ಎಲ್‌ಎಂಎಲ್ ಫ್ರೀಡಂ ದೆಹಲಿಯಲ್ಲಿ ರಿ ಲಾಂಚ್
ಒಂದು ಕಾಲಘಟ್ಟದಲ್ಲಿ ದೇಶೆದೆಲ್ಲೆಡೆ ಉತ್ತಮ ಜನಪ್ರಿಯತೆ ಸಾಧಿಸಿದ್ದ ಎಲ್‌ಎಂಎಲ್ ಫ್ರೀಡಂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮರು ಲಾಂಚ್ ಆಗಿದೆ.
ಹಾಗಿದ್ದರೂ ಈ ದ್ವಿಚಕ್ರ ವಾಹನ ಬಗ್ಗೆ ಹೆಚ್ಚಿನ ಮಾಹಿತಿ ಹೊರಂಬಂದಿಲ್ಲ. ಹಾಗೆಯೇ ಹೆಚ್ಚಿನ ಪ್ರಚಾರವಿಲ್ಲದೆ ಎಲ್‌ಎಂಎಲ್ ಫ್ರೀಡಂ ರಿ ಲಾಂಚ್ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ.
ನೂತನ ಫ್ರೀಡಂ ಬೈಕ್‌ನಲ್ಲಿ ಹೊಸ ಕಲರ್ ವೆರಿಯಂಟ್, ಅಲಾಯ್ ವೀಲ್, ನೂತನ ಗ್ರಾಫಿಕ್ಸ್ ಹಾಗೂ ಪರಿಷ್ಕೃತ ಹೆಡ್‌ಲೈಟ್ ಕಾಣಸಿಗಬಹುದು.
ಹಿಂದೊಮ್ಮ ಎಲ್‌ಎಂಎಲ್ ಜತೆ ಪಾಲುದಾರಿಕೆ ಹೊಂದಿದ್ದ ಇಟಲಿ ಮೂಲದ ಪಿಯಾಜಿಯೊ ಆ ಬಳಿಕ ದೇಶದಲ್ಲಿ ತನ್ನದೇ ಆದ ಅಸ್ತಿತ್ವ ಕಂಡುಕೊಂಡಿತ್ತು. ಮತ್ತೊಂದೆಡೆ ಎಲ್‌ಎಂಎಲ್ ದೇಶದ ಅಗ್ರಪಂಕ್ತಿಯಲ್ಲಿರುವ ಹೀರೊ, ಹೋಂಡಾ, ಬಜಾಜ್ ಹಾಗೂ ಟಿವಿಎಸ್‌ಗಿಂತಲೂ ಹಿನ್ನಡೆ ಅನುಭವಿಸುವಂತಾಗಿತ್ತು.


Click it and Unblock the Notifications
