ನರ್ಸಾಪುರ ಘಟಕದಿಂದ ಹೋಂಡಾ ಆಕ್ಟಿವಾ ಬಿಡುಗಡೆ
ಪ್ರಸಕ್ತ ಸಾಲಿನಲ್ಲಿ 28 ಲಕ್ಷ ಯುನಿಟ್‌ಗಳಿಂದ 46 ಲಕ್ಷ ಯುನಿಟ್‌ಗಳಿಗೆ ಉತ್ಪಾದನಾ ಸಾಮರ್ಥ್ಯ ವೃದ್ಧಿಸುವತ್ತ ಕಾರ್ಯ ಮಗ್ನವಾಗಿರುವ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್ಐ) ಯೋಜನೆ ಅನುಷ್ಠಾಗೊಳಿಸುವತ್ತ ಕಾರ್ಯಮಗ್ನವಾಗಿದೆ.
ಈ ಮೂಲಕ ಉತ್ಪಾದನಾ ಸಾಮರ್ಥ್ಯದಲ್ಲಿ ಶೇಕಡಾ 64ರಷ್ಟು ಏರಿಕೆ ಸಾಧಿಸುವುದು ಕಂಪನಿ ಗುರಿಯಾಗಿದೆ. ಇತ್ತೇಚೆಗೆ ಬೆಂಗಳೂರು ಸಮೀಪದ ಕೋಲಾರ ಜಿಲ್ಲೆಯ ನರ್ಸಾಪುರ ಘಟಕವನ್ನು ಆರಂಭಿಸಿದ್ದ ಹೋಂಡಾ, ಆಕ್ಟಿವಾ ಮೊದಲ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು.
ಸಹಜವಾಗಿಯೇ ಹೋಂಡಾ ಘಟಕಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತಿರುವಂತೆಯೇ ಕಾಯುವಿಕೆ ಅವಧಿ ಇಳಿಕೆಯಾಗುತ್ತಿದೆ. ಇದು ಗ್ರಾಹಕರ ಪಾಲಿಗೆ ಉತ್ತಮವಾಗಿದೆ.
ಮಾರುಕಟ್ಟೆಯಲ್ಲಿ ನಿಕಟ ಪ್ರತಿಸ್ಪರ್ಧಿಗಳಿಂದ ಸ್ಪರ್ಧೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆದಷ್ಟು ಬೇಗನೇ ಹೊಸ ಉತ್ಪಾದನೆಗಳನ್ನು ಗ್ರಾಹಕರಿಗೆ ತಲುಪಿಸುವುದು ಕಂಪನಿ ಗುರಿಯಾಗಿದೆ.


Click it and Unblock the Notifications









