ಕುತೂಹಲ ಹೆಚ್ಚಿಸಿದ ಟಿವಿಎಸ್ ಅಪಾಚೆ ಟೀಸರ್

ಟಿವಿಎಸ್ ಯಾವತ್ತಿಗೂ ಇನ್ನೋವೆಟಿವ್ ಉತ್ಪನ್ನಗಳನ್ನು ಪರಿಚಯಿಸುವಲ್ಲಿ ಎತ್ತಿದ ಕೈ. ಕಂಪನಿಯು ಈಗಾಗಲೇ ಜೀವ್ ಕ್ಲಚ್‌ಲೆಸ್ ಬೈಕ್ ಮತ್ತು ಅಪಾಚೆ ಆರ್‌ಟಿಆರ್180 ಎಬಿಎಸ್ ಬೈಕನ್ನು ಪರಿಚಯಿಸಿದೆ. ಆದರೆ ಮಾರಾಟದಲ್ಲಿ ಮಾತ್ರ ಕಂಪನಿಯು ಪ್ರತಿಸ್ಪರ್ಧಿಗಳಿಂದ ಹಿಂದಿದೆ.
ನೂತನ ಬಜಾಜ್ ಪಲ್ಸರ್ 200ಎನ್ಎಸ್ ಮತ್ತು ಯಮಹಾ ಆರ್15 ವರ್ಷನ್ 2.0 ಬೈಕುಗಳು ಆಗಮಿಸುವ ಸಮಯದಲ್ಲಿ ಟಿವಿಎಸ್ ಕೂಡ ಮೈಕೊಡವಿಕೊಳ್ಳಲು ರೆಡಿಯಾಗಿದೆ. ಟಿವಿಎಸ್ ಅಪಾಚೆ ಟೀಸರ್ ಆವೃತ್ತಿ ಮೂಲಕ ಪ್ರತಿಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಲಿದೆ.
ಟಿವಿಎಸ್ ಮಾರಾಟ ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಹೀರೋ ಮೊಟೊಕಾರ್ಪ್ ಮತ್ತು ಬಜಾಜ್ ಆಟೋ ಮೊದಲೆರಡು ಸ್ಥಾನಗಳಲ್ಲಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications








