ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹಾಟ್ ಚಿಪ್ಸ್‌ನಂತೆ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಎಸ್‌ಯುವಿ ಕಾರುಗಳನ್ನು ಹಿಂದಿಕ್ಕಲು ಜೀಪ್ ಇಂಡಿಯಾ ಸಂಸ್ಥೆಯು ಮಹತ್ವದ ಯೋಜನೆಯೊಂದನ್ನು ರೂಪಿಸುತ್ತಿದ್ದು, ಕೈಗೆಟುವ ಬೆಲೆಯಲ್ಲಿ ಸಣ್ಣ ಗಾತ್ರದ ಎಸ್‌ಯುವಿ ಕಾರು ಮಾದರಿಯಾದ ರೆನೆಗೆಡ್ ಬಿಡುಗಡೆಗಾಗಿ ಸಿದ್ದಗೊಂಡಿದೆ.

ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಹೊಸ ಕಾರಿನ ಬಿಡುಗಡೆಯ ಬಗ್ಗೆ ಈಗಾಗಲೇ ಜೀಪ್ ಸಂಸ್ಥೆಯು ಸುಳಿವು ನೀಡಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆ ಇಂತದೊಂದು ಮಹತ್ವದ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಜೊತೆಗೆ ಹೊಸ ಕಾರುನ್ನು 4x4 ಡ್ರೈವ್ ವೈಶಿಷ್ಟ್ಯತೆಗಳೊಂದಿಗೆ ಪರಿಚಯಿಸುತ್ತಿರುವ ಜೀಪ್ ಸಂಸ್ಥೆಯು ಆಪ್ ರೋಡ್ ವಿನ್ಯಾಸಗಳೊಂದಿಗೆ ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಇದಕ್ಕಾಗಿಯೇ ಜೀಪ್ ಸಂಸ್ಥೆಯು ತಮ್ಮ ರೆನೆಗೆಡ್ ಫೇಸ್‍ಲಿಫ್ಟ್ ಕಾರಿನ ಟೀಜರ್ ಅನ್ನು ಈಗಾಗಲೇ ಅನಾವರಣಗೊಳಿಸಿದ್ದು, ವಿಟಾರಾ ಬ್ರೆಝಾ ಕಾರುಗಳನ್ನೇ ಟಾರ್ಗೆಟ್ ಮಾಡಿರುವ ಜೀಪ್ ಸಂಸ್ಥೆಯು ತನ್ನದೇ ಆದ ರೆನೆಗ್ರೆಡ್ ಕಾರುಗಳ ತಳಹದಿಯಲ್ಲೇ ಸಣ್ಣ ಗಾತ್ರದ ಎಸ್‌ಯುವಿಗಳನ್ನು ಅಭಿವೃದ್ಧಿ ಮಾಡಲಿದೆಯೆಂತೆ.

ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಜೊತೆಗೆ ಜೀಪ್ ಸಂಸ್ಥೆಯು ನಿರ್ಮಾಣ ಮಾಡಲಿರುವ ಸಣ್ಣ ಗಾತ್ರದ ರೆನೆಗೆಡ್ ಎಸ್‌ಯುವಿ ಮಾದರಿಯು ನೆಕ್ಸ್ಟ್ ಜನರೇಷನ್ ಫಿಯೆಟ್ ಪಾಂಡಾ ಕಾರಿನ ವೈಶಿಷ್ಟ್ಯತೆಗಳನ್ನೇ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಇದಕ್ಕೆ ಕಾರಣ ಫಿಯೆಟ್ ಪಾಂಡಾ ಕಾರುಗಳು ಈಗಾಗಲೇ ಮುಂದುವರಿದ ಕೆಲ ರಾಷ್ಟ್ರಗಳಲ್ಲಿ ಭಾರೀ ಪ್ರಮಾಣದ ಜನಪ್ರಿಯತೆಯೊಂದಿಗೆ ಮಾರಾಟವಾಗುತ್ತಿದ್ದು, ಅದೇ ತಂತ್ರಗಾರಿಕೆಯನ್ನು ಜೀಪ್ ಸಂಸ್ಥೆಯು ತನ್ನ ಹೊಸ ಎಸ್‌ಯುವಿ ಕಾರಿನಲ್ಲೂ ಅಳವಡಿಸುವ ಇರಾದೆಯಲ್ಲಿದೆ.

ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಹಾಗೆಯೇ ಹೊಸ ಕಾರುಗಳಲ್ಲಿ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಸೇರಿದಂತೆ ಹಲವು ಸುರಕ್ಷಾ ವೈಶಿಷ್ಟ್ಯತೆಗಳನ್ನು ಹೊಂದಿರುವ ಫಿಯೆಟ್ ಪಾಂಡಾ ಕಾರುಗಳು ಅತಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಈ ಹಿನ್ನೆಲೆ ಭಾರತದಲ್ಲಿ ಜೀಪ್ ಹೊಸ ಕಾರು ಕೂಡಾ ಜನಪ್ರಿಯತೆ ಹೊಂದುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಮೂಲಗಳ ಪ್ರಕಾರ, 2020ರ ಆರಂಭದಲ್ಲಿ ಹೊಸ ಕಾರುನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸಿರುವ ಜೀಪ್ ಸಂಸ್ಥೆಯು ಹೊಸ ಕಾರುಗಳಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ.

ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಕಾರಿನ ಬೆಲೆಗಳು(ಅಂದಾಜು)

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಜೀಪ್ ರನೆಗೆಡ್ ಮಾದರಿಯು ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 9.90 ಲಕ್ಷದಿಂದ ರೂ.13 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಇದರಿಂದಾಗಿ ಸದ್ಯ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾ, ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್ ಮತ್ತು ನೆಕ್ಸಾನ್ ಕಾರುಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗಲಿದ್ದು, ಹೊಸ ಕಾರಿನ ಮೇಲೆ ವಿಧಿಸಲಾಗುವ ಬೆಲೆಗಳ ಆಧಾರದ ಮೇಲೆ ರೆನೆಗೆಡ್ ಭವಿಷ್ಯವು ನಿರ್ಧಾರವಾಗಲಿದೆ ಎನ್ನಬಹುದು.

ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ

ಇನ್ನು ಜೀಪ್ ಸಂಸ್ಥೆಯು ಭಾರತದಲ್ಲಿ ಫಿಯೆಟ್ ಕ್ಲೈಸರ್ ಆಟೋ ಮೊಬೈಲ್ ಸಂಸ್ಥೆಯ ಜೊತೆಗೂಡಿ ಸ್ಥಳೀಯ ಮಟ್ಟದಲ್ಲೇ ಬೀಡಿಭಾಗಗಳನ್ನು ಬಳಸಿಕೊಂಡು ಅಗ್ಗದ ಬೆಲೆಯಲ್ಲಿ ಕಾರು ನಿರ್ಮಾಣ ಮಾಡುವ ಯೋಜನೆಗೆ ಚಾಲನೆ ನೀಡಿದ್ದು, 2019ರ ಅಂತ್ಯದ ವೇಳೆಗೆ ವಾರ್ಷಿಕವಾಗಿ 2.40 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುವ ಗುರಿಹೊಂದಿದೆ.

More from DriveSpark

Article Published On: Thursday, April 11, 2019, 16:04 [IST]
English summary
According to reports, Jeep India is planning to launch new Renegade SUV in India by Next Year.
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+