ಐಕಾನಿಕ್ ವೆಸ್ಪಾ ಏಪ್ರಿಲ್ ನಲ್ಲಿ ರಸ್ತೆಗೆ, ಸ್ವಾಗತಕ್ಕೆ ರೆಡಿನಾ?
ದೇಶದ ರಸ್ತೆಯಲ್ಲಿ ಮೋಡಿ ಮಾಡಿದ್ದ ಐಕಾನಿಕ್ ವೆಸ್ಪಾ ಮರು ಆಗಮನಕ್ಕೆ ಮಹೂರ್ತ ರೆಡಿಯಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ವೆಸ್ಪಾ ಅನಾವರಣಗೊಂಡಿತ್ತು. ಕಂಪನಿಯು ಏಪ್ರಿಲ್ ತಿಂಗಳಲ್ಲಿ ಈ ಸ್ಕೂಟರನ್ನು ದೇಶದ ರಸ್ತೆಗಿಳಿಸಲು ಯೋಜಿಸಿದೆ. ಕಂಪನಿಯು ವೆಸ್ಪಾ ಎಲ್ಎಕ್ಸ್ 125 ಆವೃತ್ತಿಯನ್ನು ಪರಿಚಯಿಸಲಿದೆ.
ಇಟಲಿಯ ದ್ವಿಚಕ್ರವಾಹನ ತಯಾರಿಕಾ ಕಂಪನಿ ಪಿಯಾಜಿಯೊ "ವೆಸ್ಪಾ ಎಲ್ಎಕ್ಸ್ 125" ಆವೃತ್ತಿಯನ್ನು ವಾಹನ ಪ್ರದರ್ಶನದಲ್ಲಿ ಅನಾವರಣ ಮಾಡಿತ್ತು. ಒಂದು ವರದಿಯ ಪ್ರಕಾರ ಏಪ್ರಿಲ್ 26ರಂದು ನೂತನ ವೆಸ್ಪಾ ರಸ್ತೆಗಿಳಿಯಲಿದೆ.
ಇದರೊಂದಿಗೆ ಕಂಪನಿಯು ದೇಶದಲ್ಲಿ ನೂತನ ಘಟಕವನ್ನೂ ಸ್ಪಾಪಿಸಲಿದೆ. ಇದರ ಉದ್ಘಾಟನಾ ಸಮಾರಂಭ ಏಪ್ರಿಲ್ 28ರಂದು ನಡೆಯಲಿದೆ. ಸುಜುಕಿ ಆಕ್ಸೆಸ್ 125, ಸ್ವಿಸ್ ಮತ್ತು ಮಹೀಂದ್ರ ಡ್ಯೂರೊ ಮುಂತಾದ 125 ಸಿಸಿ ಬಳಗಕ್ಕೆ ನೂತನ ವೆಸ್ಪಾ ಸ್ಕೂಟರ್ ಜೊತೆಯಾಗಲಿದೆ.
ವೆಸ್ಪಾ 125 ಸಿಸಿ ಎಂಜಿನ್ 10.26 ಅಶ್ವಶಕ್ತಿ ಮತ್ತು 9.6 ಎನ್ಎಂ ಟಾರ್ಕ್ ಪವರ್ ನೀಡಲಿದೆ. ಇದು ಸಿವಿಟಿ ಗೇರ್ ಬಾಕ್ಸ್ ಹೊಂದಿದ್ದು, ಪ್ರತಿಲೀಟರ್ ಪೆಟ್ರೋಲಿಗೆ 50 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ. ವೆಸ್ಪಾ ಎಲ್ಎಕ್ಸ್ 125 ಸ್ಕೂಟರ್ ದರ 60 ಸಾವಿರ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









