25ರ ಸಂಭ್ರಮದಲ್ಲಿ ಟಿವಿಎಸ್ ಸ್ಕೂಟಿ- ಮತ್ತೆರಡು ಹೊಸ ಬಣ್ಣಗಳಲ್ಲಿ ಪೆಪ್ ಪ್ಲಸ್ ಬಿಡುಗಡೆ..!
ಭಾರತದ ವಿಶ್ವಾಸರ್ಹ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟಿವಿಎಸ್ ತನ್ನ ಜನಪ್ರಿಯ ಉತ್ಪನ್ನವಾದ ಸ್ಕೂಟಿ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, 25ನೇ ವರ್ಷದ ಸಂಭ್ರಮದ ಹಿನ್ನೆಯಲ್ಲಿ ತನ್ನ ನೆಚ್ಚಿನ ಗ್ರಾಹಕರಿಗೆ ಯಾವುದೇ ಬೆಲೆ ಏರಿಕೆಯ ಹೊರೆ ಹಾಕದೆ ಮತ್ತೆರಡು ಹೊಸ ಬಣ್ಣಗಳಲ್ಲಿ ಸ್ಕೂಟಿ ಮಾರಾಟಕ್ಕೆ ಚಾಲನೆ ನೀಡಿದೆ.

ದೇಶಿಯ ಮಾರುಕಟ್ಟೆಗೆ ಈ ಹಿಂದೆ 1994ರಲ್ಲಿ ಅತಿ ಸಣ್ಣ ಸ್ಕೂಟರ್ ಮಾದರಿಯಾಗಿ ಪ್ರವೇಶ ಪಡೆದಿದ್ದ ಸ್ಕೂಟಿ ಉತ್ಪನ್ನವು ಬಿಡುಗಡೆಯಾದ ದಿನದಿಂದ ಇದುವರೆಗೂ ಮಹಿಳಾ ಗ್ರಾಹಕರ ಗ್ರಾಹಕರ ನೆಚ್ಚಿನ ಸ್ಕೂಟರ್ ಆವೃತ್ತಿಯಾಗಿ ಮಾರಾಟಗೊಳ್ಳುತ್ತಿದ್ದು, ಕಾಲಕ್ಕೆ ತಕ್ಕಂತೆ ಹೊಸ ಹೊಸ ಬದಲಾವಣೆಗಳನ್ನು ಕಂಡಿರುವ ಸ್ಕೂಟಿ ಮಾದರಿಯು ಇಂದು 25ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಈ ಹಿನ್ನಲೆ ಗ್ರಾಹಕರಿಗೆ ವಿಶೇಷ ಆಯ್ಕೆ ನೀಡುತ್ತಿರುವ ಟಿವಿಎಸ್ ಮೋಟಾರ್ ಸಂಸ್ಥೆಯು ಸ್ಕೂಟಿ ಆಯ್ಕೆಯಲ್ಲಿ ಹೆಚ್ಚುವರಿ ಎರಡು ಬಣ್ಣಗಳನ್ನು ಪರಿಚಯಿಸಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಬಣ್ಣಗಳ ಜೊತೆಗೆ ಹೊಸದಾಗಿ ರೆವಿಂಗ್ ರೆಡ್ ಮತ್ತು ಗ್ಲಿಟೆರಿಂಗ್ ಗೋಲ್ಡ್ ಎನ್ನುವ ಎರಡು ಹೊಸ ಬಣ್ಣಗಳ ಆಯ್ಕೆ ನೀಡಿದ್ದು, ಇದರ ಜೊತೆಗೆ ಹೊಸ ಸ್ಕೂಟರ್‌ಗಳಲ್ಲಿ 25ನೇ ವಾರ್ಷಿಕೋತ್ಸವದ ಬ್ಯಾಡ್ಜ್ ಅನ್ನು ಸಹ ಜೋಡಿಸಿರುವುದು ಹೊಸ ಸ್ಕೂಟಿಗೆ ಮತ್ತಷ್ಟು ಆಕರ್ಷಣೆ ತಂದಿದೆ.

