ಟಿವಿಎಸ್ ಅಪಾಚೆ ಬೈಕ್ ಏಪ್ರಿಲ್ 23ರಂದು ರಸ್ತೆಗೆ

Posted By:

ಟಿವಿಎಸ್ ಅಪಾಚೆ ಹೊಸ ಬೈಕ್ ಆಗಮಿಸುವ ಕುರಿತಾದ ಸಸ್ಪೆನ್ಸ್ ಕೊನೆಗೊಂಡಿದೆ. ನೂತನ ಪರಿಷ್ಕೃತ ಅಪಾಚೆ ಬೈಕ್ ಏಪ್ರಿಲ್ 23ರಂದು ರಸ್ತೆಗಿಳಿಯಲಿದೆ ಎಂದು ಕಂಪನಿ ಅಧಿಕೃತವಾಗಿ ಪ್ರಕಟಿಸಿದೆ.

ಟೀಸರ್ ಚಿತ್ರವೊಂದನ್ನು ಪ್ರಕಟಿಸುವ ಮೂಲಕ ಟಿವಿಎಸ್ ನೂತನ ಬೈಕ್ ಕುರಿತು ಗ್ರಾಹಕರಲ್ಲಿ ಕಂಪನಿಯು ಕುತೂಹಲ ಹೆಚ್ಚಿಸಿತ್ತು. ಇದೀಗ ಹೊಸ ಬೈಕ್ ಬರೋದು ಖಚಿತವಾಗಿದೆ. ಆದರೆ ಈ ಬೈಕ್ ಬಜಾಜ್ ಪಲ್ಸರ್ ಮತ್ತು ಯಮಹಾ ಎಫ್‌ಝಡ್ ಜೊತೆ ಯಾವ ರೀತಿ ಪೈಪೋಟಿ ನಡೆಸಲಿದೆ ಎಂದು ಕಾದು ನೋಡಬೇಕಿದೆ.

"ಆಲ್ ನ್ಯೂ 2012 ಟಿವಿಎಸ್ ಅಪಾಚಿ ಸೀರಿಸ್ ಆರ್‌ಟಿಆರ್ ಆಕರ್ಷಕ ವಿನ್ಯಾಸದೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ಆಗಮಿಸಲಿದೆ" ಎಂದು ಹೊಸ ಬೈಕ್ ಕುರಿತಾಗಿ ಟಿವಿಎಸ್ ಮೋಟರ್ಸ್ ಮಾಹಿತಿ ನೀಡಿದೆ.

ತಾಜಾ ಮಾಹಿತಿಗಾಗಿ ನಿಮ್ಮ ಕಣ್ಣು ಇಲ್ಲಿರಲಿ.

English summary
The suspense over the launch of the new TVS Apache is coming to an end. TVS has announced the date on which it will launch its refreshed Apache. TVS has stated in the Apache Facebook page that it will be launching the new Apache on April 23.
Story first published: Friday, April 20, 2012, 10:03 [IST]
Please Wait while comments are loading...

Latest Photos