ದೆಹಲಿ ಆಟೋ ಎಕ್ಸ್ ಪೋದಲ್ಲಿ ಹೀರೊ 250ಸಿಸಿ ಬೈಕ್
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಹೋಂಡಾದ ನೂತನ 250ಸಿಸಿ ಬೈಕ್ ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ.
ನಿಮಗೆಲ್ಲರಿಗೂ ತಿಳಿದಂತೆ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ನೂತನ ಮಾದರಿಗಳನ್ನು ಪರಿಚಯಿಸಲು ದೇಶದ ಮುಂಚೂಣಿಯ ವಾಹನ ಸಂಸ್ಥೆಗಳು ಸನ್ನದ್ಧವಾಗಿ ನಿಂತಿದೆ.

ಸದ್ಯಕ್ಕೆ ಹೀರೊ 250ಸಿಸಿ ಬೈಕ್ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಹಾಗಿದ್ದರೂ ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ತನ್ನ ತಾಂತ್ರಿಕ ಜತೆಗಾರ ಎರಿಕ್ ಬ್ಯುಯೆಲ್ ರೇಸಿಂಗ್ ಸಹಯೋಗದಲ್ಲಿ ಈ ನೂತನ ಬೈಕ್ ಸಿದ್ಧಗೊಳ್ಳುತ್ತಿದೆ.
ಹೀರೊ ಪಾಲಿಗೆ ಎರಿಕ್ ಬ್ಯುಯೆಲ್ ರೇಸಿಂಗ್ ನಿರ್ಣಾಯಕವೆನಿಸಲಿದೆ. ಪ್ರಸ್ತುತ ಬೈಕ್ ದೇಶದ ಸ್ಪೋರ್ಟ್ ಬೈಕ್ ವಿಭಾಗದಲ್ಲಿ ಹೊಸ ನಿರೀಕ್ಷೆಗೆ ಕಾರಣವಾಗಿದೆ.


Click it and Unblock the Notifications








