನ ಇವಿ, ಕ್ರೂಝ್ ಮತ್ತು ಝೊರೊ ಶ್ರೇಣಿಯ ಹೆಲ್ಮೆಟುಗಳನ್ನು ಪರಿಚಯಿಸಿದೆ. ಇದರಲ್ಲಿ ಇವಿ ಶ್ರೇಣಿಯ ಹೆಲ್ಮೆಟ್ ಮಹಿಳಾ ಸವಾರರಿಗಾಗಿ ರೂಪಿಸಲಾಗಿದೆ. ಕ್ರೂಝ್ ಮತ್ತು ಝೊರೊ ಶ್ರೇಣಿಯ ಶಿರಸ್ತ್ರಾಣಗಳು ಪುರುಷ ಸವಾರರಿಗಾಗಿ ರೂಪಿಸಲಾಗಿದೆ.
ಇದರಲ್ಲಿ ಇವಿ ಮತ್ತು ಕ್ರೂಝ್ ಹಗುರ ಹೆಲ್ಮೆಟುಗಳಾಗಿವೆ. ಇವು ತೆರೆದ ಮುಖದ ಹೆಲ್ಮೆಟುಗಳಾಗಿವೆ. ಇವು ರಜತ, ಕೆಂಪು, ಬೇಬಿ ನಸುಗೆಂಪು, ನಸುಗೆಂಪು, ಬಿಳಿ ಮತ್ತು ಕಪ್ಪು ಬಣ್ಣಗಳ ಆಯ್ಕೆಗಳಲ್ಲಿ ದೊರಕಲಿದೆ. ಇವೆಲ್ಲವು ಬಹು ಬಣ್ಣದ ರೇಡಿಯಂ ಸ್ಟಿಕರ್ ಗಳನ್ನು ಹೊಂದಿದ್ದು, ಆಕರ್ಷಕವಾಗಿ ಮಿಣುಗುತ್ತವೆ.
ನೂತನ ಸ್ಟೀಲ್ ಬರ್ಡ್ ಹೆಲ್ಮೆಟುಗಳು ಆ್ಯಂಟಿ ಸ್ಕ್ರಾಚ್ ವಿಷರ್ ಫೀಚರುಗಳನ್ನು ಹೊಂದಿದ್ದು, ಇದಕ್ಕೆ ಗೀರುಗಳು ಆಗುವುದಿಲ್ಲ. ಜೊತೆಗೆ ಟಾಪ್ ಏರ್ ವೆಂಟ್ ಮತ್ತು ಮರುಜೋಡಿಸಬಹುದಾದ ಇಂಟಿರಿಯರ್ ಹಾಸುಗಳನ್ನು ಹೊಂದಿದೆ.
ನೂತನ ಇವಿ ಹೆಲ್ಮೆಟ್ ದರ ಸುಮಾರು 1,139 ರು. ಮತ್ತು ಕ್ರೂಝ್ ಹೆಲ್ಮೆಟ್ ದರ ಸುಮಾರು 1.349 ರುಪಾಯಿ ಇದೆ. ಝೋರೊ ಎಸ್ ಬಿ ಹೆಲ್ಮೆಟ್ ಪೂರ್ಣ ಪ್ರಮಾಣದಲ್ಲಿ ಮುಖ ಮರೆಮಾಡುವ ಹೆಲ್ಮೆಟ್ ಆಗಿದೆ. ಇದು ಬಿಳಿ, ಕಪ್ಪು ಮತ್ತು ರಜತ ಬಣ್ಣಗಳಲ್ಲಿ ದೊರಕುತ್ತದೆ. ಇದರ ದರ ಸುಮಾರು 2,199 ರುಪಾಯಿ ಇದೆ.


Click it and Unblock the Notifications









