ಸೆಪ್ಟೆಂಬರ್‌ನಲ್ಲಿ ನಿಮ್ಮ ಕೈಸೇರಲಿದೆ ಕೆಟಿಎಂ ಬೈಕ್

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಆಟೋ, ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಕೆಟಿಎಂ 390 ಡ್ಯೂಕ್ ನೆಕ್ಟ್ ಸ್ಪೋರ್ಟ್ಸ್ ಬೈಕನ್ನು ದೇಶೀಯ ಗ್ರಾಹಕರಿಗೆ ಹಸ್ತಾಂತರಿಸುವುದಾಗಿ ಘೋಷಿಸಿದೆ.

ಜೂನ್ ತಿಂಗಳಲ್ಲಿ ಭಾರತೀಯ ಪ್ರೀಮಿಯಂ ಬೈಕ್ ಸೆಗ್ಮೆಂಟ್‌ಗೆ ದಾಳಿಯಿಟ್ಟಿದ್ದ ಕೆಟಿಎಂ ಡ್ಯೂಕ್ 390 ಬೈಕ್ ಪ್ರಿಯರಲ್ಲಿ ಭಾರಿ ಕುತೂಹಲ ಕೆರಳಿಸಿತ್ತು. ಇದರ ದರ 1.80 ಲಕ್ಷ ರು.ಗಳ ಅಸುಪಾಸಿನಲ್ಲಿದೆ.


ಈ ನಡುವೆ ಕೆಟಿಎಂ ಡ್ಯೂಕ್ ಲಾಂಚ್ ಆಗಿರುವ ಎರಡು ತಿಂಗಳೊಳಗೆ 1,500ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಅಧಿಕೃತ ಮಾಹಿತಿಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಹಾಗೆಯೇ ಕೆಟಿಎಂ ಡ್ಯೂಕ್‌ಗಾಗಿ ಮೂರು ತಿಂಗಳುಗಳಷ್ಟು ಕಾಲ ಕಾಯಬೇಕಾಗಿದೆ ಎಂಬುದು ಕೂಡಾ ತಿಳಿದು ಬಂದಿದೆ.

ಇದು ಬಜಾಜ್ ಆಟೋದಿಂದ ಬಿಡುಗಡೆಗೊಂಡಿರುವ ಮೂರನೇ ಕೆಟಿಎಂ ಬ್ರಾಂಡ್ ಬೈಕಾಗಿದೆ. ಇದನ್ನು ಸಂಪೂರ್ಣವಾಗಿಯೂ ಪುಣೆಯ ಚಕನ್ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆಸ್ಟ್ರೀಯಾ ದ್ವಿಚಕ್ರ ತಯಾರಕ ಕಂಪನಿಯಾಗಿರುವ ಕೆಟಿಎಂನಲ್ಲಿ ಶೇಕಡಾ 48ರಷ್ಟು ಶೇರನ್ನು ಬಜಾಜ್ ಆಟೋ ಹೊಂದಿದೆ.

Article Published On: Saturday, August 17, 2013, 14:39 [IST]
English summary
Are you waiting for your KTM 390 Duke's delivery? India's two wheeler maker Bajaj Auto it will start the domestic delivery of its sports bike KTM 390 Duke by end of September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+