ಬಂತು ನೋಡಿ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸೈಕಲ್
ಇದು ಸಾಮಾನ್ಯ ಸೈಕಲ್. ಆದರೆ ನಿಮಗೆ ತುಂಬಾನೇ ದಣಿವಾದ್ದಲ್ಲಿ ಎಲೆಕ್ಟ್ರಿಕ್ ಸೈಕಲ್ ಆಗಿಯೂ ಬಳಸಬಹುದು. ಹೌದು, ಇಂತಹದೊಂದು ವಿನೂತನ ಆಯ್ಕೆ ವಿಶ್ವದ ದುಬಾರಿ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು ಒದಗಿಸುತ್ತಿದೆ.
ಇನ್ನು ಬಿಎಂಡಬ್ಲ್ಯು ಬ್ರಾಂಡ್ ಹೆಸರು ಕೇಳಿದ ತಕ್ಷಣ ಸೈಕಲ್ ಗುಣಮಟ್ಟ ಬಗ್ಗೆ ಪ್ರಶ್ನೆ ಕೇಳುವ ಹಾಗಿಲ್ಲ. ಯಾಕೆಂದರೆ ಈ ಕ್ರೂಸ್ ಸೈಕಲ್ ಗುಣಮಟ್ಟ ಶ್ರೇಷ್ಠ ಮಟ್ಟದಲ್ಲಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಹಾಗೆಯೇ ದರದ ಬಗ್ಗೆಯೂ ಹೆಚ್ಚು ತಕರಾರು ಮಾಡುವಂತಿಲ್ಲ. ಸ್ವಲ್ಪ ದುಬಾರಿಯಾದರೂ ಗುಣಮಟ್ಟ ಮುಖ್ಯ ಅಲ್ಲವೇ?

ಬಿಎಂಡಬ್ಲ್ಯು ಕ್ರೂಸ್ ಎಲೆಕ್ಟ್ರಿಕ್ ಸೈಕಲ್ ಆಗಿದ್ದರಿಂದ ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ಇದರ ಬಾಷ್ 250 ವಾಟ್ ಮೋಟಾರ್ ಗಂಟೆಗೆ ಗರಿಷ್ಠ 25 ಕೀ.ಮೀ. ವೇಗದಲ್ಲಿ ಚಲಿಸಲು ನೆರವಾಗಲಿದೆ.

ಹಾಗೆಯೇ ಒಮ್ಮೆ ಚಾರ್ಜ್ ಮಾಡಿಸಿದ ಬಳಿಕ ಗರಿಷ್ಠ 80 ಕೀ.ಮೀ. ತನಕ ಚಲಿಸಬಹುದಾಗಿದೆ.

ಇನ್ನು ಈ ಎಲೆಕ್ಟ್ರಿಕ್ ಸೈಕಲ್‌ನಲ್ಲಿ 4 ಮೋಡ್ ಡ್ರೈವಿಂಗ್ ಆಯ್ಕೆಗಳಿರಲಿವೆ. ಅವುಗಳೆಂದರೆ
- ಇಕೊ
- ಟೂರ್
- ಸ್ಪೋರ್ಟ್ ಹಾಗೂ
- ಸ್ಪೀಡ್/ಟರ್ಬೊ

ಮೂಲಗಳ ಪ್ರಕಾರ ಪ್ರಸ್ತುತ ಜರ್ಮನಿಯಲ್ಲಿ 1000 ಯುನಿಟ್‌ಗಳನ್ನು ಮಾರಾಟ ಮಾಡುವ ಯೋಜನೆಯನ್ನು ಬಿಎಂಡಬ್ಲ್ಯು ಹೊಂದಿದೆ.

ಹಾಗಿದ್ದರೂ ಯಾವುದೇ ಅಧಿಕೃತ ಲಾಂಚ್ ದಿನಾಂಕ ಅಥವಾ ದರದ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








