ಸೆಪ್ಟಂಬರ್ 14ರಂದು ಯಮಹಾ ರೇ ಸ್ಕೂಟರ್ ರಸ್ತೆಗೆ

Yamaha Ray To Be Launched On September 14
ಬಹುನಿರೀಕ್ಷಿತ ಯಮಹಾ ಸ್ಕೂಟರ್ ದೇಶದ ರಸ್ತೆಗಿಳಿಯಲು ಮಹೂರ್ತ ಸಿದ್ಧವಾಗಿದೆ. ಇಂಡಿಯಾ ಯಮಹಾ ಮೋಟರ್ಸ್ ಕಂಪನಿಯು ದೇಶದ ರಸ್ತೆಗೆ ಪ್ರಪ್ರಥಮ ಸ್ಕೂಟರ್ "ರೇ"ಯನ್ನು ಸೆಪ್ಟೆಂಬರ್ 14ರಂದು ಪರಿಚಯಿಸಲಿದೆ.

ಈಗಾಗಲೇ ಕಂಪನಿಯು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಜೊತೆ ಒಪ್ಪಂದ ಮಾಡಿಕೊಂಡಿದೆ. ದೇಶದ ಯುವಜನತೆಯನ್ನು ಸೆಳೆಯಲು ದೀಪಿಕಾ ಪಡುಕೋಣೆಯನ್ನು ಯಮಹಾ ರೇ ಸ್ಕೂಟರಿನ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ.

ರೇ ನಾಮಾಂಕಿತ ಸ್ಕೂಟರ್ ಮೂಲಕ ಕಂಪನಿಯು ಅತ್ಯಧಿಕ ಸ್ಪರ್ಧೆಯಿರುವ ಸ್ಕೂಟರ್ ಸೆಗ್ಮೆಂಟಿಗೆ ಕಂಪನಿಯು ಪ್ರವೇಶಿಸಲಿದೆ. ದೇಶದಲ್ಲಿ ಈಗಾಗಲೇ ಅತ್ಯುತ್ತಮ ಸ್ಕೂಟರುಗಳ ಮೂಲಕ ಕಂಪನಿಯು ಬೈಕ್ ಪ್ರೀಯರ ಮನಗೆದ್ದಿದೆ.

ಕಂಪನಿಯು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಕೆಲವು ಸ್ಕೂಟರುಗಳನ್ನು ಮಾರಾಟ ಮಾಡುತ್ತಿದೆ. ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಕಂಪನಿಯು ಕ್ಷೆನ್ 125, ಫಿನೊ ಮತ್ತು ಮಿಯೊ ಮುಂತಾದ ಸ್ಕೂಟರುಗಳನ್ನೂ ಪ್ರದರ್ಶಿಸಿತ್ತು.

ನೂತನ ಯಮಹಾ ರೇ ಸ್ಕೂಟರ್ 125 ಸಿಸಿ ಸೆಗ್ಮೆಂಟಿನಲ್ಲಿ ಜನಪ್ರಿಯವಾಗುವುದೋ ಕಾದುನೋಡಬೇಕಿದೆ. ಕಂಪನಿಯು ಈಗಾಗಲೇ ಈ ಸ್ಕೂಟರನ್ನು ಚೆನ್ನೈನಲ್ಲಿ ಟೆಸ್ಟ್ ಮಾಡಿರುವುದನ್ನು ನಾವು ವರದಿ ಮಾಡಿದ್ದೇವು. ಹೊಸ ಯಮಹಾ ರೇ ಸ್ಕೂಟರಿನ ಯಾವುದೇ ಟೆಕ್ ಮಾಹಿತಿ ಬಹಿರಂಗಗೊಂಡಿಲ್ಲ.

More from DriveSpark

Article Published On: Tuesday, August 21, 2012, 11:00 [IST]
English summary
India Yamaha Motors will launch its first scooter, the Ray in India on September 14. The Japanese two wheeler manufacturer has already created a lot of buzz around Ray by opening a pre-launch contest and by signing up Deepika Padukone as its brand ambassador.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+