ಕೇರಳದಲ್ಲಿ 'ನೊ ಹೆಲ್ಮೆಟ್ ನೊ ಪೆಟ್ರೋಲ್'

By Nagaraja

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಶಿರಸ್ತ್ರಾಣ ಧರಿಸಬೇಕೆಂಬ ನಿಯಮ ಜಾರಿಯಲ್ಲಿದ್ದರೂ ಚಾಲಕರು ಇಂತಹ ನಿಮಯಗಳನ್ನು ಗಾಳಿಗೆ ತೂರುತ್ತಿರುವ ಹಲವಾರು ಪ್ರಸಂಗಗಳನ್ನು ನಾವು ನೋಡಿರುತ್ತೇವೆ.

ಇದರಿಂದ ಎಚ್ಚೆತ್ತುಕೊಂಡಿರುವ ಕೇರಳದಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲು ಹೊಸತೊಂದು ಯೋಜನೆ ರೂಪಿಸಲಾಗಿದೆ. ಇದರಂತೆ ಹೆಲ್ಮೆಟ್ ಧರಿಸದೇ ಪೆಟ್ರೋಲ್ ಬಂಕ್‌ಗಳಿಗೆ ತೆರಳುವ ಸವಾರರಿಗೆ ಇನ್ನು ಮುಂದೆ ಪೆಟ್ರೋಲ್ ಸಿಗಲ್ಲ.


ಈ ಸಂಬಂಧ 18 ಪೆಟ್ರೋಲ್ ಬಂಕ್‌ಗಳ ಜತೆ ಕೊಚ್ಚಿ ರಸ್ತೆ ಸುರಕ್ಷಾ ಪ್ರಾಧಿಕಾರ ಮಾತುಕತೆ ನಡೆಸಿಕೊಂಡಿದೆ. ಇದಕ್ಕೆ ಪೆಟ್ರೋಲ್ ಬಂಕ್‌ಗಳು ಒಪ್ಪಿಗೆ ಸೂಚಿಸಿದ್ದು, ಯೋಜನೆಯು ಆರಂಭದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಯೋಜನೆ ಯಶಸ್ಸು ಕಂಡಲ್ಲಿ ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ವ್ಯಾಪಿಸುವ ಇರಾದೆಯನ್ನು ಪ್ರಾಧಿಕಾರ ಹೊಂದಿದೆ.

ಈ ನಡುವೆ ಇದುವರೆಗೆ ತಮ್ಮ ಹಾಗೂ ಸರಕಾರದ ನಡುವೆ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಎರ್ನಾಕುಳಂ ಜಿಲ್ಲೆಯ ಪೆಟ್ರೋಲಿಯಂ ವಿತರಕ ಸಂಸ್ಥೆಯ ಅಧ್ಯಕ್ಷ ಎಂ. ರಾಧಾಕೃಷ್ಣನ್ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಪ್ರಸ್ತುತ ಯೋಜನೆಗೆ ಸ್ವಲ್ಪ ಹಿನ್ನಡೆಯಾದಂತಾಗಿದೆ.

ಕೇರಳದಲ್ಲಿ ಹೆಲ್ಮೆಟ್ ಧರಿಸದ ಸವಾರರ ಮೇಲೆ ದಂಡ ವಿಧಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಈ ನೂತನ ಪ್ರಯೋಗ ಹಮ್ಮಿಕೊಂಡಿದೆ. ಒಟ್ಟಿನಲ್ಲಿ ಸವಾರರಿಗೆ ತಮ್ಮ ತಮ್ಮ ತಲೆಗಳ ಮೇಲೆ ಬಗ್ಗೆ ಇಲ್ಲದ ಖಾಲಜಿ ಪೊಲೀಸರಿಗೆ ಯಾಕೆ? ಎಂಬ ಪ್ರಶ್ನೆಗೆ ನೀವೇ ಉತ್ತರಿಸಬೇಕಾಗುತ್ತದೆ.

More from DriveSpark

Article Published On: Tuesday, November 12, 2013, 14:33 [IST]
English summary
To restrict two-wheeler riders who are travelling without helmets, Kochi Road Safety Autority has introuced new scheme in kerala.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+