ಟಿವಿಎಸ್ ಸಂಸ್ಥೆಯು ಸ್ಕೂಟಿ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಎರಡು ಆವೃತ್ತಿಗಳಲ್ಲಿ ಮಾರಾಟ ಮಾಡುತ್ತಿದ್ದು, ಸ್ಕೂಟಿ ಪೆಪ್ ಪ್ಲಸ್ ಮತ್ತು ಜೆಸ್ಟ್ 110 ಎನ್ನುವ ಎರಡು ಮಾದರಿಗಳು ಕೂಡಾ ಇಂದು ಮಾರುಕಟ್ಟೆಯಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಇದರಲ್ಲಿ ಪೆಪ್ ಪ್ಲಸ್ ಮಾದರಿಯಲ್ಲಿ ಮಾತ್ರವೇ ಇದೀಗ ಟಿವಿಎಸ್ ಸಂಸ್ಥೆಯು ಹೊಸ ಬಣ್ಣಗಳ ಆಯ್ಕೆಯನ್ನು ನೀಡಿದ್ದು, ಜೆಸ್ಟ್ 110 ಮಾದರಿಯಲ್ಲಿ ಈ ಹಿಂದೆ ನೀಡಲಾಗಿರುವ ವಿನ್ಯಾಸ ಮತ್ತು ತಾಂತ್ರಿಕ ಅಂಶಗಳನ್ನೇ ಮುಂದುವರಿಸಿದೆ. ಇನ್ನು ಎರಡು ಸ್ಕೂಟರ್‌ಗಳು ವಿಶೇಷವಾಗಿ ಮಹಿಳಾ ಗ್ರಾಹಕರಿಗಾಗಿಯೇ ಅಭಿವೃದ್ಧಿಗೊಂಡಿದ್ದು, 25 ವರ್ಷಗಳ ಅವಧಿಯಲ್ಲಿ 45 ಲಕ್ಷ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಎಂಜಿನ್ ಸಾಮರ್ಥ್ಯ
ಸ್ಕೂಟಿ ಪೆಪ್ ಪ್ಲಸ್ ಮಾದರಿಯು 87.8 ಸಿಸಿ ಏರ್ ಕೂಲ್ಡ್ ಎಂಜಿನ್‌ನೊಂದಿಗೆ 4.9-ಬಿಎಚ್‌ಪಿ ಮತ್ತು 5.8-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಮಹಿಳಾ ಸವಾರರ ಆಕರ್ಷಣೆ ಕಾರಣವಾಗಿದ್ದು, ಮೊಬೈಲ್ ಚಾರ್ಜರ್ ಸಾಕೆಟ್, ಸೈಡ್ ಸ್ಯಾಂಡ್ ಅಲಾರಾಂ, ಅಂಡರ್ ಸೀಟ್ ಸ್ಟೋರೆಜ್ ಲಾಕ್, ಡಿಆರ್‌ಎಲ್ಎಸ್ ಮತ್ತು ಓಪನ್ ಗ್ಲೋ ಬಾಕ್ಸ್ ಪಡೆದುಕೊಂಡಿದೆ.
MOST READ: ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಹಾಗೆಯೇ ಜೆಸ್ಟ್ 110 ಮಾದರಿಯು 109.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ಅತ್ಯುತ್ತಮ ಇಂಧನ ಕಾರ್ಯಕ್ಷಮತೆಯನ್ನು ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 62 ಕಿ.ಮೀ ಮೈಲೇಜ್ ನೀಡಬಲ್ಲದು.

ಮ್ಯಾಟೆ ಬ್ಲೂ, ಮ್ಯಾಟ ರೆಡ್, ಮ್ಯಾಟೆ ಯಲ್ಲೋ ಮತ್ತು ಮ್ಯಾಟೆ ಬ್ಲಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿರುವ ಜೆಸ್ಟ್ 110 ಮಾದರಿಯನ್ನು ಕಳೆದ ಕೆಲದಿನಗಳ ಹಿಂದಷ್ಟೇ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮ್ಯಾಟೆ ಪರ್ಪಲ್ ಬಣ್ಣದ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿತ್ತು.
MOST READ: ನೋ ಪಾರ್ಕಿಂಗ್‌ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!

ಈ ಮೂಲಕ ಮಹಿಳೆಯ ನೆಚ್ಚಿನ ಸ್ಕೂಟರ್ ಮಾದರಿಯಾಗಿ ಹೊರಹೊಮ್ಮಿರುವ ಸ್ಕೂಟಿ ಮಾದರಿಯ ಸದ್ಯ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ಸ್ಕೂಟರ್ ಮಾದರಿಗಳಿಗೆ ಪೈಪೋಟಿ ನೀಡುತ್ತಿದ್ದು, ಇದೀಗ ಬಿಡುಗಡೆ ಮಾಡಲಾಗಿರುವ ಹೊಸ ಬಣ್ಣದ ಆಯ್ಕೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.


Click it and Unblock the Notifications








