ಅಮೆರಿಕದಲ್ಲಿ ಮುಂದಿನ ವರ್ಷ ಹೀರೊ ಕಾರ್ಯಾರಂಭ
ಎರಿಕ್ ಬ್ಯುಯೆಲ್ ರೇಸಿಂಗ್ ಜತೆ ಪಾಲುದಾರಿಕೆ ಹೊಂದಿರುವ ಹೀರೊ ಮೊಟೊಕಾರ್ಪ್, ಮುಂದಿನ ವರ್ಷ ಅಮೆರಿಕ ಮಾರುಕಟ್ಟೆಗೆ ಕಾಲಿಡಲಿದೆ.
ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ
ಈ ಹಿಂದೆ ಅಮೆರಿಕನ್ ಇಂಟರ್ ನ್ಯಾಷನಲ್ ಮೋಟಾರ್ ಸೈಕಲ್ ಎಕ್ಸ್‌ಪೋದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿತ್ತು. ಇದೀಗ ಹೀರೊ ಮೊಟೊಕಾರ್ಪ್ ಮಹಾನಿರ್ದೇಶಕ ಪವಾನ್ ಮುಂಜಾಲ್ ದೃಢೀಕರಿಸಿದ್ದಾರೆ.

ಅಂದ ಹಾಗೆ ದೇಶದ ಅತಿದೊಡ್ಡ ದ್ವಿಚಕ್ರ ತಯಾರಕ ಸಂಸ್ಥೆಯಾದ ಹೀರೊ, ಮುಂದಿನ ವರ್ಷ ಅಮೆರಿಕ ಹಾಗೂ ಕೆನಡಾದಲ್ಲಿ ಮಾರಾಟ ಪ್ರಕ್ರಿಯೆ ಆರಂಭಿಸಲಿದೆ.
ನಿಮ್ಮ ಮಾಹಿತಿಗಾಗಿ ಎರಿಕ್ ಬ್ಯುಯೆಲ್ ರೇಸಿಂಗ್ ಜತೆ ಹೀರೊ ತಂತ್ರಜ್ಞಾನ ಪಾಲುದಾರಿಕೆಯನ್ನು ಹೊಂದಿದೆ. ಈ ಮೂಖಾಂತರ ಈಗಾಗಲೇ ದಕ್ಷಿಣ ಅಮೆರಿಕ ಹಾಗೂ ಆಫ್ರಿಕಾ ದೇಶದಲ್ಲಿ ತನ್ನ ಸಾನಿಧ್ಯ ಗಟ್ಟಿ ಮಾಡಿರುವ ಹೀರೊ, ಉತ್ತರ ಅಮೆರಿಕವನ್ನು ಪ್ರವೇಶಿಸಲಿದೆ. ಹಾಗೆಯೇ 2020ರ ವೇಳೆಗೆ ಪ್ರಮುಖ 50 ದೇಶಗಳಲ್ಲಿ ಮಾರಾಟ ಆರಂಭಿಸುವುದು ಹೀರೊ ಗುರಿಯಾಗಿದೆ.



Click it and Unblock the Notifications








