ಫೆರಾರಿ ಸ್ಮರಣೆಯ ಬೈಕ್: ದುಬಾರಿ ಮೊತ್ತಕ್ಕೆ ಹರಾಜು
ಫೆರಾರಿ ಅಂದಾಕ್ಷಣ ರೇಸ್ ಕಾರುಗಳ ವ್ರೂಂ.. ವ್ರೂಂ.. ಮೊರೆತ ಕಿವಿಯೊಳಗೆ ಕೇಳಬಹುದು. ಫೆರಾರಿ ಕಂಪನಿ ಕಾರು ಉತ್ಪಾದಿಸುವುದು ಎಲ್ಲರಿಗೂ ಗೊತ್ತು. ಆದ್ರೆ ಇದ್ಯಾವುದು ಫೆರಾರಿ ಬೈಕ್? ಎನ್ನುವ ಪ್ರಶ್ನೆ ಮನದಲ್ಲಿ ಮೂಡಿದರೆ ಅಚ್ಚರಿಯಿಲ್ಲ. ಇದು ಫೆರಾರಿ ಸಂಸ್ಥಾಪಕ ಎಜ್ನೊ ಫೆರಾರಿ ನೆನಪಿಗಾಗಿ ನಿರ್ಮಿಸಿದ ಬೈಕ್.
ಈ ಐಕಾನಿಕ್ ಬೈಕನ್ನು ಫೆರಾರಿ ಕಂಪನಿಯ ಕೋರಿಕೆ ಮೇರೆಗೆ ಇಂಗ್ಲೇಡಿನ ಡೇವಿಡ್ ಕೇ ನಿರ್ಮಿಸಿದ್ದ. 1990ರ ಆಸುಪಾಸಿನಲ್ಲಿ ಉತ್ಪಾದಿಸಿದ ಈ ಬೈಕ್ ಏಪ್ರಿಲ್ 29ರಂದು 137,700 ಡಾಲರ್ ಅಂದ್ರೆ ಸುಮಾರು 73,56,663 ರುಪಾಯಿಗೆ ಹರಾಜಾಗಿದೆ.
ವಿಶೇಷವೆಂದರೆ ಇದು ಹ್ಯಾಂಡ್ ಮೇಡ್ ಅಥವಾ ಕೈಯಿಂದ ನಿರ್ಮಿಸಿರುವ ಬೈಕ್. ಅಂದ್ರೆ ಈಗಿನಂತೆ ಗಂಟೆಗೆ ಹತ್ತರಂತೆ ಯಾಂತ್ರಿಕವಾಗಿ ಉತ್ಪಾದಿಸಿದ ಬೈಕಲ್ಲ.
ಎನ್ಜೊ ನೆನಪಿಗಾಗಿ ಬೈಕೊಂದನ್ನು ಅಭಿವೃದ್ಧಿಪಡಿಸಿಕೊಡುವಂತೆ ಡೇವಿಡ್ ಕೇಗೆ ಫರಾರಿ ತಿಳಿಸಿತ್ತು. ಆತ ಬೈಕ್ ರೇಸಿಂಗ್ ನಲ್ಲಿ ತನ್ನ ಕರಿಯರ್ ಆರಂಭಿಸಿದ್ದ. ಸುಮಾರು 3 ಸಾವಿರ ಗಂಟೆಗಳ ಕಾಲ ಶ್ರಮವಹಿಸಿ ಯಾವುದೇ ಯಂತ್ರದ ನೆರವು ಪಡೆಯದೇ(ಹ್ಯಾಂಡ್ ಮೇಡ್) ಈ ಬೈಕನ್ನು ಡೇವಿಡ್ ನಿರ್ಮಿಸಿದ್ದಾನೆ.
ಈ ಐಕಾನಿಕ್ ಬೈಕ್ 4 ಸಿಲಿಂಡರ್, 900 ಸಿಸಿ ಎಂಜಿನ್ ಹೊಂದಿದೆ. ಇದು 105 ಹಾರ್ಸ್ ಪವರ್ ಸಾಮರ್ಥ್ಯದಾಗಿದ್ದು, ಕೇವಲ ಮೂರು ಸೆಕೆಂಡಿನಲ್ಲಿ 60 ಕಿ.ಮೀ. ವೇಗ ಪಡೆಯುತ್ತದೆ.


Click it and Unblock the Notifications









