ಹೋಂಡಾ, ಬಜಾಜ್, ಟಿವಿಎಸ್ ಬೈಕ್ ದರ ಏರಿಕೆ
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆಗಳಾದ ಹೋಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ, ಬಜಾಜ್ ಆಟೋ ಮತ್ತು ಟಿವಿಎಸ್ ಮೋಟಾರ್ ಕಂಪನಿಗಳು ತನ್ನ ಆವೃತ್ತಿಯ ಬೈಕ್‌ಗಳ ದರವನ್ನು 800 ರುಪಾಯಿಗಳ ವರೆಗೆ ಏರಿಕೆಗೊಳಿಸಿದೆ.
ಪ್ರಮುಖವಾಗಿಯೂ ಸಾಗಾಣಿಕೆಯ ಶುಲ್ಕವನ್ನು ನಿಭಾಯಿಸುವ ನಿಟ್ಟಿನಲ್ಲಿ ಈ ಬೆಲೆ ಏರಿಕೆ ಕಂಡುಬಂದಿದೆ. ಎಪ್ರಿಲ್ 1ರಿಂದ ಅನ್ವಯವಾಗುವ ರೀತಿಯಲ್ಲಿ ತನ್ನೆಲ್ಲ ಮಾಡೆಲ್‌ಗಳಿಗೆ ರು. 800ರಷ್ಟು ದರ ಏರಿಕೆಗೊಳಿಸಲಾಗಿದೆ ಎಂದು ಹೋಂಡಾ ಪ್ರಕಟಿಸಿದೆ.
ಇತ್ತೀಚೆಗಿನ ಕೆಲವು ತಿಂಗಳುಗಳಲ್ಲಿನ ಡೀಸೆಲ್ ದರ ಏರಿಕೆಯಿಂದಾಗಿ ಸಾಗಾಣಿಕೆ ಶುಲ್ಕಯಲ್ಲಿ ಗಣನೀಯ ವರ್ಧನೆ ಕಂಡುಬಂದಿದೆ. ಇದನ್ನು ನಿಭಾಯಿಸಲು ಸಣ್ಣ ಪ್ರಮಾಣದ ದರ ಏರಿಕೆಗೊಳಿಸಲಾಗಿದೆ ಎಂದು ಹೋಂಡಾ ಪ್ರಕಟಣೆಯಲ್ಲಿ ತಿಳಿಸಿದೆ.
ಮತ್ತೊಂದೆಡೆ ಬಜಾಜ್ ಆಟೋ ಕೂಡಾ ರು. 500ರಷ್ಟು ದರ ಏರಿಕೆಗೊಳಿಸಿದೆ. ನೂತನ ದರ ಎಪ್ರಿಲ್ 12ರಿಂದ ಜಾರಿಗೆ ಬಂದಿದೆ. ಇನ್ನೊಂದೆಡೆ ಟಿವಿಎಸ್ ಮೋಟಾರ್ಸ್ ಕೂಡಾ ಈಗಾಗಲೇ ಶೇಕಡಾ 0.25ರಿಂದ ಶೇಕಡಾ 0.50 ತನಕ ದರ ಹೆಚ್ಚಳಗೊಳಿಸಿದೆ.


Click it and Unblock the Notifications









