ಸುಜುಕಿ ಸ್ವಿಸ್ ಸ್ಕೂಟರ್ ರಸ್ತೆಗೆ, ದರ 55 ಸಾವಿರ ರು.
ನೂತನ ಆಕರ್ಷಕ ಸ್ಕೂಟರ್ ದೇಶದ ಎಲ್ಲಾ ಶೋರೂಂಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. ಸುಜುಕಿ ಸ್ವಿಸ್, 4 ಸ್ಟ್ರೋಕ್, 125 ಸಿಸಿ ಎಂಜಿನ್ ಹೊಂದಿದ್ದು 8.58 ಹಾರ್ಸ್ ಪವರ್ ಮತ್ತು 9 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಸ್ಕೂಟರ್ ಪ್ರತಿಲೀಟರಿಗೆ ಸುಮಾರು 50 ಕಿ.ಮೀ. ಮೈಲೇಜ್ ನೀಡುತ್ತದೆ.
ಇದರ ಬಾಡಿ ವಿನ್ಯಾಸ ಆಕರ್ಷಕವಾಗಿದೆ. ದೇಶದ ಕೆಟ್ಟ ರಸ್ತೆಯಲ್ಲೂ ನಿರ್ಭೀತಿಯಿಂದ ಇದರಲ್ಲಿ ಪ್ರಯಾಣಿಸಬಹುದು. ಯಾಕೆಂದರೆ ಇದರಲ್ಲಿ ಟೆಲಿಸ್ಕೋಪಿಕ್ ಮುಂಭಾಗದ ಫ್ರೊಕ್ಸ್ ಇದ್ದು, ಆರಾಮವಾಗಿ ರೈಡ್ ಮಾಡಬಹುದಾಗಿದೆ.
ಟೆಕ್ ವಿಶೇಷತೆ
* 125ಸಿಸಿ 4 ಸ್ಟ್ರೋಕ್ ಎಂಜಿನ್
* ಪವರ್: 7 ಸಾವಿರ ಆರ್ಪಿಎಂಗೆ 6.4 ಕಿಲೋ ವ್ಯಾಟ್, 9.8 ಎನ್ಎಂ ಟಾರ್ಕ್ ಪವರ್
* ಸಿವಿಟಿ ಟ್ರಾನ್ಸ್ ಮಿಷನ್
* ಸೆಲ್ಫ್ ಮತ್ತು ಕಿಕ್ ಸ್ಟಾರ್ಟ್
* ಗ್ರೌಂಡ್ ಕ್ಲೀಯರೆನ್ಸ್: 160 ಮಿ.ಮೀ.
* ಡ್ರಮ್ ಬ್ರೇಕ್ಸ್
* ಸೀಟಿನ ಕೆಳಗಡೆ ಸಂಗ್ರಹ ಸಾಮರ್ಥ್ಯ: ಆರು ಲೀಟರಿನಷ್ಟು
* ಆಕರ್ಷಕ ಮುಂಭಾಗದ ಲೈಟ್
* ಬುಲ್ಟ್ ಇನ್ ಟರ್ನ್ ಸಿಗ್ನಲ್ಸ್
* ಆಕರ್ಷಕ ಸೈಲೆನ್ಸರ್ ಕವರ್
* ಬ್ಯಾಟರಿ: 12 ವೋಲ್ಟೆಜ್, 5ಎಎಚ್
ಸುಜುಕಿ ಸ್ವಿಸ್ 125ಸಿಸಿ ಸ್ಕೂಟರ್ ಚಿತ್ರಗಳನ್ನು ನೋಡಿರಿ


Click it and Unblock the Notifications









