ಹೋಂಡಾದಿಂದ 'ಆಕ್ಟಿವಾ ಡಾಕ್ಟರ್' ಯೋಜನೆ
ನಿಮ್ ಮನೆಗೆ ಎಲ್ಲಾದರೂ ಆಕ್ಟಿವಾ ಡಾಕ್ಟರ್ ಭೇಟಿ ಕೊಟ್ಟಿದ್ರಾ ಹೇಗೆ? ಭಯಪಡಬೇಡಿ, ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಟು ವೀಲರ್ಸ್, ತನ್ನ ಅತ್ಯಂತ ಜನಪ್ರಿಯ ಆಕ್ಟಿವಾ ಸ್ಕೂಟರ್ ನಿರ್ವಹಣೆಗಾಗಿ ನೂತನ 'ಆಕ್ಟಿವಾ ಡಾಕ್ಟರ್' ಯೋಜನೆಯೊಂದನ್ನು ರೂಪಿಸಿದೆ.
ಪ್ರಮುಖವಾಗಿಯೂ ಸರ್ವಿಸ್ ಸೆಂಟರ್‌ಗಳ ಕೊರತೆಯಿರುವ ಗ್ರಾಮೀಣ ಪ್ರದೇಶಗಳಲ್ಲಿ ಆಕ್ಟಿವಾ ಡಾಕ್ಟರ್ ಕಾರ್ಯಾಚರಿಸಲಿದೆ. ಇದು ನಿಮ್ಮ ಆಕ್ಟಿವಾದ ಸಮಸ್ಯೆಯನ್ನು ಮನೆ ಬಾಗಿಲಿಗೆ ಬಗೆಹರಿಸಲು ನೆರವಾಗಲಿದೆ.
ಗ್ರಾಮೀಣ ಪ್ರದೇಶದ ಮಾರುಕಟ್ಟೆಗಳಲ್ಲೂ ತನ್ನ ಸಾನಿಧ್ಯವನ್ನು ಹೆಚ್ಚಿಸಲು ಹೊರಟಿರುವ ಹೋಂಡಾ, ಸ್ಕೂಟರುಗಳ ರಿಪೇರಿ ಹಾಗೂ ನಿರ್ವಹಣೆ ಕಾರ್ಯಕ್ರಮವನ್ನು ಆರಂಭಿಸಿದೆ.
ನಿಮ್ಮ ಮಾಹಿತಿಗಾಗಿ ಹೋಂಡಾ ಟು ವೀಲರ್ಸ್ ಈಗಾಗಲೇ ಮೊಬೈಲ್ ಸರ್ವೀಸ್ ವ್ಯಾನ್‌ಗಳನ್ನು ಹಮ್ಮಿಕೊಂಡಿದೆ. ನೂತನ ಆಕ್ಟಿವಾ ಡಾಕ್ಟರ್ ಮನೆ ಬಾಗಿಲಿಗೆ ಬಂದು ರಿಪೇರಿ ಮಾಡಲಿದ್ದಾರೆ. ಹಾಗೆಯೇ ಮೂಲಭೂತವಾಗಿ ಇರಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ಆಕ್ಟಿವಾ ಡಾಕ್ಟರ್ ಹೊಂದಿದೆ.
ಕೆಲವು ದಿನಗಳ ಹಿಂದೆಯಷ್ಟೇ 2013 ನವೆಂಬರ್ ಮಾರಾಟದಲ್ಲಿ ಹೀರೊ ಸ್ಪ್ಲೆಂಡರ್ ಹಿಂದಿಕ್ಕಿದ ಆಕ್ಟಿವಾ, ದೇಶದ ಅತ್ಯಂತ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನವೆಂಬ ಹೆಮ್ಮೆಗೆ ಪಾತ್ರವಾಗಿತ್ತು.


Click it and Unblock the Notifications









