ಈ ತಿಂಗ್ಳಲ್ಲಿ ಟಿವಿಎಸ್ ಫೀನಿಕ್ಸ್ ಬೈಕ್ ಬರೋದು ಖಚಿತ
ಹೋಂಡಾ, ಹೀರೊ ಮೊಟೊಕಾರ್ಪ್ ಮತ್ತು ಬಜಾಜ್ ಆಟೋ ಕಂಪನಿಗಳ ಪ್ರತಿಸ್ಪರ್ಧೆಯಿಂದ ಟಿವಿಎಸ್ ಕಂಪನಿಯ ಮಾರುಕಟ್ಟೆ ಪಾಲು ಕಡಿಮೆಯಾಗಿದೆ. "ಕಂಪನಿಯು ಪರಿಚಯಿಸಲಿರುವ ಹೊಸ ಬೈಕ್ ಮತ್ತೆ ಮಾರಾಟ ಹೆಚ್ಚಿಸಿಕೊಳ್ಳಲು ಸಹಕರಿಸಲಿದೆ" ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಕಂಪನಿಯು ಆರಂಭಿಕವಾಗಿ ಫೀನಿಕ್ಸ್ 125 ಬೈಕ್ ಪರಿಚಯಿಸಲಿದೆ. ಪ್ರತಿ ತ್ರೈಮಾಸಿಕದಲ್ಲೂ ಒಂದೊಂದು ಉತ್ಪನ್ನವನ್ನು ಕಂಪನಿ ಪರಿಚಯಿಸಲು ಯೋಜಿಸಿದೆ" ಎಂದು ಟಿವಿಎಸ್ ಮೋಟರ್ ಚೇರ್ಮನ್ ವೇಣು ಶ್ರೀನಿವಾಸನ್ ಹೇಳಿದ್ದಾರೆ. ಅವರು ಕಂಪನಿಯ 26ನೇ ಎಜಿಎಂ ಸಭೆಯಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
ಟಿವಿಎಸ್ ಕಂಪನಿಯು ಈಗ 125 ಸಿಸಿ ಸೆಗ್ಮೆಂಟಿನಲ್ಲಿ ಫ್ಲೇಮ್ ಹೆಸರಿನ ಬೈಕ್ ಮಾರಾಟ ಮಾಡುತ್ತಿದೆ. ಟಿವಿಎಸ್ ಫ್ಲೇಮ್ ಬೈಕಿನ ಮಾರಾಟ ಅಷ್ಟೇನೂ ಅತ್ಯುತ್ತಮವಾಗಿಲ್ಲ. ಹೀಗಾಗಿ ಇದೇ ಸೆಗ್ಮೆಂಟಿಗೆ ಕಂಪನಿಯು ಹೊಸ ಫೀನಿಕ್ಸ್ ಬೈಕ್ ಪರಿಚಯಿಸಲು ನಿರ್ಧರಿಸಿದೆ.
ಹೊಸ ಬೈಕಿನಿಂದ ಕಂಪನಿಯ ಮಾರುಕಟ್ಟ ಪಾಲು ಫೀನಿಕ್ಸ್ ಹಕ್ಕಿಯಂತೆ ನೆಗೆಯಬಹುದೇ? ಕಾದು ನೋಡೋಣ.


Click it and Unblock the Notifications









