ಯಮಹಾ "ರೇ", 125 ಸಿಸಿ ಸ್ಕೂಟರ್ ಟೆಸ್ಟ್ ಶುರು

Posted By:

ರೇ ನಾಮಾಂಕಿತ ನೂತನ 125 ಸಿಸಿ ಸ್ಕೂಟರನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲು ಯಮಹಾ ನಿರ್ಧರಿಸಿದೆ. ಜಪಾನಿನ ದ್ವಿಚಕ್ರವಾಹನ ತಯಾರಿಕಾ ಕಂಪನಿಯು ಚೆನ್ನೈನಲ್ಲಿ ಇತ್ತೀಚೆಗೆ ನಾಲ್ಕು ಹೊಸ ಸ್ಕೂಟರ್ ಗಳನ್ನು ಟೆಸ್ಟ್ ಮಾಡಿದೆ. ಯಮಹಾ ಕಂಪನಿಯ ನೂತನ ಸ್ಕೂಟರ್, ಡ್ಯೂರೊ, ಆಕ್ಸೆಸ್ ಸೇರಿದಂತೆ 125 ಸಿಸಿ ಸ್ಕೂಟರ್ ಮಾರುಕಟ್ಟೆಯೊಂದಿಗೆ ಸ್ಪರ್ಧೆ ನಡೆಸಲಿದೆ.

ಯಮಹಾ ಕಂಪನಿಯು ಪ್ರಸಕ್ತ ವರ್ಷದ ಆರಂಭದಲ್ಲಿ ದೆಹಲಿ ವಾಹನ ಪ್ರದರ್ಶನದಲ್ಲಿ ರೇ ಸ್ಕೂಟರನ್ನು ಅನಾವರಣ ಮಾಡಿತ್ತು. ಅಲ್ಲಿ ಈ ಸ್ಕೂಟರ್ ಮುಂದೆ ಜಾನ್ ಅಬ್ರಾಹಂ ಪೋಸ್ ನೀಡಿದ್ದರು. ದೇಶದ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ನೂತನ ಸ್ಕೂಟರನ್ನು ಕಂಪನಿಯು ಅಭಿವೃದ್ಧಿಪಡಿಸಿದೆ.

ಯಮಹಾ 125 ಸಿಸಿಯ ರೇ ಸ್ಕೂಟರ್ ಆಕರ್ಷಕ ಬಣ್ಣಗಳಲ್ಲಿ ದೊರಕಲಿದೆ. ಕಂಪನಿಯು ಚೆನ್ನೈ ಬಿಸಿಲಿನ ರಸ್ತೆಯಲ್ಲಿ ನೂತನ ಸ್ಕೂಟರ್ ಟೆಸ್ಟ್ ಮಾಡುವ ಮೂಲಕ, ದೇಶದ ರಸ್ತೆಗಿದು ಸೂಕ್ತ ಬೈಕ್ ಎಂದು ನಿರೂಪಿಸಿದೆ. ಕಂಪನಿಯು ಚೆನ್ನೈನಲ್ಲಿ ಹೆಚ್ಚಾಗಿ ವಾಹನಗಳನ್ನು ಟೆಸ್ಟ್ ಮಾಡುತ್ತದೆ.

ಕಂಪನಿಯು ವಿವಿಧ ಮಾದರಿಯ ಸ್ಕೂಟರುಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸುವುದಾಗಿ ಯಮಹಾ ಈ ಹಿಂದೆ ಹೇಳಿತ್ತು. ಇದರಲ್ಲಿ ಮೊದಲ ಸ್ಕೂಟರ್ ಆಗಿ ರೇ ಆಗಮಿಸಲಿದೆ. ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ಕ್ಷೆನ್ 125, ಫಿನೊ ಮತ್ತು ಮಿಯೊ ಮುಂತಾದ ಸ್ಕೂಟರುಗಳನ್ನೂ ಪ್ರದರ್ಶಿಸಿತ್ತು.

ದೇಶದಲ್ಲಿ 125 ಸಿಸಿ ಸೆಗ್ಮೆಂಟಿನಲ್ಲಿ ಸುಜುಕಿ ಆಕ್ಸೆಸ್, ಮಹೀಂದ್ರ ಡ್ಯೂರೊ, ಸುಜುಕಿ ಸ್ವಿಸ್ ಜನಪ್ರಿಯತೆ ಪಡೆದಿದೆ.

English summary
Yamaha is all set to ignite the Indian scooter market with its new 125cc scooter named Ray. The Japanese two wheeler manufacturer has brought four test vehicles to a race track in Chennai to conduct track testing. The track testing is good news for Yamaha fans as this means the Ray scooter is well on its way to an Indian launch.
Story first published: Wednesday, June 13, 2012, 11:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark