ಮತ್ತೆ ಮತ್ತೆ ವೆಸ್ಪಾ: ರೆಟ್ರೋ ಸ್ಕೂಟರ್ ಇಷ್ಟನಾ?
ನಂಗೊಂದು ಡೌಟಿತ್ತು. ಈಗ್ಲೂ ವೆಸ್ಪಾ ಸ್ಕೂಟರ್ ಹಳೆ ಖದರನ್ನ ಉಳಿಸಿಕೊಂಡಿದೆಯಾ? ಹೊಸ ತಲೆಮಾರಿಗೆ ವೆಸ್ಪಾ ಇಷ್ಟನಾ ಅಂತ. ಕೊಂಚ ತಡವಾಗಿಯಾದರೂ ವೆಸ್ಪಾ ರೈಡ್ ಮಾಡುವರನ್ನ, ಅದ್ರ ಕುರಿತು ಆಡಿಕೊಳ್ಳುವರನ್ನ, ಮೆಚ್ಚಿಕೊಳ್ಳುವರನ್ನ ಭೇಟಿಯಾದೆ.
ಒಂದ್ವಿಷ್ಯ ಯಾವತ್ತಿಗೂ ಮರೀಬಾರ್ದು. ಈಗ ಜನರು ಬದಲಾಗಿದ್ದಾರೆ. ಅವ್ರು ಹೆಚ್ಚು ಟ್ರೆಂಡಿಯಾದ ಸ್ಕೂಟರ್ ಬಯಸ್ತಾರೆ. ಹೊಸ ತಲೆಮಾರಿನ ರೆಟ್ರೋ ಸ್ಕೂಟರಾಗಿ ಜನರು ಈಗ್ಲೂ ವೆಸ್ಪಾ ಇಷ್ಟಪಡ್ತಾರ. ಈ ವಿಷ್ಯದಲ್ಲಿ ಜನರನ್ನು ಮಾತನಾಡಿಸಿದಾಗ ಸಿಕ್ಕಿದ್ದು ಹತ್ತಕ್ಕೆ ಏಳು ಅಂಕ. ಫಸ್ಟ್ ಕ್ಲಾಸ್ ಪಾಸ್!
ಬೆಂಗ್ಳೂರು ರಸ್ತೆಯಲ್ಲಿ ಬರೀ ಹರೆಯದ ಯುವಕ ಯುವತಿಯರಲ್ಲಿ ಮಾತ್ರ ಹೊಸ ಸ್ಕೂಟರ್ ಇರೋದಲ್ಲ. ಅಂಕಲ್ ಆಂಟಿ ಮಾತ್ರವಲ್ಲದೇ ರಿಟೈರ್ಡ್ ಆದ ಅಜ್ಜ ಅಜ್ಜಿಗೂ ವೆಸ್ಪಾ ಸ್ಕೂಟರ್ ಇಷ್ಟ. ಹೊಸ ವಿನ್ಯಾಸದ ಕುರಿತು ಹೆಚ್ಚಿನವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫ್ಯಾಷನ್ ಇಷ್ಟಪಡುವರಿಗೆ ಇಷ್ಟವಾಗುವ ಸ್ಕೂಟರಿದು. ಅತ್ಯಂತ ಆಕರ್ಷಕವಾದ, ವೈಬ್ರೆಂಟಾದ ಬಾಡಿ ಪೇಂಟ್, ಕ್ರೈಸ್ಟಲ್ ಹೆಡ್ ಲೈಟ್ಸ್ ಮತ್ತು ಇಂಡಿಕೇಟರ್, ಹಳೆ ಜಮಾನದ ಖದರು ನೆನಪಿಸಿವುಂತಹ ಮೆತ್ತನೆಯ ಚರ್ಮದ ಸೀಟು. ಇವೆಲ್ಲ ಕಾರಣದಿಂದ ವೆಸ್ಪಾ ಸ್ಕೂಟರನ್ನು ಜನರು ಖರೀದಿಸುತ್ತಿದ್ದಾರೆ.
ಹೊಸ ತಲೆಮಾರಿನ ರೆಟ್ರೋ ವೆಸ್ಪಾ ಸ್ಕೂಟರಾಗಿ ಎಕ್ಸಲೆಂಟಾಗಿ ರೈಡ್ ಮಾಡಬಹುದು. ಸ್ಮೂತ್ ಸವಾರಿ, ಸುಲಭ ನಿರ್ವಹಣೆಗೆ ಮತ್ತು ಫ್ಯಾಷನ್ ವಿಶೇಷತೆಗಳಿಗೆ ವೆಸ್ಪಾಕ್ಕೆ ವೆಸ್ಪಾವೇ ಸರಿಸಾಟಿ. ಹೊಸ ವೆಸ್ಪಾ ಹೆಚ್ಚು ಸೆಕ್ಸಿ.
ಪರ್ಸನಲ್ ಆಗಿ ವೆಸ್ಪಾ ಸ್ಕೂಟರ್ ಬಗ್ಗೆ ಯೋಚಿಸಿದಾಗ ನನಗೆ ಐಕಾನಿಕ್ ವೆಸ್ಪಾವೇ ನೆನಪಿಗೆ ಬರುತ್ತದೆ. ಅದರ ಹಳೆ ಜನಪ್ರಿಯತೆಯೇ ಸದ್ಯ ಇಲ್ಲಿ ಇದಕ್ಕೆ ಮಾರುಕಟ್ಟೆ ನೀಡುತ್ತಿದೆ. ಕೆಲವು ಯುವಕರು ವೆಸ್ಪಾದ ಕುರಿತು ನೋ ಇಂಟ್ರೆಸ್ಟ್ ಅಂತಾರೆ. ಅವ್ರಿಗೆ ಆಕ್ಟಿವಾ, ವೆಗೊ ಸಾಕಂತೆ.
ವೆಸ್ಪಾ ಸ್ಕೂಟರ್ ಕುರಿತು ಅಭಿಪ್ರಾಯ ಹಂಚಿಕೊಂಡ ಜಯನಗರದ ಕಿರಣ್, ಸಹನಾ, ಮ್ಯಾಥ್ಯುಸ್, ವಿಲ್ಸನ್ ಗಾರ್ಡನಿನ ಸರಳ, ಪೀಣ್ಯದ ಲತಾ, ಸುಧಾಮ ನಗರದ ಹನೀಫ್ ಗೆ ಧನ್ಯವಾದಗಳು. ಓದುಗರೇ ನಿಮ್ಗೂ ವೆಸ್ಪಾ ಸ್ಕೂಟರ್ ಇಷ್ಟನಾ? ನಮ್ಗೂ ಸ್ವಲ್ಪ ಹೇಳಿ.
ವೆಸ್ಪಾ ವಿನ್ಯಾಸಕ: ಕೊರೊಡಿನೊ ಡಿ ಅಸ್ಕನಿಯೊ
ವೆಸ್ಪಾ ಟೈಮ್ ಲೈನ್: ಇಟಲಿ, 1945-2012
ವೆಸ್ಪಾ ದರ: 66,661 ರು.
ವೆಸ್ಪಾ ಎಂಜಿನ್: 3 ಕವಾಟ, 125 ಸಿಸಿ
ವೆಸ್ಪಾ ಮೈಲೇಜ್: ಲೀಟರಿಗೆ 60 ಕಿ.ಮೀ.


Click it and Unblock the Notifications









